ಹಿಂದಿನ ಲೇಖನದಲ್ಲಿ ಕೈದಿಯ ಇಬ್ಬಂದಿಯ ಬಗ್ಗೆ ಮಾತಾಡಿದೆವು. ಅದು ಆಸಕ್ತಿಕರವಾದ ಸಮಸ್ಯೆಯಂತೂ ಹೌದು. ಆದರೆ ಅದಕ್ಕಿಂತ ಹೆಚ್ಚಿನ ಉಪಯೋಗ ಅದರಿಂದ ಇದೆಯೆ? ಏನಾದರೂ ಸಾಮಾಜಿಕ ಪ್ರಸ್ತುತತೆ ಇದೆಯೆ? ಇದೆ. ಏಕೆಂದರೆ ನಾವೆಲ್ಲರೂ ಕೈದಿಗಳೆ! ಹಿಂದಿನ ಲೇಖನದಲ್ಲಿನ ರೀತಿಯ ಕೈದಿಗಳಲ್ಲ. ಅದು ಒಂದು ನಿದರ್ಶನ ಅಷ್ಟೆ. ಅಲ್ಲಿ ನಾನು ವಿವರಿಸಿದ್ದು ಒಂದು ಆಟ (ಗೇಮ್). ನಾವೆಲ್ಲರೂ ದಿನನಿತ್ಯವೂ ಇಂಥ ಅನೇಕ ಗೇಮ್‍ಗಳನ್ನು ಬೇಕಾಗಿಯೋ ಬೇಡಾಗಿಯೋ ಆಡುತ್ತಿರುತ್ತೇವೆ. ಅವನ್ನು ನಾವು ಹೇಗೆ ಆಡುತ್ತೇವೆ ಎನ್ನುವುದು ಬಹಳ ಮಟ್ಟಿಗೆ ನಮ್ಮ ಒಟ್ಟಾರೆ [...]
Read Full Post »
ಗೇಮ್ ಥಿಯರಿಯ ಬಗ್ಗೆ ಒಂದಷ್ಟು ಬರಿಯುವ ಅಂತ ಇದೆ. ನಾನು ಎಷ್ಟೋ ವಿಷಯಗಳನ್ನು ಶುರು ಮಾಡಿ, ಮುಂದುವರೆಸುತ್ತೇನೆ ಎಂದು ಹೇಳಿ, ನಂತರ ಮತ್ತೇನೇನೋ ಬರೆಯುತ್ತ ಮೈಮರೆತುಬಿಡುತ್ತೇನೆ. ಒಂದು ಸರಣಿಯಲ್ಲಿ ಏನನ್ನೂ ಬರೆದು ರೂಢಿಯಿಲ್ಲ. ಇದೂ ಹಾಗೇ ಆಗುತ್ತದೆ. ಆದರೂ ನನಗೆ ಇದೊಂದು exciting ವಿಷಯಾಗಿರುವುದರಿಂದ ಆವಾಗಾವಾಗ ಬರೆಯುತ್ತಿರುತ್ತೇನೆ ಎಂದು ಹೇಳಬಲ್ಲೆ. ನಾನು ಹೇಳುವ ಸಂಗತಿಗಳು ಬಹಳೇ ಮೂಲಭೂತವಾದುವು (ಎಲ್ಲಾ ರೀತಿಯಲ್ಲೂ). ಆದ್ದರಿಂದ ಅನೇಕರಿಗೆ ಇವು ಈಗಾಗಲೇ ಗೊತ್ತಿರಲೂಬಹುದು. ನಾನು ಈ ಪೋಸ್ಟಿನಲ್ಲಿ ಗೇಮ್ ಥಿಯರಿಯ ಒಂದು ಪ್ರಮಾಣಭೂತ [...]
Read Full Post »
ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು [...]
Read Full Post »
Posted in Economics, philosophy, ಅನುಭವ, ನಗರಗಳು, ಮೆಲುಕುಗಳು, ವಿಚಾರ, ವಿಡಂಬನೆ, ಸುಮ್ಮನೆ, tagged semi-serious, spirituality on May 27, 2008 | 14 Comments »
(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)
ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು [...]
Read Full Post »
ನಾನು ಚಿಕ್ಕಂದಿನಲ್ಲೇ ಒಂದು ಸರಳ ಸುಂದರ ಸತ್ಯವನ್ನು ಕಂಡುಕೊಂಡಿದ್ದೆ. ಅದನ್ನು ನಾನು ಚೆನ್ನಾಗಿ ಬಳಸುತ್ತಲೂ ಇದ್ದೆ. ಆದರೆ ಅದು ಎಕನಾಮಿಕ್ಸ್‍ನ ಒಂದು ಮಹತ್ವದ ಸಿದ್ಧಾಂತ ಎಂದು ಗೊತ್ತಾಗಿದ್ದು ಒಂದೆರಡು ವರ್ಷಗಳ ಹಿಂದಷ್ಟೆ. ಇದು ಎರಡು ವಿಷಯಗಳನ್ನು ನಿದರ್ಶಿಸುತ್ತದೆ: (೧) ಎಕನಾಮಿಕ್ಸ್ ಎನ್ನುವುದರ ತಳಹದಿ ಕಾಮನ್ ಸೆನ್ಸ್ ಹಾಗೂ (೨) ನಾನು ಚಿಕ್ಕಂದಿನಿಂದಲೇ ದೀಡುಪಂಡಿತ.
ಅದಿರಲಿ. ಈ ಸಿದ್ಧಾಂತವನ್ನು ಮಂಡಿಸುವ ಮೊದಲು ಒಂದೆರಡು ಪ್ರಶ್ನೆಗಳು. ದರ್ಶಿನಿಯಲ್ಲಿ ದುಡ್ಡು ಕೊಟ್ಟು ಕಾಫಿ ತೊಗೊಂಡಾಗಿದೆ; ಕಾಫಿ ಕೆಟ್ಟದಾಗಿದೆ. ಆದರೂ ದುಡ್ಡು [...]
Read Full Post »
ಒಂದು ಸಣ್ಣ ಪ್ರಯೋಗ ಮಾಡೋಣ. ಒಂದು ವೈಚಾರಿಕ ಪ್ರಯೋಗ (thought experiment) ಎಂದಿಟ್ಟುಕೊಳ್ಳಿ ಬೇಕಿದ್ದರೆ. ನಿಮ್ಮ ಮನಸ್ಸಿನಲ್ಲೆ ನಿಮ್ಮ ಗೆಳೆಯ/ಗೆಳತಿಯರು ಮತ್ತು/ಅಥವಾ ಪರಿಚಿತರನ್ನು ನೆನೆಸಿಕೊಳ್ಳಿ; ಬಂಧುಗಳು ಬೇಡ. ಹಾಗೆ ನೆನೆಸಿಕೊಳ್ಳುತ್ತಲೇ ಅವರನ್ನು ನಾನು ಹೇಳಲಿರುವ ಹಾಗೆ ವಿಂಗಡಿಸಿ (ಒಬ್ಬ ವ್ಯಕ್ತಿಯನ್ನು ಒಂದೇ ಕೆಟಗರಿಗೆ ಹಾಕಿ): ನಿಮ್ಮ ಮನೆಯ ಸುತ್ತಮುತ್ತಲಲ್ಲಿರುವವರು ಹಾಗೂ ನಿಮ್ಮ ಮನೆಗೆ ಹತ್ತಿರ ಇರುವವರು; ಉಳಿದಂತೆ ನಿಮ್ಮ ಏರಿಯಾದಲ್ಲಿರುವವರು; ನೀವಿರುವ ಏರಿಯಾ ಬಿಟ್ಟು ನೀವಿರುವ ನಗರದಲ್ಲಿ ಎಲ್ಲಿಯಾದರೂ ಇರುವವರು; ಭಾರತದ ಉಳಿದೆಲ್ಲ ನಗರದಲ್ಲಿರುವವರು; ಭಾರತ [...]
Read Full Post »
Posted in ಮೆಲುಕುಗಳು, ವಿಚಾರ, ಸಿನೆಮಾ on May 6, 2008 | 9 Comments »
ಇತ್ತೀಚೆಗೆ ಚೇತನಾಳ ಬ್ಲಾಗಿನಲ್ಲಿ ಹಳೆಯ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿ ಒಟ್ಟಾರೆಯಾಗಿ ಕಂಡುಬರುತ್ತಿದ್ದ ಮೂಡು ಹೇಗಿತ್ತೆಂದರೆ, ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಗಳು ಹಳೆಯವೆ. ಇದಕ್ಕೆ ಸ್ವಲ್ಪ ಮಟ್ಟಿಗೆ nostalgia ಕಾರಣ: ಚಿಕ್ಕಂದಿನಲ್ಲಿ ಸಣ್ಣಸಣ್ಣ ಊರುಗಳಲ್ಲಿ ಓರಗೆಯವರು, ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕೂತು ಭಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳು; ನಾನಂತೂ ತೀರ ಚಿಕ್ಕವನಿದ್ದಾಗ ಮಹಾಭಾರತ ಇತ್ಯಾದಿಗಳನ್ನು ಬೇರೆಯವರ ಮನೆಯಲ್ಲಿ ಹೋಗಿಯೇ ನೋಡಿದ್ದು; ಹೀಗೆ ಚಿಕ್ಕಂದಿನ ಸಾಮೂಹಿಕ ಚಟುವಟಿಕೆಗಳು ನಮ್ಮನ್ನು ಕಾಡಿ ಮೃದುವಾಗಿಸುವುದು ಹೌದು. ಅದು ಹೀಗಿದ್ದಾಗ್ಗ್ಯೂ, ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, [...]
Read Full Post »
Posted in ಅನುಭವ, ನಗರಗಳು, ವಿಚಾರ on April 29, 2008 | 7 Comments »
ಇದು ದ ನ್ಯೂ ಯಾರ್ಕರ್ ಪತ್ರಿಕೆಯ ಮಾರ್ಚ್ ೨೯, ೧೯೭೬ರ ಕವರ್ ಪೇಜ್. ಕಲಾವಿದ, ಅದೇ ಪತ್ರಿಕೆಯ ಕಾರ್ಟೂನಿಸ್ಟ್ ಸಾಲ್ ಸ್ಟೈನ್‍ಬರ್ಗ್. ಅತ್ಯಂತ ಪ್ರಸಿದ್ಧ ಚಿತ್ರವಾಗಿರುವ ಇದು “View of the World from 9th Avenue” ಅಥವಾ “A New Yorker’s View of the World” ಎಂದು ಕರೆಯಲ್ಪಡುತ್ತದೆ. ಇದು ನನಗೆ ತುಂಬಾ ಇಷ್ಟವಾಗುವ illustration ಕೂಡ. ಇಲ್ಲಿ ಉಲ್ಲೇಖಿಸಿರುವ ೯ನೇ ಅವೆನ್ಯು, ನ್ಯೂ ಯಾರ್ಕ್‍ನ ಮ್ಯಾನ್‍ಹ್ಯಾಟನ್‍ನಲ್ಲಿದೆ. ನ್ಯೂ ಯಾರ್ಕಿಗರ world view ಎಷ್ಟು [...]
Read Full Post »
ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ [...]
Read Full Post »
Posted in Economics, ವಿಚಾರ on April 18, 2008 | 3 Comments »
ಮೊದಲಿಗೆ ಕೆಲವು ಸರಳ ಸತ್ಯಗಳನ್ನು ನೋಡುವ: ಸ್ವಯಂಪ್ರೇರಿತವಾಗಿ ನಡೆಸುವ ಯಾವುದೇ ವ್ಯಾಪಾರ ಕೆಟ್ಟದ್ದಲ್ಲ; ಮನುಷ್ಯರ ನಡವಳಿಕೆ ವ್ಯವಹಾರಗಳು ಸ್ವಾರ್ಥದ ಮೇಲೆ ಆಧಾರಿತವಾಗಿವೆ; ಮನುಷ್ಯ ಸ್ವಾರ್ಥಿಯಾಗಿರುವುದರಿಂದ ಪ್ರತಿಫಲದ ಅಪೇಕ್ಷೆ ಸಹಜ; ಪ್ರತಿಫಲದ ಅಪೇಕ್ಷೆ ತಪ್ಪಲ್ಲ; ವಸ್ತುತ:, ನಮ್ಮನ್ನು ಕಾರ್ಯೋನ್ಮುಖರಾಗಲು ಪ್ರಚೋದಿಸುವುದೇ ಅದು; ಬೇರೆ ಬೇರೆ ಮನುಷ್ಯರಿಗೆ ಬೇರೆ ಬೇರೆ ಶಕ್ತಿಸಾಮರ್ಥ್ಯಗಳೂ, ಬೇರೆ ಬೇರೆ ಅವಶ್ಯಕತೆಗಳೂ ಇರುತ್ತವೆ; ಹೀಗಾಗಿ, ಮನುಷ್ಯ ಮನುಷ್ಯರ ನಡುವಿನ ವ್ಯವಹಾರಗಳು, ಸಂವಹನ ಅನಿವಾರ್ಯ; ಪ್ರತಿಫಲಗಳು/ಉತ್ತೇಜಕಗಳೇ ಎಲ್ಲ ರೀತಿಯ ವ್ಯವಹಾರಗಳನ್ನು ಸಾಧ್ಯವಾಗಿಸುವುವು.
ಇದನ್ನೇ ಸ್ವಲ್ಪ ವಿಸ್ತರಿಸಿದರೆ, ’ಲಾಭ’ ಎನ್ನುವುದು [...]
Read Full Post »