ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು [...]
Read Full Post »
Posted in Economics, philosophy, ಅನುಭವ, ನಗರಗಳು, ಮೆಲುಕುಗಳು, ವಿಚಾರ, ವಿಡಂಬನೆ, ಸುಮ್ಮನೆ, tagged semi-serious, spirituality on May 27, 2008 | 14 Comments »
(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)
ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು [...]
Read Full Post »
ಒಂದು ಸಣ್ಣ ಪ್ರಯೋಗ ಮಾಡೋಣ. ಒಂದು ವೈಚಾರಿಕ ಪ್ರಯೋಗ (thought experiment) ಎಂದಿಟ್ಟುಕೊಳ್ಳಿ ಬೇಕಿದ್ದರೆ. ನಿಮ್ಮ ಮನಸ್ಸಿನಲ್ಲೆ ನಿಮ್ಮ ಗೆಳೆಯ/ಗೆಳತಿಯರು ಮತ್ತು/ಅಥವಾ ಪರಿಚಿತರನ್ನು ನೆನೆಸಿಕೊಳ್ಳಿ; ಬಂಧುಗಳು ಬೇಡ. ಹಾಗೆ ನೆನೆಸಿಕೊಳ್ಳುತ್ತಲೇ ಅವರನ್ನು ನಾನು ಹೇಳಲಿರುವ ಹಾಗೆ ವಿಂಗಡಿಸಿ (ಒಬ್ಬ ವ್ಯಕ್ತಿಯನ್ನು ಒಂದೇ ಕೆಟಗರಿಗೆ ಹಾಕಿ): ನಿಮ್ಮ ಮನೆಯ ಸುತ್ತಮುತ್ತಲಲ್ಲಿರುವವರು ಹಾಗೂ ನಿಮ್ಮ ಮನೆಗೆ ಹತ್ತಿರ ಇರುವವರು; ಉಳಿದಂತೆ ನಿಮ್ಮ ಏರಿಯಾದಲ್ಲಿರುವವರು; ನೀವಿರುವ ಏರಿಯಾ ಬಿಟ್ಟು ನೀವಿರುವ ನಗರದಲ್ಲಿ ಎಲ್ಲಿಯಾದರೂ ಇರುವವರು; ಭಾರತದ ಉಳಿದೆಲ್ಲ ನಗರದಲ್ಲಿರುವವರು; ಭಾರತ [...]
Read Full Post »
Posted in ಅನುಭವ, ನಗರಗಳು, ವಿಚಾರ on April 29, 2008 | 7 Comments »
ಇದು ದ ನ್ಯೂ ಯಾರ್ಕರ್ ಪತ್ರಿಕೆಯ ಮಾರ್ಚ್ ೨೯, ೧೯೭೬ರ ಕವರ್ ಪೇಜ್. ಕಲಾವಿದ, ಅದೇ ಪತ್ರಿಕೆಯ ಕಾರ್ಟೂನಿಸ್ಟ್ ಸಾಲ್ ಸ್ಟೈನ್‍ಬರ್ಗ್. ಅತ್ಯಂತ ಪ್ರಸಿದ್ಧ ಚಿತ್ರವಾಗಿರುವ ಇದು “View of the World from 9th Avenue” ಅಥವಾ “A New Yorker’s View of the World” ಎಂದು ಕರೆಯಲ್ಪಡುತ್ತದೆ. ಇದು ನನಗೆ ತುಂಬಾ ಇಷ್ಟವಾಗುವ illustration ಕೂಡ. ಇಲ್ಲಿ ಉಲ್ಲೇಖಿಸಿರುವ ೯ನೇ ಅವೆನ್ಯು, ನ್ಯೂ ಯಾರ್ಕ್‍ನ ಮ್ಯಾನ್‍ಹ್ಯಾಟನ್‍ನಲ್ಲಿದೆ. ನ್ಯೂ ಯಾರ್ಕಿಗರ world view ಎಷ್ಟು [...]
Read Full Post »
ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ [...]
Read Full Post »
Posted in ನಗರಗಳು, ವಿಚಾರ on March 25, 2008 | 3 Comments »
’ಏನು ಮಾಡಬಹುದು’ ಎಂದು ಕೇಳಿದ್ದಾರೆ ಟೀನಾ. ಒಂದಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅವರೆಲ್ಲ ಮಾತಾಡಿ ಸುಮ್ಮನಾಗದೆ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದಾರೆ. ಬಹುಶ: ಅವರ brainstorming sessionನ ನಂತರ ಆ ಪ್ರಶ್ನೆಗೆ ಇನ್ನಷ್ಟು ಉತ್ತರಗಳು ಸಿಗಬಹುದು.
ಈ ವಿಷಯದಲ್ಲಿ ನನಗೆ ನೇರ ಅನುಭವವಂತೂ ಇಲ್ಲ. ನನ್ನ girlfriend (ಅವಳನ್ನು S ಎಂದು ಕರೆಯೋಣ) ಒಮ್ಮೊಮ್ಮೆ ಅವಳಿಗಾದ ಇಂಥ ಅನುಭವಗಳನ್ನು ಹೇಳುತ್ತಾಳೆ. ಆದರೆ ಅದೃಷ್ಟವಶಾತ್, ಆಫೀಸಿಗೆ ಹೋಗಿ ಬರುವುದು ಕ್ಯಾಬಿನಲ್ಲಿ, ಮತ್ತು ಉಳಿದ ಹೊತ್ತು ಹೆಚ್ಚಾಗಿ ಅವಳು ಒಬ್ಬಳೆ ದೂರದೂರ ಓಡಾಡುವ ಪ್ರಸಂಗಗಳು [...]
Read Full Post »
Posted in ನಗರಗಳು, ಮೆಲುಕುಗಳು, tagged ಆಟ, ನಗರಗಳು, ಮೆಲುಕುಗಳು on February 6, 2008 | 2 Comments »
ನಾವು ಚಿಕ್ಕವರೂ ಮೂರ್ಖರೂ ಇದ್ದಾಗ — ಈಗಲೂ ನಾವು ಮೂರ್ಖರಾಗಿಯೇ ಉಳಿದಿದ್ದೇವೆ, ಚಿಕ್ಕವರಾಗಿ ಉಳಿದಿಲ್ಲವಷ್ಟೇ — ಒಂದು ಅಸಾಮಾನ್ಯ ಹೊರಾಂಗಣ ಆಟ ಆಡುತ್ತಿದ್ದೆವು. ಆಟ ಅನ್ನುವುದಕ್ಕಿಂತ ಅದನ್ನು ಚಾಳಿಯೆಂದರೆ ಸರಿಯೇನೋ. ಒಟ್ಟಾರೆ ಆ ಆಟ ಯಾರೋ ಒಬ್ಬರಲ್ಲಿ spontaneous ಆಗಿ ಅವಿರ್ಭವಿಸಿ, ಕ್ಷಣಾರ್ಧದಲ್ಲಿ ಎಲ್ಲರಲ್ಲೂ ಹಬ್ಬುತ್ತಿತ್ತು. ಹೆಚ್ಚಾಗಿ ಅದು ನಾವೆಲ್ಲರೂ ಕೂಡಿ ಮನೆಯ ಯಾವುದೋ ಸಣ್ಣ ಕೆಲಸದಿಂದ ಅಂಗಡಿಗೋ ಮತ್ತೆಲ್ಲಿಗೋ ಹೋಗುವಾಗ ಶುರುವಾಗಿ ಕೆಲಸದ ಜೊತೆಗೇ ಸಾಗುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಹಾದು ಹೋದ ವಾಹನವೊಂದರ ನೋಂದಣಿ ಸಂಖ್ಯೆಯಲ್ಲಿ [...]
Read Full Post »