ಮನಕ್ಕೆ ನೆನಹಾಗಿ…

ಬೆಳಕೆ

Posted in ಪದ್ಯ, ಹಳೆ ಪದ್ಯ by ಸಂಕೇತ on April 11, 2009

image135

ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ

ಧ್ಯಾನಸ್ತ ಅಲ್ಲಮನೆ?

ಪ್ರಶಾಂತ
ಅಭಯಂಕರ
ಶಿವನೆ?

ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ

ಈ ಫ಼ೋಟೊ ಯಾವುದೋ ಕಾಲದಲ್ಲಿ ನನ್ನ ಸಂಚಾರಿ ಫ಼ೋನಿನಲ್ಲಿ ಹೇಗೋ ಸೇರಿಕೊಂಡಿತ್ತು. ಇದು ಏನೆಂದು ಗೊತ್ತಿಲ್ಲ. ಏನೋ ಮಾಡಲು ಹೋದಾಗ ಆನುಷಂಗಿಕವಾಗಿ ಸೆರೆಯಾಗಿರಲಿಕ್ಕೆ ಸಾಕು. ಆದರೆ ಅದನ್ನು ನೋಡಿ ನನಗ ಏನೇನೋ ಅನ್ನಿಸಿತ್ತು. ಅದು ಈ ಪದ್ಯವಾಗಿ ಪರಿಣಮಿಸಿತ್ತು. ಬಹಳ ಮೊದಲೊಮ್ಮೆ ಈ ಬ್ಲಾಗಿನಲ್ಲಿ ಇದನ್ನು ಹಾಕಿದ್ದೆ. ಯಾಕೋ ಇದು ನೆನಪಾಗಿದ್ದಕ್ಕೂ ನನಗೆ ಸದ್ಯಕ್ಕೆ ಬರೆಯುವ ಲಹರಿಯಿಲ್ಲದಿರುವುದಕ್ಕೂ, ಒಟ್ಟು ಇದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ.