Posted in ಟಾಯಂಪಾಸ್, ಸುಮ್ಮನೆ, ಹರಟೆ on May 29, 2008 | 7 Comments »
ನಮ್ಮ ಗೋಕಾಂವಿ ನಾಡಿನಲ್ಲಿ ವ್ಯಂಜನಗಳ ಬಳಕೆ ಕಡಿಮೆ. ಊಟದಲ್ಲಲ್ಲ. ಊಟದಲ್ಲಿ ನಾನಾ ನಮನಿ ವ್ಯಂಜನಗಳನ್ನೂ, ಸಾದನಿಗಳನ್ನು (ಸಾಧನ ಸಲಕರಣೆಗಳನ್ನೂ) ಪುರಮಾಶಿ ಕಟಿಯುತ್ತೇವೆ. ನಾನು ಹೇಳುತ್ತಿರುವುದು ಮಾತಿನಲ್ಲಿ ಹಾಗೂ ಬರೆಹದಲ್ಲಿ: ದಕ್ಷಿಣಾದಿಗಳಂತೆ ನಾವು ಶಬ್ದಗಳ ಕೊನೆಯ ಅಕ್ಷರಗಳನ್ನು ವ್ಯಂಜನ ಮಾಡುವುದಿಲ್ಲ. ’ಅ’ ಎಂಬ ಸ್ವರವನ್ನು ಕೂಡಿಸಿ ಪೂರ್ತಿ ಮಾಡುತ್ತೇವೆ. ಉದಾಹರಣೆಗೆ, ಬಿಟ್ಟರೆ ನೀವು ದಕ್ಷಿಣಾದಿಗಳು ಈ ಬ್ಲಾಗಿನ ಲೇಖಕನನ್ನು ’ಚಕೋರ್’ ಎಂದು ಮುಗಿಸುತ್ತೀರಿ; ಅದಕ್ಕೆ ಸ್ಪಷ್ಟವಾಗಿ ’ಚಕೋರ’ ಎಂದು ಬರೆಯಬೇಕಾಗುತ್ತದೆ. ಹಾಗೆಯೇ ಅಶೋಕ, ರಮೇಶ, ಸುರೇಶ, ಪ್ರಹ್ಲಾದ ಇತ್ಯಾದಿ. [...]
Read Full Post »
Posted in ಟಾಯಂಪಾಸ್, ಸುಮ್ಮನೆ, ಹರಟೆ on May 25, 2008 | No Comments »
ಇತ್ತೀಚೆಗೆ ಬ್ರಿಟಿಶ್ ಕಾಮೆಡಿಯ ಬಗ್ಗೆ ಮಾತಾಡಿದೆವಲ್ಲ. ಒಂದು ರೀತಿಯಲ್ಲಿ “ಪೈಥನೆಸ್ಕ್” ಎಂದು ಹೇಳಬಹುದಾದ ಸಣ್ಣ ಸಣ್ಣ ಸ್ಕೆಚ್‍ಗಳನ್ನು ನಮ್ಮವರೇ ಆದ ಹರೀಶ್ ಕುಮಾರ್ ಎನ್ ಹಾಗೂ ಅವರ ಗೆಳೆಯರು ಮಾಡಿದ್ದಾರೆ. ಅವರ ಲೀಲೆಗಳನ್ನು ಯೂಟ್ಯೂಬ್‍ನಲ್ಲಿ ಇಲ್ಲಿ ನೋಡಬಹುದು. ಪೈಥನೆಸ್ಕ್ ಎಂದು ಹೇಳಿದೆನಲ್ಲ. ಇವು ಗುಣಮಟ್ಟದಲ್ಲಿ ಅಲ್ಲದಿದ್ದರೂ ಶೈಲಿಯಲ್ಲಿ ಆ ನುಡಿಯನ್ನು ಹೋಲುತ್ತವೆ. ಒಂದಷ್ಟು ಚುರುಕಾಗಿವೆ ಕೂಡ. ಉದಾಹರಣೆಗೆ: ಅನಂತಮೂರ್ತಿ ಹಾಗೂ ಕಪ್ಪಣ್ಣ, ಭಾರತರತ್ನ ಯಾರಿಗೆ ಕೊಡಬೇಕು ಎಂದು ಚರ್ಚಿಸುತ್ತಾರೆ; ಅನಂತಮೂರ್ತಿ, ಮೊಟ್ಟಮೊದಲಿಗೆ ಅಕ್ಬರನಿಗೆ ಭಾರತರತ್ನ ಕೊಟ್ಟು ನಂತರ [...]
Read Full Post »
Posted in ಟಾಯಂಪಾಸ್, ಸುಮ್ಮನೆ, ಹರಟೆ on May 20, 2008 | 8 Comments »
ಒಂದು ಬೆಳಿಗ್ಗೆ, ತಲ್ಲಣಭರಿತ ಕನಸುಗಳಿಂದ ಎಚ್ಚರ ತಿಳಿದು ಎದ್ದ ಗ್ರೆಗೊರಿ ಸಾಂಸ ಸ್ಯಾಂಸಾ (ಟೀನಾ ಅಕ್ಕೋರ್ತಿಯ ಆರ್ಡರದ ಮೇರೆಗೆ), ಹಾಸಿಗೆಯಲ್ಲಿ ತಾನೊಂದು ದೈತ್ಯ, ಅಸಹ್ಯಕರ ಕೀಟವಾಗಿ ಬದಲಾದದ್ದನ್ನು ಕಂಡುಕೊಂಡ.
ಉಮ್.. ಬೇಡ, ಕಾಫ಼್ಕನ ಕತೆಯ ಅವಶ್ಯವಿಲ್ಲ. ನನ್ನದೇ kafkaesque ಕತೆಯಿರುವಾಗ, ನನ್ನದೇ ಮೆಟಮಾರ್ಫ಼ಸಿಸ್‍ನ ತಲ್ಲಣಭರಿತ ಸತ್ಯವಿರುವಾಗ, ಅನಗತ್ಯ ಫ಼್ಯಾಂಟಸಿಯ ಹಂಗು ಬೇಕಿಲ್ಲ. ಈ ಘೋರ ಕತೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ. ಆದರೂ ಅಳ್ಳೆದೆಯವರು ಇದನ್ನು ಓದಲು ಹೋಗಬೇಡಿರೆಂದು ವಿನಂತಿ.
ಸಣ್ಣಸಣ್ಣ ಅಪಘಾತಗಳು ನಮ್ಮೆಲ್ಲದ ದೈನಂದಿನ ಬದುಕಿನಲ್ಲಿ ಸಂಭವಿಸುತ್ತಲೇ ಇರುತ್ತವೆ. ಅವಕ್ಕೆ ಅಂಥ [...]
Read Full Post »
ಇತ್ತೀಚಿನ ದಿನಗಳಲ್ಲಿ ನನಗೆ ಬೋರಾದಾಗಲೆಲ್ಲ ಅಥವಾ ಖಾಲಿ ಇದ್ದಾಗೆಲ್ಲಾ (ಇರುವ ಕೆಲಸಗಳನ್ನೆಲ್ಲ ಮುಂದುಹಾಕುತ್ತ ಹೋಗುವ ನಾನು ಯಾವಾಗಲೂ ಖಾಲಿಯೇ), ಟಾಯಂಪಾಸ್‍ಗಾಗಿ ಅವಲಂಬಿಸಿರುವುದು ಬ್ರಿಟಿಶ್ ಕಾಮೆಡಿಗಳನ್ನು. ಮುಖ್ಯವಾಗಿ ’ಯೆಸ್ ಮಿನಿಸ್ಟರ್’ ಹಾಗೂ ’ಮಾಂಟಿ ಪೈಥನ್’. ಯೆಸ್ ಮಿನಿಸ್ಟರ್‌ನ ಒಂದಷ್ಟು ಎಪಿಸೋಡ್‍ಗಳು ಆನ್‍ಲೈನ್ ಇವೆ. ಮತ್ತೆ ಯೂಟ್ಯೂಬ್‍ನಲ್ಲಿ ಒಂದಷ್ಟು ತುಣುಕುಗಳಿವೆ. ಮಾಂಟಿ ಪೈಥನ್ನರೂ ಯೂಟ್ಯೂಬ್‍ನಲ್ಲಿ ಅನೇಕ ತುಣುಕುಗಳಾಗಿ ಸಿಗುತ್ತಾರೆ. ಪದೇ ಪದೇ ನೋಡಿದರೂ ಬೇಜಾರಾಗದ ಅದ್ಭುತ ಕಾಮಿಕ್ ಗುಣಗಳಿವೆ ಈ ಕೃತಿಗಳಲ್ಲಿ.
೧೯೮೦-೮೪ರ ನಡುವೆ ಯೆಸ್ ಮಿನಿಸ್ಟರ್ ಹಾಗೂ ೧೯೮೬-೮೮ರ ನಡುವೆ [...]
Read Full Post »
Posted in ಟಾಯಂಪಾಸ್, ಸುಮ್ಮನೆ, ಹರಟೆ on May 12, 2008 | 11 Comments »
ಇಲ್ಲೆಲ್ಲೋ ಇರುವ ಅವಳ ಕಸಿನ್ ಹಾಗೂ ಕಸಿನ್ನಳ ಗಂಡನ ಜೋಡಿ ಮಾತಾಡು ಅಂತ ಎಸ್ ಭಾಳ ದಿನದಿಂದ ಗಂಟುಬಿದ್ದಿದ್ದಳು. ತೀರಾ ಆಪ್ತರ ಜೋಡಿ ಸೈತ ಫೋನಿನಲ್ಲಿ ಮಾತಾಡುವುದೆಂದರೆ ನನಗೆ ಭಯಂಕರ ಸಂತೋಷದ ಸಂಗತಿ ಅಲ್ಲ. ಹಿಂತಾದರಾಗ ಯಾವುದೇ ಗುರುತು ಪರಿಚಯವಿಲ್ಲದವರ ಜೋಡಿ ನಾನು ಮಾತಾಡಿಯೇನೆ? ಈ-ಮೇಲ್‍ನಲ್ಲಿ ಕೆಲಸ ಮುಗಿಸಿ, ’ಓಹೋ ತಮಗೆ ಅವಶ್ಯ ಫೋನು ಮಾಡುತ್ತೇನೆ,’ ಇತ್ಯಾದಿ ದೇಶಾವರಿ ಬರೆದು ಕೈತೊಳಕೊಂಡಿದ್ದೆ. ಆದರೆ ಇವೆಲ್ಲ ಇಷ್ಟು ಸುಲಭವಾಗಿ ಬಗೆಹರಿಯುವಂಥ ವಿಷಯಗಳೇ ಅಲ್ಲ. ಆ ಕಸಿನ್ನಳು ನನಗೆ ಫೋನು [...]
Read Full Post »
Posted in ಟಾಯಂಪಾಸ್ on April 27, 2008 | No Comments »
ಐಪಿಎಲ್ ಎಂಬ ನವ ಕ್ರಾಂತಿಯಿಂದ ದೇಶವಿದೇಶಗಳ ಶ್ರೇಷ್ಠ ಆಟಗಾರರೆಲ್ಲ ಒಟ್ಟಿಗೆ ಸೇರಿ ಅವರ ಸಂಬಂಧಗಳು ಉತ್ತಮಗೊಳ್ಳುತ್ತವೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ, ಹೊಂದಾಣಿಕೆ ಹೆಚ್ಚಾಗುತ್ತದೆ… ಹೀಗೆ ಎಲ್ಲರೂ ಹೇಳಿಯೇ ಹೇಳುತ್ತಿದ್ದಾರೆ. ಅದೇನೋ ಗೊತ್ತಿಲ್ಲ. ಇದ್ದರೂ ಇರಬಹುದು. ಆದರೆ ಅದೇ ಐಪಿಎಲ್‍ನ ದೆಸೆಯಿಂದ ನಮ್ಮ ಆಟಗಾರರು ಕಡಿದಾಡುತ್ತಿದ್ದಾರಲ್ಲ! ಒಳ್ಳೆಯ ಪ್ರಹಸನ. ಹೆಹ್…
Read Full Post »
Posted in ಟಾಯಂಪಾಸ್, ಸುಮ್ಮನೆ, ಹರಟೆ on April 21, 2008 | 3 Comments »
ಅಂತೂ ಪಟ್ಟುಹಿಡಿದು ಕೂತು (ಕೂತು? ಅಥವಾ ಅಡ್ಡಾಗಿ, ಅಥವಾ ವಿಚಿತ್ರ ಭಂಗಿಗಳಲ್ಲಿ ಒರಗಿ) ಬಹಳ ದಿನದಿಂದ ಓದುತ್ತಿದ್ದ ಪುಸ್ತಕದ ಉಳಿದ ಭಾಗವನ್ನು ಮುಗಿಸಿದೆ. ಮೈ ನೇಮ್ ಈಸ್ ರೆಡ್. ಯಾಕೋ ಓದುವುದೇ ಕಷ್ಟವಾಗುತ್ತಿದೆ. ಬಹಳ ಹೊತ್ತು ಏಕಾಗ್ರತೆಯಿಂದ ಏನನ್ನು ಮಾಡುವುದೂ ಕಷ್ಟವಾಗುತ್ತಿದೆಯೇನೋ ಅನ್ನಿಸುತ್ತೆ. ವಯಸ್ಸಾಯಿತೇನೋ!
ಅದೂ ಅಲ್ಲದೇ ಬಹಳ ಪುಸ್ತಕಗಳ ವಿನ್ಯಾಸವೇ ಅನನುಕೂಲಕರವಾಗಿರುತ್ತದೆ. ಅಗಲ ಹೆಚ್ಚಿದ್ದು ದಪ್ಪ ಕಡಿಮೆಯಿದ್ದರೆ ಪಟಕ್ಕನೆ ಮಡಚಿಕೊಳ್ಳುತ್ತವೆ. ಹೀಗಾಗಿ ಅಡ್ಡಾಗಿ ಓದಲಾಗುವುದಿಲ್ಲ. ಆದರೆ ಅವು ಟೇಬಲ್ಲಿನ ಮೇಲೆ ಇಟ್ಟು ಓದಲು ಅನುಕೂಲ. ಹಾಗೆಯೇ ಆರಾಮ [...]
Read Full Post »
ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ [...]
Read Full Post »
Posted in ಗುಂಗು, ಟಾಯಂಪಾಸ್, ತುಡಿತ, ಸುಮ್ಮನೆ on March 13, 2008 | 5 Comments »
ಈ ಸಾಲಿನ ಕೆಳಗಿನದನ್ನು ಓದಬೇಡಿ.
ನಾನು ಈ ಬ್ಲಾಗುಗಳ ಲೋಕಕ್ಕೆ ಕಾಲಿರಿಸಿ ಕಂಡಾಪಟ್ಟೆ ದಿನಗಳಾಗಿವೆ. ೨೦೦೪ರ ಜುಲೈ ೩೧ರ ತೇದಿಯಂದು ನನ್ನ ಮೊದಲನೆಯ ಬ್ಲಾಗಿನ ಮೊದಲನೆಯ “ಹಲೋ ವರ್ಲ್ಡ” ಆಯ್ತು. ಏನೇನೋ ಬರೆದೆ. ಒಂದಷ್ಟು ಚೆನ್ನಾಗಿತ್ತು, ಒಂದಷ್ಟು ಕೆಟ್ಟದಾಗಿತ್ತು. ನಂತರ ಮತ್ತೊಂದು ಬ್ಲಾಗು. ಮತ್ತೊಂದು. ಮತ್ತೊಂದು. ಆಮೇಲೆ ಬ್ಲಾಗುಗಳನ್ನು finis ಮಾಡುತ್ತಲೂ ಬಂದೆ. ಇಂಗ್ಲಿಶ್, ಕನ್ನಡ, ಮಿಶ್ರಿತ… ಎಲ್ಲವೂ. ಕಾರಣವಿಲ್ಲದೆ ಶುರು ಮಾಡಿದ ಬ್ಲಾಗುಗಳನ್ನು ಏನೋ ಕಾರಣ ಕೊಟ್ಟುಕೊಂಡು ಬಂದು ಮಾಡಿದೆ. (ಓದುಗರಿಲ್ಲದ್ದು ಕಾರಣವಲ್ಲ.) ಅಥವಾ ಅಲ್ಲಿ ಏನೂ [...]
Read Full Post »
Posted in ಟಾಯಂಪಾಸ್, ಸುಮ್ಮನೆ, ಹರಟೆ on March 7, 2008 | 2 Comments »
ಶಿವರಾತ್ರಿ, ಕೃಷ್ಣ ಜನ್ಮಾಷ್ಟಮಿಗಳ (ಹಾಗೂ ಶೈವ, ವೈಷ್ಣವರ) ಬಗ್ಗೆ ನಮ್ಮಲ್ಲೊಂದು ಹಳೆಯ ಜೋಕ್ ಇದೆ. ಶಿವರಾತ್ರಿಯ ದಿನ ಶೈವರು ಉಪವಾಸ ಮಾಡುತ್ತಾರೆ. ಆದರೆ ವೈಷ್ಣವರು ಪುಷ್ಕಳವಾಗಿ ಹೋಳಿಗಿ ಹೊಡೆಯುತ್ತಾರೆ. ಅದಕ್ಕೆ ವೈಷ್ಣವರ ವಿವರಣೆ - “ಅಲ್ಲರೀ, ಶಿವ ಹುಟ್ಟಿದ್ದು ನಮಗ ಸಂತೋಷ ಅಲ್ಲೇನು? ಅದಕ್ಕ ಹೋಳಿಗಿ ತಿಂದು ಅಚರಿಸತೀವಿ.” ಅದಕ್ಕೆ ಶೈವನೊಬ್ಬ ಹೊಳ್ಳಿ - “ಮಕ್ಕಳ್ರ್ಯಾ, ಹಂಗಾರ ಕೃಷ್ಣ ಹುಟ್ಟಿದ್ದಕ್ಕ ನಿಮಗ ದುಃಖ ಆಗಿರತದೇನು? ಅವತ್ತ್ಯಾಕ ಉಪವಾಸ ಮಾಡತೀರಿ?”, ಅಂದು ಮುಯ್ಯಿ ತೀರಿಸಿಗೊಂಡನಂತೆ.
ಹೀಗೆ ಇದನ್ನು ನೆನೆಯುತ್ತ ಗೆಳೆಯ [...]
Read Full Post »