ಬಹುಕಾಲದ ನಂತರ ಸೇರುತ್ತಿರುವ ಪ್ರೇಮಿಗಳ ಕತೆಗಳು. ಅವಳು ಇತ್ತೀಚೆಗೆ ಓದಿದ ಇಂಗ್ಲಿಶ್ ಕಾದಂಬರಿಗಳಲ್ಲಿನ ಕತೆಗಳು. ಅವರು ಆ ಕತೆಗಳನ್ನು ಹೇಳುವ ರೀತಿ ಅವಳಿಗೆ ತುಂಬ ಇಷ್ಟ. ಅವು ಅವಳೋದಿದ ಎಷ್ಟೋ ಹಳೆಯ ಕತೆ ಕಾದಂಬರಿಗಳಿಗಿಂತ ಬಹಳ ಭಿನ್ನ. ಅವಳಿಗೆ ಪ್ರೇಮಿಗಳ ಪ್ರಲಾಪಗಳು, ಹಲುಬುವಿಕೆ, ಉದ್ದುದ್ದ ಭಾಷಣಗಳು ಜಿಗುಪ್ಸೆ ಹುಟ್ಟಿಸುತ್ತದೆ; ಕೃತಕ ಅನ್ನಿಸುತ್ತದೆ. ಇವು ಹಾಗಲ್ಲ. ಪ್ರೇಮಿಗಳು ಪ್ರೇಮಿಸುತ್ತಾರೆ, ಮತ್ತೇನಿಲ್ಲ. ಪ್ರಶ್ನೆಗಳ ಹಂಗಿಲ್ಲ; ವಿವರಣೆಗಳು ಬೇಕಿಲ್ಲ; ಹೆಚ್ಚು ಮಾತಿಗೂ ಅವಕಾಶವಿಲ್ಲ. ದೀರ್ಘಕಾಲದ ವಿರಹದ ನೋವನ್ನು ಮರೆಸುವಂಥ ಮಿಲನದ ಈ [...]
Archive for February, 2008
ಖಯಾಲ್: ಪ್ರೇಮ, ಕತೆಗಳು
Posted in ಕತೆ, ಖಯಾಲ್, ಗುಂಗು, tagged ಪ್ರೇಮ on February 22, 2008 | 6 Comments »
ತಲೆಮರೆಸಿಕೊಳ್ಳುವ ಕಲೆ
Posted in translation, ಪದ್ಯ, tagged ಅನುವಾದ on February 22, 2008 | 4 Comments »
ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.
’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.
ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.
ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.
ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.
ಕಿರಾಣಿ ಅಂಗಡಿಯಲ್ಲಿ [...]
ಮುಸ್ಸಂಜೆಯ ನನ್ನ ಬಾನಿನಲಿ
Posted in translation, ಪದ್ಯ, tagged ಮುಸ್ಸಂಜೆ, neruda, pablo, Tagore, valentine's day on February 14, 2008 | 2 Comments »
Valentine’s Day ಆದ್ದರಿಂದ ಪ್ರೀತಿಯ ಬಗ್ಗೆ ಏನಾದರೂ ಬರೆಯಲೇಬೇಕಲ್ಲವೆ? ಒಳ್ಳೆಯ ಪದ್ಯ ಬರೆಯುವ ಕುವ್ವತ್ತಿಲ್ಲದಿದ್ದರೆ ಹೋಗಲಿ, ಯಾವುದಾದರೂ ಒಳ್ಳೆಯ ಪದ್ಯವನ್ನು ಅನುವಾದಿಸಲೇಬೇಕು ಎಂದು ನಿನ್ನೆ ರಾತ್ರಿ ಕುಳಿತೆ. ಯಾವ ಪದ್ಯ? ಯಾರ ಪದ್ಯ? ಯಾರ ಪದ್ಯ ಎಂಬ ಸಮಸ್ಯೆ ತಕ್ಷಣದಲ್ಲಿ ಬಗೆ ಹರಿಯಿತು. ನೆರೂಡನ ಪದ್ಯಗಳನ್ನು ಅನುವಾದಿಸಬೇಕೆಂಬುದು ಮೊದಲಿನಿಂದಲೂ ಇದ್ದ ಬಯಕೆ. ನನ್ನಲ್ಲಿರುವ ನೆರೂಡನ ಪದ್ಯಗಳನ್ನು ತಿರುವಿಹಾಕುತ್ತ ಒಂದನ್ನು ಆರಿಸಿಕೊಂಡೆ. ಪದ್ಯದ ಸಣ್ಣ ಗಾತ್ರವೂ ನನ್ನನ್ನು ಹುರಿದುಂಬಿಸಿತು. ಒಂದರ್ಧ ಮುಗಿಸಿದಾಗ ಆ ಪದ್ಯದ ಬಗ್ಗೆ ಏನೋ ಹುಡುಕತೊಡಗಿದೆ. [...]
ಶಬ್ದಮಾಲಿನ್ಯ
Posted in ಖಯಾಲ್, ಪದ್ಯ, tagged ಶಬ್ದಗಳು on February 11, 2008 | No Comments »
ಸವಿಯಾದ ತಿಂಡಿಯನ್ನು ತಿನ್ನುವಾಗ ಸಣ್ಣ ಹರಳೊಂದು ಸಿಕ್ಕಂತೆ, ರವಿವಾರದ ರಸ್ತೆಗಳಲ್ಲಿ ಸುಖದಿಂದ ತೇಲುವಾಗ ರಸ್ತೆಗುಬುಟಿಯೊಂದು ತಡೆದಂತೆ, ಸೊಗಸಾದ ಪದ್ಯವೋದುವಾಗ ಒಮ್ಮೊಮ್ಮೆ ಶಬ್ದಗಳು ಅಡ್ದ ಬರುತ್ತವೆ.
[...] peace, like a poem,
is not there ahead of itself,
can’t be imagined before it is made,
can’t be known except
in the words of its making,
grammar of justice,
syntax of mutual aid.
[...]
ಪದ್ಯದಂತೆ ಶಾಂತಿ. ಹೀಗೆ ಹೇಳುತ್ತ ಶುರುವಾಗುವ ಈ ಪದ್ಯ ಆ ಪ್ರತಿಮೆಯನ್ನು ಬೆಳೆಸಿಕೊಂಡು [...]
ಇರುವುದರ ತುಡಿತ, ಇರದುದರ ಸೆಳೆತ
Posted in ತುಡಿತ, ಮೆಲುಕುಗಳು, ವಿಚಾರ, ಸೆಳೆತ on February 10, 2008 | No Comments »
ಮನಸಿನ ರೀತಿಯೇ ವಿಚಿತ್ರ. ಅದು ನಮ್ಮ ವಿಚಾರ ಮಾಡುವ ಪ್ರಕ್ರಿಯೆಯನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡಿ, ನಮ್ಮ ಒಳ ಅರಿವಿನ ವಿರುದ್ಧ ಸಂಚು ಹೂಡಿದಂತೆ ತೋರುತ್ತದೆ. ಕೆಲವೊಮ್ಮೆ ತೀರಾ ವಿದಿತವಾದ ಸಂಗತಿಗಳನ್ನು ಒರೆಗೆ ಹಚ್ಚಿ ಅವುಗಳ ಬಗ್ಗೆ ಪಕ್ಕಾ ನಿರ್ಧಾರಗಳನ್ನು ತಳೆಯುವ ತನಕ ನಮ್ಮನ್ನು ಕಾಡುತ್ತದೆ. ಇನ್ನು ಕೆಲವು ಸಲ ನಮಗೆ ಅಸ್ಪಷ್ಟವಾದ ಸಂಗತಿಗಳ ಬಗ್ಗೆ ಕ್ಷಣಾರ್ಧದಲ್ಲಿ ನಾವು ಪೂರ್ಣ ಸ್ಥೈರ್ಯದಿಂದ ಸಮೀಪದೃಷ್ಟಿಯ ತೀರ್ಪುಗಳನ್ನು ಕೊಡುವಂತೆ ಮಾಡುತ್ತದೆ. ಯಾವುದು intuitive, ಯಾವುದು counterintuitive ಎಂಬುದೇ ತಿಳಿಯದಂತಾಗುತ್ತದೆ.
***
ಅಮೇರಿಕಾ ಯಾತ್ರೆಯನ್ನು [...]
ಅಂಕಿಗಳಾಟ
Posted in ನಗರಗಳು, ಮೆಲುಕುಗಳು, tagged ಆಟ, ನಗರಗಳು, ಮೆಲುಕುಗಳು on February 6, 2008 | 2 Comments »
ನಾವು ಚಿಕ್ಕವರೂ ಮೂರ್ಖರೂ ಇದ್ದಾಗ — ಈಗಲೂ ನಾವು ಮೂರ್ಖರಾಗಿಯೇ ಉಳಿದಿದ್ದೇವೆ, ಚಿಕ್ಕವರಾಗಿ ಉಳಿದಿಲ್ಲವಷ್ಟೇ — ಒಂದು ಅಸಾಮಾನ್ಯ ಹೊರಾಂಗಣ ಆಟ ಆಡುತ್ತಿದ್ದೆವು. ಆಟ ಅನ್ನುವುದಕ್ಕಿಂತ ಅದನ್ನು ಚಾಳಿಯೆಂದರೆ ಸರಿಯೇನೋ. ಒಟ್ಟಾರೆ ಆ ಆಟ ಯಾರೋ ಒಬ್ಬರಲ್ಲಿ spontaneous ಆಗಿ ಅವಿರ್ಭವಿಸಿ, ಕ್ಷಣಾರ್ಧದಲ್ಲಿ ಎಲ್ಲರಲ್ಲೂ ಹಬ್ಬುತ್ತಿತ್ತು. ಹೆಚ್ಚಾಗಿ ಅದು ನಾವೆಲ್ಲರೂ ಕೂಡಿ ಮನೆಯ ಯಾವುದೋ ಸಣ್ಣ ಕೆಲಸದಿಂದ ಅಂಗಡಿಗೋ ಮತ್ತೆಲ್ಲಿಗೋ ಹೋಗುವಾಗ ಶುರುವಾಗಿ ಕೆಲಸದ ಜೊತೆಗೇ ಸಾಗುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಹಾದು ಹೋದ ವಾಹನವೊಂದರ ನೋಂದಣಿ ಸಂಖ್ಯೆಯಲ್ಲಿ [...]
ಬಿಳಿ ಮಣ್ಣು
Posted in ಖಯಾಲ್, ಪದ್ಯ, ಮೆಲುಕುಗಳು on February 1, 2008 | 1 Comment »
ನನ್ನ ಕೋಣೆಯ ಕಿಟಕಿಯಿಂದ laptopನ webcamನಿಂದ ತೆಗೆದ ಫೋಟೊಗಳಿವು. Laptop ಎತ್ತಿ ಹಿಡಿದು ಹೇಗೆ ಹೇಗೋ ತೆಗೆದದ್ದು. Camera ಇಲ್ಲದ್ದಕ್ಕೆ ಈ ಸರ್ಕಸ್.
ಅದಿರಲಿ. ಮುಖ್ಯವಾದ ವಿಷಯವೆಂದರೆ ಹಿಮ. ಕರುನಾಡಿನಿಂದ ಬಂದವನು ನಾನು. ನಮ್ಮದು ಕಪ್ಪು ಮಣ್ಣಿನ ನಾಡು — ಎಂದೆಲ್ಲ ಓದಿದ್ದೆ ಶಾಲೆಯಲ್ಲಿ. ಕರಿ ಮಣ್ಣಂತೂ ಸರಿಯೇ ಸರಿ. ನಮ್ಮೂರಲ್ಲೂ ಬೇಕಾದಷ್ಟು ಕರಿಮಣ್ಣಿನ್ನು ಕಂಡವನೇ ನಾನು. ಹತ್ತಿ ಬೆಳೆಯಲು ಉತ್ತಮ ಮಣ್ಣದು. ಜೊತೆಗೆ ಕೆಂಪು ಧೂಳು ಮಣ್ಣು, ಉಸುಕುಸುಕಾದ ಮಸಾರಿ, ಕೆಂದು ಬಣ್ಣದ ಸಣ್ಣ ಸಣ್ಣ ಕಲ್ಲುಗಳ [...]