Posted in ಪದ್ಯ on June 8, 2008 | 8 Comments »
ಪದ್ಯದಂಥದ್ದೇನೋ ಬರೆದಿದ್ದೇನೆ. ನೀವೂ ಹಾಗೆ ಅಂದುಕೊಂಡು ಓದಿ. ಶೀರ್ಷಿಕೆಯ ’ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡ್’ (camelback boulevard), ಇಲ್ಲೇ ಪಕ್ಕದಲ್ಲಿರುವ, ಎಡಬಲಕ್ಕೂ ಅಮೆರಿಕನ್ ಮಿಡಲ್‍ಕ್ಲಾಸಿನ ಶಿಸ್ತಿನ, ಅಂದವಾದ ಮನೆಗಳಿರುವ, ರಸ್ತೆ. ಆಗಾಗ ಆ ರಸ್ತೆಯ ಮುಖಾಂತರ ವಾಕ್ ಹೋಗುತ್ತಿರುತ್ತೇನೆ.
ಅದೋ ನೋಡು ಅಮೆರಿಕಾ
ಕಾಣುತ್ತಲ್ಲ ತುಂಬಿಕೊಂಡು
ಉದ್ದವಾಗಿ ಅಗಲವಾಗಿ
ಭೂಗೋಳ ಪರೀಕ್ಷೆಯಲ್ಲಿ
ನಕ್ಷೆ ಬಿಡಿಸುವ ಮಕ್ಕಳಿಗೆ
ಅನುಕೂಲವಾಗಿ ಆಯತವಾಗಿ.
Read Full Post »
ಇದಕ್ಕೂ ಮೊದಲು, ಭಾಗ ೧ ಹಾಗೂ ಭಾಗ ೨.
ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?
ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, [...]
Read Full Post »
Posted in translation, ಪದ್ಯ, tagged ಎಲಿಯಟ್, ಪ್ರುಫ಼್ರಾಕ್ on March 20, 2008 | 6 Comments »
ಓದಿರದವರು ಇದರ ಭಾಗ ೧ಕ್ಕೆ ಇಲ್ಲಿ ಹೋಗಿ.
ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:
ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?
ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ -
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ [...]
Read Full Post »
Posted in translation, ಪದ್ಯ, tagged ಎಲಿಯಟ್, ಪ್ರುಫ್ರಾಕ್ on March 17, 2008 | 5 Comments »
ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ. ಬಹುಶಃ ೨ ಅಥವಾ ೩ ಭಾಗಗಳಲ್ಲಿ ಇಲ್ಲಿ ಛಾಪಿಸುತ್ತೇನೆ. ಹೇಗನ್ನಿಸಿತು ಹೇಳಿ. ಈ ಪದ್ಯದ epigraph, ಡಾಂಟೆಯ ಇನ್‍ಫ಼ರ್ನೋದ ಸಾಲುಗಳು. ಅದನ್ನು ಹಾಗೆಯೇ ಬಿಟ್ಟಿದ್ದೇನೆ. ಹುಡುಕಿದರೆ ಅದರರ್ಥ ನಿಮಗೆ ಸಿಕ್ಕೇ ಸಿಗುತ್ತದೆ.
Update: ಎಲಿಯಟ್‍ನ ಕವಿತೆ ಅನುವಾದ ಮಾಡುವ ಸಾಹಸ ಮಾಡಿ, ಅದನ್ನು ಬೇಜವಾಬ್ದಾರಿಯಿಂದ ನಿಭಾಯಿಸಿದ್ದಕ್ಕೆ [...]
Read Full Post »
Posted in ಪದ್ಯ, ಸುಮ್ಮನೆ on March 16, 2008 | 6 Comments »
“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.
ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.
***
ಇದಕ್ಕೆ ಉತ್ತರ ಇನ್ನೊಮ್ಮೆ.
Read Full Post »
Posted in translation, ಪದ್ಯ, tagged ನೆರುಡ, wine on March 5, 2008 | 2 Comments »
ನೆರುಡನ ಓಡ್‍ಗಳೆಂದರೆ celebration of the good things in life: Ode to Maize, Ode to a Large Tuna Fish in the Market, Ode to Salt, Ode to Sadness, Ode to Lemon ಇತ್ಯಾದಿ ಪದ್ಯಗಳು ಹುಚ್ಚೇ ಹಿಡಿಸುತ್ತವೆ. ಅತ್ಯಂತ ಸಾಮಾನ್ಯ ಸಂಗತಿಗಳ ಬಗ್ಗೆ ಹಾಡು ಕಟ್ಟುತ್ತ ಕಟ್ಟುತ್ತ ಅದನ್ನು ಒಂದು ದೊಡ್ಡ ಜಾತ್ರೆ ಮಾಡಿ ಬಿಡುತ್ತಾನೆ; ಜಾತ್ರೆಯಲ್ಲಿನ roller-coasterನಲ್ಲಿ ಕೂಡಿಸಿ ಎತ್ತರಕ್ಕೂ ಹೋಗುತ್ತಾನೆ, ಆಳಕ್ಕೂ [...]
Read Full Post »
Posted in translation, ಪದ್ಯ, tagged ಅನುವಾದ on February 22, 2008 | 4 Comments »
ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.
’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.
ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.
ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.
ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.
ಕಿರಾಣಿ ಅಂಗಡಿಯಲ್ಲಿ [...]
Read Full Post »
Valentine’s Day ಆದ್ದರಿಂದ ಪ್ರೀತಿಯ ಬಗ್ಗೆ ಏನಾದರೂ ಬರೆಯಲೇಬೇಕಲ್ಲವೆ? ಒಳ್ಳೆಯ ಪದ್ಯ ಬರೆಯುವ ಕುವ್ವತ್ತಿಲ್ಲದಿದ್ದರೆ ಹೋಗಲಿ, ಯಾವುದಾದರೂ ಒಳ್ಳೆಯ ಪದ್ಯವನ್ನು ಅನುವಾದಿಸಲೇಬೇಕು ಎಂದು ನಿನ್ನೆ ರಾತ್ರಿ ಕುಳಿತೆ. ಯಾವ ಪದ್ಯ? ಯಾರ ಪದ್ಯ? ಯಾರ ಪದ್ಯ ಎಂಬ ಸಮಸ್ಯೆ ತಕ್ಷಣದಲ್ಲಿ ಬಗೆ ಹರಿಯಿತು. ನೆರೂಡನ ಪದ್ಯಗಳನ್ನು ಅನುವಾದಿಸಬೇಕೆಂಬುದು ಮೊದಲಿನಿಂದಲೂ ಇದ್ದ ಬಯಕೆ. ನನ್ನಲ್ಲಿರುವ ನೆರೂಡನ ಪದ್ಯಗಳನ್ನು ತಿರುವಿಹಾಕುತ್ತ ಒಂದನ್ನು ಆರಿಸಿಕೊಂಡೆ. ಪದ್ಯದ ಸಣ್ಣ ಗಾತ್ರವೂ ನನ್ನನ್ನು ಹುರಿದುಂಬಿಸಿತು. ಒಂದರ್ಧ ಮುಗಿಸಿದಾಗ ಆ ಪದ್ಯದ ಬಗ್ಗೆ ಏನೋ ಹುಡುಕತೊಡಗಿದೆ. [...]
Read Full Post »
Posted in ಖಯಾಲ್, ಪದ್ಯ, tagged ಶಬ್ದಗಳು on February 11, 2008 | No Comments »
ಸವಿಯಾದ ತಿಂಡಿಯನ್ನು ತಿನ್ನುವಾಗ ಸಣ್ಣ ಹರಳೊಂದು ಸಿಕ್ಕಂತೆ, ರವಿವಾರದ ರಸ್ತೆಗಳಲ್ಲಿ ಸುಖದಿಂದ ತೇಲುವಾಗ ರಸ್ತೆಗುಬುಟಿಯೊಂದು ತಡೆದಂತೆ, ಸೊಗಸಾದ ಪದ್ಯವೋದುವಾಗ ಒಮ್ಮೊಮ್ಮೆ ಶಬ್ದಗಳು ಅಡ್ದ ಬರುತ್ತವೆ.
[...] peace, like a poem,
is not there ahead of itself,
can’t be imagined before it is made,
can’t be known except
in the words of its making,
grammar of justice,
syntax of mutual aid.
[...]
ಪದ್ಯದಂತೆ ಶಾಂತಿ. ಹೀಗೆ ಹೇಳುತ್ತ ಶುರುವಾಗುವ ಈ ಪದ್ಯ ಆ ಪ್ರತಿಮೆಯನ್ನು ಬೆಳೆಸಿಕೊಂಡು [...]
Read Full Post »
Posted in ಖಯಾಲ್, ಪದ್ಯ, ಮೆಲುಕುಗಳು on February 1, 2008 | 1 Comment »
ನನ್ನ ಕೋಣೆಯ ಕಿಟಕಿಯಿಂದ laptopನ webcamನಿಂದ ತೆಗೆದ ಫೋಟೊಗಳಿವು. Laptop ಎತ್ತಿ ಹಿಡಿದು ಹೇಗೆ ಹೇಗೋ ತೆಗೆದದ್ದು. Camera ಇಲ್ಲದ್ದಕ್ಕೆ ಈ ಸರ್ಕಸ್.
ಅದಿರಲಿ. ಮುಖ್ಯವಾದ ವಿಷಯವೆಂದರೆ ಹಿಮ. ಕರುನಾಡಿನಿಂದ ಬಂದವನು ನಾನು. ನಮ್ಮದು ಕಪ್ಪು ಮಣ್ಣಿನ ನಾಡು — ಎಂದೆಲ್ಲ ಓದಿದ್ದೆ ಶಾಲೆಯಲ್ಲಿ. ಕರಿ ಮಣ್ಣಂತೂ ಸರಿಯೇ ಸರಿ. ನಮ್ಮೂರಲ್ಲೂ ಬೇಕಾದಷ್ಟು ಕರಿಮಣ್ಣಿನ್ನು ಕಂಡವನೇ ನಾನು. ಹತ್ತಿ ಬೆಳೆಯಲು ಉತ್ತಮ ಮಣ್ಣದು. ಜೊತೆಗೆ ಕೆಂಪು ಧೂಳು ಮಣ್ಣು, ಉಸುಕುಸುಕಾದ ಮಸಾರಿ, ಕೆಂದು ಬಣ್ಣದ ಸಣ್ಣ ಸಣ್ಣ ಕಲ್ಲುಗಳ [...]
Read Full Post »