Posted in ಅನುಭವ, ಕತೆ, ತುಡಿತ, ಮೆಲುಕುಗಳು on June 22, 2008 | 4 Comments »
ಅವನು ಒಳಗೆ ಬಂದಾಗ ನಾನು ಒಂದರ್ಧ ಗ್ಲಾಸ್ ಬಿಯರ್ ಗುಟುಕರಿಸಿ ಕೂತಿದ್ದೆ. ಆಗ ತಾನೇ ಯಾರೋ ಜ್ಯೂಕ್‍ಬಾಕ್ಸಿನಲ್ಲಿ ದುಡ್ಡು ಹಾಕಿ ಹಾಡು ಶುರು ಮಾಡಿದ್ದರು. ಯಾವುದೋ ನನಗಿಷ್ಟವಾಗದ ಹಾಡು ಬರುತ್ತಿತ್ತು. ’ಯಾರಪ್ಪಾ ಇದು, ದುಡ್ಡು ಕೊಟ್ಟು ಕೆಟ್ಟ ಹಾಡು ಕೇಳುತ್ತಾರಲ್ಲ!’ ಎಂದು ನನ್ನಷ್ಟಕ್ಕೆ ನಾನು ಮುಸಿನಗುತ್ತಿದ್ದೆ. ಅವನು ಸ್ವಲ್ಪ ಅಪ್ರತಿಭನಾಗಿದ್ದಂತೆ ತೋರಿತು. ಕೌಂಟರಿನ ಎದುರಿಗಿನ ಖಾಲಿ ಕುರ್ಚಿಯೊಂದರಲ್ಲಿ ಕೂತ. ತನ್ನ ಸುತ್ತಮುತ್ತಲಿದ್ದವರನ್ನೆಲ್ಲ ಮಾತಾಡಿಸಿ ಕೈಕುಲುಕಿ ಪರಿಚಯ ಮಾಡಿಕೊಳ್ಳುತ್ತಿದ್ದ. ಹುಮ್ಮಸ್ಸಿನಿಂದಲ್ಲ, ಒಂದು ರೀತಿಯ ಅಳುಕಿನಿಂದ. ಅವನ ನಡೆನುಡಿಗಳಲ್ಲಿ ಹಗುರಾದ [...]
Read Full Post »
Posted in Economics, philosophy, ಅನುಭವ, ನಗರಗಳು, ಮೆಲುಕುಗಳು, ವಿಚಾರ, ವಿಡಂಬನೆ, ಸುಮ್ಮನೆ, tagged semi-serious, spirituality on May 27, 2008 | 14 Comments »
(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)
ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು [...]
Read Full Post »
ಇತ್ತೀಚಿನ ದಿನಗಳಲ್ಲಿ ನನಗೆ ಬೋರಾದಾಗಲೆಲ್ಲ ಅಥವಾ ಖಾಲಿ ಇದ್ದಾಗೆಲ್ಲಾ (ಇರುವ ಕೆಲಸಗಳನ್ನೆಲ್ಲ ಮುಂದುಹಾಕುತ್ತ ಹೋಗುವ ನಾನು ಯಾವಾಗಲೂ ಖಾಲಿಯೇ), ಟಾಯಂಪಾಸ್‍ಗಾಗಿ ಅವಲಂಬಿಸಿರುವುದು ಬ್ರಿಟಿಶ್ ಕಾಮೆಡಿಗಳನ್ನು. ಮುಖ್ಯವಾಗಿ ’ಯೆಸ್ ಮಿನಿಸ್ಟರ್’ ಹಾಗೂ ’ಮಾಂಟಿ ಪೈಥನ್’. ಯೆಸ್ ಮಿನಿಸ್ಟರ್‌ನ ಒಂದಷ್ಟು ಎಪಿಸೋಡ್‍ಗಳು ಆನ್‍ಲೈನ್ ಇವೆ. ಮತ್ತೆ ಯೂಟ್ಯೂಬ್‍ನಲ್ಲಿ ಒಂದಷ್ಟು ತುಣುಕುಗಳಿವೆ. ಮಾಂಟಿ ಪೈಥನ್ನರೂ ಯೂಟ್ಯೂಬ್‍ನಲ್ಲಿ ಅನೇಕ ತುಣುಕುಗಳಾಗಿ ಸಿಗುತ್ತಾರೆ. ಪದೇ ಪದೇ ನೋಡಿದರೂ ಬೇಜಾರಾಗದ ಅದ್ಭುತ ಕಾಮಿಕ್ ಗುಣಗಳಿವೆ ಈ ಕೃತಿಗಳಲ್ಲಿ.
೧೯೮೦-೮೪ರ ನಡುವೆ ಯೆಸ್ ಮಿನಿಸ್ಟರ್ ಹಾಗೂ ೧೯೮೬-೮೮ರ ನಡುವೆ [...]
Read Full Post »
Posted in ಮೆಲುಕುಗಳು, ಸಿನೆಮಾ on May 7, 2008 | 2 Comments »
ಬಹಳ ಜನ ಮಾಜಿದ್ ಮಜೀದಿಯ ’Childre of Heaven’ ಬಗ್ಗೆ ಮಾತಾಡುತ್ತಿದ್ದಾರೆ. ಇದು ಹೀಗೆ ಸೆಲೆಬ್ರೇಟ್ ಮಾಡಲೇಬೇಕಾದ ಸಿನೆಮಾಗಳಲ್ಲಿ ಒಂದಾದ್ದರಿಂದ, ನನ್ನದೂ ಎರಡು ಅಕ್ಕಿಕಾಳು. ಸ್ವಲ್ಪ ಹಳೆಯ ಅಕ್ಕಿ. ಹಿಂದೆ ಎಲ್ಲೋ ಬರೆದಿದ್ದನ್ನು ಇಲ್ಲಿ ಹಾಕುತ್ತಿದ್ದೇನೆ. ಇಂಗ್ಲಿಶ್‍ನಲ್ಲಿ ಬರೆದಿದ್ದೆ. ಹಾಗೇ ಹಾಕುತ್ತಿದ್ದೇನೆ.
Majid Majidi’s Shoes
The excellent Iranian director Majid Majidi’s Children of Heaven (Bacheha-Ye Aseman, 1997) is not an ambitious movie. The fact that it is not so, [...]
Read Full Post »
Posted in ಮೆಲುಕುಗಳು, ವಿಚಾರ, ಸಿನೆಮಾ on May 6, 2008 | 9 Comments »
ಇತ್ತೀಚೆಗೆ ಚೇತನಾಳ ಬ್ಲಾಗಿನಲ್ಲಿ ಹಳೆಯ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿ ಒಟ್ಟಾರೆಯಾಗಿ ಕಂಡುಬರುತ್ತಿದ್ದ ಮೂಡು ಹೇಗಿತ್ತೆಂದರೆ, ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಗಳು ಹಳೆಯವೆ. ಇದಕ್ಕೆ ಸ್ವಲ್ಪ ಮಟ್ಟಿಗೆ nostalgia ಕಾರಣ: ಚಿಕ್ಕಂದಿನಲ್ಲಿ ಸಣ್ಣಸಣ್ಣ ಊರುಗಳಲ್ಲಿ ಓರಗೆಯವರು, ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕೂತು ಭಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳು; ನಾನಂತೂ ತೀರ ಚಿಕ್ಕವನಿದ್ದಾಗ ಮಹಾಭಾರತ ಇತ್ಯಾದಿಗಳನ್ನು ಬೇರೆಯವರ ಮನೆಯಲ್ಲಿ ಹೋಗಿಯೇ ನೋಡಿದ್ದು; ಹೀಗೆ ಚಿಕ್ಕಂದಿನ ಸಾಮೂಹಿಕ ಚಟುವಟಿಕೆಗಳು ನಮ್ಮನ್ನು ಕಾಡಿ ಮೃದುವಾಗಿಸುವುದು ಹೌದು. ಅದು ಹೀಗಿದ್ದಾಗ್ಗ್ಯೂ, ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, [...]
Read Full Post »
ಸ್ಪ್ರಿಂಗ್ ಶುರುವಾಗಿ ಎಷ್ಟೋ ದಿನಗಳಾದ ಮೇಲೆ ಕೊನೆಗೂ ಸ್ಪ್ರಿಂಗ್ ಶುರುವಾಗಿದೆ. ಅಥವಾ, ಸ್ಥಾಯಿಯಾಗಿದೆ. ಮಾರ್ಚಿನ ಆರಂಭದಲ್ಲಿ ಯುನಿವರ್ಸಿಟಿಗೆ ಸ್ಪ್ರಿಂಗ್ ಬ್ರೇಕ್ ಇತ್ತು. ಸ್ಪ್ರಿಂಗ್ ಶುರುವಾಯ್ತಲ್ಲ ಅಂದುಕೊಂಡೆ. ಆದರೆ ಅದು ಹೆಸರಿಗೆ ಮಾತ್ರ ಸ್ಪ್ರಿಂಗ್ ಬ್ರೇಕ್. ಹಿಮ್ ಬೀಳುತ್ತಲೇ ಇತ್ತು. ಮಾರ್ಚ್ ಮುಗಿದರೂ ಬಿಡದ ಚಳಿ. ಏಪ್ರೀಲ್ ಶುರುವಾತಿಗೆ ಸ್ವಲ್ಪ ಕಡಿಮೆಯಾಯಿತೇನೋ ಎನ್ನುವಷ್ಟರಲ್ಲಿ ಮತ್ತೆ ಮರಳಿ ಬಂತು. ಅಂತೂ ಕೊನೆಗೂ ಅದಕ್ಕೇ ಸಾಕೆನ್ನಿಸಿ ರಜಾ ಹಾಕಿ ಹೋಗಿದೆ.
ಇಲ್ಲಿ ಜನ ಸಮ್ಮರ್‌ಗೆ ಕಾಯುತ್ತಿರುತ್ತಾರೆ. ಅದು ಯಾಕೆ ಎಂದು ಅರ್ಥವಾಗುತ್ತಿದೆ. ತುಂಬ [...]
Read Full Post »
ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ [...]
Read Full Post »
Posted in ಮೆಲುಕುಗಳು, ವಿಚಾರ on April 13, 2008 | 9 Comments »
ಬ್ಲಾಗುಗಳ ಸ್ವರೂಪ, ಅವುಗಳ ಕಾಳಜಿಗಳು, ನಿರೀಕ್ಷೆಗಳು ಮೊದಲಾದ ವಿಷಯಗಳ ಬಗ್ಗೆ ಕನ್ನಡ ಬ್ಲಾಗಿಗರು ವಿಚಾರ ನಡೆಸುತ್ತಿದ್ದಾರೆ. ಪ್ರಣತಿಯ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಚರ್ಚೆ ಇತ್ತಂತೆ. ಏನು ಬರೆಯಬೇಕು ಏನು ಬರೆಯಬಾರದು ಎಂದು ಕೆಲವು ಕಡೆ ಗೊಂದಲಗಳೂ ಮೂಡಿವೆ. ನಾವಡರು ಬ್ಲಾಗೆಂಬ ಆಕಾಶದ ತಾರೆಗಳು ಹೊಳೆಯಲಿ ಎಂಬ ಆಶಯದೊಂದಿಗೆ ಶುರು ಮಾಡಿ, ಒಂದು ಚೆನ್ನಾದ ಬರೆಹ ಬರೆದಿದ್ದಾರೆ. ಕೌತುಕ ಹೊಮ್ಮಿಸುವ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲಿ ಪ್ರತಿಕ್ರಿಯಿಸಿದವರೂ ಇನ್ನಷ್ಟು ಸಲಹೆಗಳನ್ನಿತ್ತಿದ್ದಾರೆ. ಆದರೆ ಇದೆಲ್ಲಕ್ಕಿಂತ ಕೌತುಕದ ಸಂಗತಿಯೆಂದರೆ, ಬ್ಲಾಗಿಗರು ಸಾಮೂಹಿಕವಾಗಿ [...]
Read Full Post »
Posted in ಮೆಲುಕುಗಳು, ವಿಚಾರ on March 26, 2008 | 2 Comments »
ವಿ. ಎಸ್. ನೈಪಾಲ್ ಒಮ್ಮಿಂದೊಮ್ಮೆಲೆ ಸುದ್ದಿಯಲ್ಲಿದ್ದಾರೆ. ಬ್ಲಾಗುಗಳಲ್ಲಿ ಬರಹಗಳೂ, ವಾದಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ, ಹಳೆಯ ಕಿಡಿಯನ್ನು ಹೊತ್ತಿಸುವ ಉದ್ದೇಶದಿಂದ ಊದುಗೊಳವೆ ಹಿಡಿದಿದ್ದೇನೆ. ಇದು ಗುಂತರ್ ಗ್ರಾಸ್‍ರ ತಪ್ಪೊಪ್ಪಿಗೆಯ ಬಗ್ಗೆ.
ಅಗಸ್ಟ್ ೨೦೦೬ರಲ್ಲಿ, ಸಾಹಿತ್ಯ ಜಗತ್ತು ತಲ್ಲಣಗೊಂಡಿತು. ಸಂದರ್ಶನವೊಂದರಲ್ಲಿ ಗುಂತರ್ ಗ್ರಾಸ್ ತಾವು ಯುವಕರಾಗಿದ್ದಾಗ ವ್ಯಾಫ಼ೆನ್ಸ್-ಎಸ್‍ಎಸ್‍ನ ಸದಸ್ಯರಾಗಿದ್ದರೆಂದು ಬಹಿರಂಗಗೊಳಿಸಿದರು. ೬೦ ವರ್ಷಗಳ ದೀರ್ಘಕಾಲದ ನಂತರ ಯಾರಿಗೂ ಗೊತ್ತಿಲ್ಲದ ಈ ಸುದ್ದಿಯನ್ನು ನೀಡಿ ಗ್ರಾಸ್ ಎಲ್ಲರಿಗೂ ಶಾಕ್ ನೀಡಿದರು. ಕೋಲಾಹಲವೆದ್ದಿತು. ಗ್ರಾಸ್‍ರ ತಪ್ಪೊಪ್ಪಿಗೆಯ ಹಿನ್ನೆಯಲ್ಲಿ ಅವರ ಸಾಹಿತ್ಯವನ್ನೂ ವ್ಯಕ್ತಿವನ್ನೂ ಮರುವಿಶ್ಲೇಷಿಸುವ [...]
Read Full Post »
Posted in ಮೆಲುಕುಗಳು on March 25, 2008 | No Comments »
ಪಾಲ್ ಅರ್ಡೋಶ್ (Paul Erdös) ನೆನಪಾದ ಒಮ್ಮೆಲೆ. ಈಗ ಒಂದು ಕಮೆಂಟ್ ಬರೆಯುತ್ತಿದ್ದಾಗ ಒಂದು ಕೋಟ್ ನೆನಪಾಯಿತು: “A mathematician is a machine for turning coffee into theorems.” ಇದು ಅರ್ಡೋಶ್‍ನ ಗೆಳೆಯ ಹಾಗೂ ಸಹಸಂಶೋಧಕ, ಇನ್ನೊಬ್ಬ ಗಣಿತಜ್ಞ, ಆಲ್ಫ಼್ರೆಡ್ ರೇಯ್ನಿ ಹೇಳಿದ ಮಾತು. ಬಹುತೇಕ ಅರ್ಡೋಶ್‍ನ ಬಗ್ಗೆಯೇ ಹೇಳಿದ ಮಾತಿದು.
ಸುಮಾರು ೧೫೦೦ರಷ್ಟು ಪೇಪರುಗಳನ್ನು ಪ್ರಕಟಿಸಿದ ಅರ್ಡೋಶ್, ಶ್ರೇಷ್ಠ ಗಣಿತಜ್ಞನಷ್ಟೇ ಅಲ್ಲದೆ ಅತ್ಯಂತ ವಿಲಕ್ಷಣ ಮನುಷ್ಯನಾಗಿದ್ದ. ಬಹು ಕುಶಾಲಿನ ವರ್ಣರಂಜಿತ ವ್ಯಕ್ತಿತ್ವ ಅವನದು. ಅವನ [...]
Read Full Post »