ಅಂತೂ ಪಟ್ಟುಹಿಡಿದು ಕೂತು (ಕೂತು? ಅಥವಾ ಅಡ್ಡಾಗಿ, ಅಥವಾ ವಿಚಿತ್ರ ಭಂಗಿಗಳಲ್ಲಿ ಒರಗಿ) ಬಹಳ ದಿನದಿಂದ ಓದುತ್ತಿದ್ದ ಪುಸ್ತಕದ ಉಳಿದ ಭಾಗವನ್ನು ಮುಗಿಸಿದೆ. ಮೈ ನೇಮ್ ಈಸ್ ರೆಡ್. ಯಾಕೋ ಓದುವುದೇ ಕಷ್ಟವಾಗುತ್ತಿದೆ. ಬಹಳ ಹೊತ್ತು ಏಕಾಗ್ರತೆಯಿಂದ ಏನನ್ನು ಮಾಡುವುದೂ ಕಷ್ಟವಾಗುತ್ತಿದೆಯೇನೋ ಅನ್ನಿಸುತ್ತೆ. ವಯಸ್ಸಾಯಿತೇನೋ!
ಅದೂ ಅಲ್ಲದೇ ಬಹಳ ಪುಸ್ತಕಗಳ ವಿನ್ಯಾಸವೇ ಅನನುಕೂಲಕರವಾಗಿರುತ್ತದೆ. ಅಗಲ ಹೆಚ್ಚಿದ್ದು ದಪ್ಪ ಕಡಿಮೆಯಿದ್ದರೆ ಪಟಕ್ಕನೆ ಮಡಚಿಕೊಳ್ಳುತ್ತವೆ. ಹೀಗಾಗಿ ಅಡ್ಡಾಗಿ ಓದಲಾಗುವುದಿಲ್ಲ. ಆದರೆ ಅವು ಟೇಬಲ್ಲಿನ ಮೇಲೆ ಇಟ್ಟು ಓದಲು ಅನುಕೂಲ. ಹಾಗೆಯೇ ಆರಾಮ [...]
Archive for the ‘ಸುಮ್ಮನೆ’ Category
“ಪುಸ್ತಕ ವಿಮರ್ಶೆ”
Posted in ಟಾಯಂಪಾಸ್, ಸುಮ್ಮನೆ, ಹರಟೆ on April 21, 2008 | 3 Comments »
ಬ್ಲಾಗಿಗರ ಕಾಳಗ
Posted in ಖಯಾಲ್, ಗುಂಗು, ಟಾಯಂಪಾಸ್, ವಿಚಾರ, ಸುಮ್ಮನೆ, ಹರಟೆ on March 19, 2008 | 20 Comments »
ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ [...]
ಇನ್ನೆಷ್ಟು ದಿನ ಹೀಗೆ
Posted in ಪದ್ಯ, ಸುಮ್ಮನೆ on March 16, 2008 | 6 Comments »
“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.
ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.
***
ಇದಕ್ಕೆ ಉತ್ತರ ಇನ್ನೊಮ್ಮೆ.
Posted in ಗುಂಗು, ಟಾಯಂಪಾಸ್, ತುಡಿತ, ಸುಮ್ಮನೆ on March 13, 2008 | 5 Comments »
ಈ ಸಾಲಿನ ಕೆಳಗಿನದನ್ನು ಓದಬೇಡಿ.
ನಾನು ಈ ಬ್ಲಾಗುಗಳ ಲೋಕಕ್ಕೆ ಕಾಲಿರಿಸಿ ಕಂಡಾಪಟ್ಟೆ ದಿನಗಳಾಗಿವೆ. ೨೦೦೪ರ ಜುಲೈ ೩೧ರ ತೇದಿಯಂದು ನನ್ನ ಮೊದಲನೆಯ ಬ್ಲಾಗಿನ ಮೊದಲನೆಯ “ಹಲೋ ವರ್ಲ್ಡ” ಆಯ್ತು. ಏನೇನೋ ಬರೆದೆ. ಒಂದಷ್ಟು ಚೆನ್ನಾಗಿತ್ತು, ಒಂದಷ್ಟು ಕೆಟ್ಟದಾಗಿತ್ತು. ನಂತರ ಮತ್ತೊಂದು ಬ್ಲಾಗು. ಮತ್ತೊಂದು. ಮತ್ತೊಂದು. ಆಮೇಲೆ ಬ್ಲಾಗುಗಳನ್ನು finis ಮಾಡುತ್ತಲೂ ಬಂದೆ. ಇಂಗ್ಲಿಶ್, ಕನ್ನಡ, ಮಿಶ್ರಿತ… ಎಲ್ಲವೂ. ಕಾರಣವಿಲ್ಲದೆ ಶುರು ಮಾಡಿದ ಬ್ಲಾಗುಗಳನ್ನು ಏನೋ ಕಾರಣ ಕೊಟ್ಟುಕೊಂಡು ಬಂದು ಮಾಡಿದೆ. (ಓದುಗರಿಲ್ಲದ್ದು ಕಾರಣವಲ್ಲ.) ಅಥವಾ ಅಲ್ಲಿ ಏನೂ [...]
ಬ್ಲಾಗಿಗರ ಕೂಟ
Posted in ತುಡಿತ, ಸುಮ್ಮನೆ, ಸೆಳೆತ on March 10, 2008 | No Comments »
ಅಯ್ಯೋ, ಎಲ್ಲರೂ ಸೇರ್ತಿದೀರ. ಅದೂ ನಮ್ಮ ಮನೆ ಹತ್ತಿರ. ಆದ್ರೆ ನಾನು ಎಲ್ಲೋ ದೂರ ಇದೀನಿ, ಛೇ! I only hope there’ll be more such meetings once I am back from my exile. ಅಲ್ಲಿಯ ತನಕ ನಾನು Dire Straitsನ So Far Away ಹಾಡು ಕೇಳ್ತಾ ಕಾಲ ಕಳೀತೀನಿ. ಆ ಬ್ಯಾಂಡ್‍ನ ಹೆಸರು ನನ್ನ ಸಧ್ಯದ ಪರಿಸ್ಥಿತಿಯನ್ನು ಸರಿಯಾಗಿ ಬಿಂಬಿಸುತ್ತದೆ.
ಇರಲಿ. ಆ ಕೂಟ ಆದಮೇಲೆ ಎಲ್ಲರ ರಿಪೋರ್ಟ್‍ಗಳನ್ನ ಓದ್ತೀನಿ. ಅವನ್ನೋದಿ [...]
ಶಿವರಾತ್ರಿಯ ಪೂಜಾ ಪ್ರೊಗ್ರ್ಯಾಮ್
Posted in ಟಾಯಂಪಾಸ್, ಸುಮ್ಮನೆ, ಹರಟೆ on March 7, 2008 | 2 Comments »
ಶಿವರಾತ್ರಿ, ಕೃಷ್ಣ ಜನ್ಮಾಷ್ಟಮಿಗಳ (ಹಾಗೂ ಶೈವ, ವೈಷ್ಣವರ) ಬಗ್ಗೆ ನಮ್ಮಲ್ಲೊಂದು ಹಳೆಯ ಜೋಕ್ ಇದೆ. ಶಿವರಾತ್ರಿಯ ದಿನ ಶೈವರು ಉಪವಾಸ ಮಾಡುತ್ತಾರೆ. ಆದರೆ ವೈಷ್ಣವರು ಪುಷ್ಕಳವಾಗಿ ಹೋಳಿಗಿ ಹೊಡೆಯುತ್ತಾರೆ. ಅದಕ್ಕೆ ವೈಷ್ಣವರ ವಿವರಣೆ - “ಅಲ್ಲರೀ, ಶಿವ ಹುಟ್ಟಿದ್ದು ನಮಗ ಸಂತೋಷ ಅಲ್ಲೇನು? ಅದಕ್ಕ ಹೋಳಿಗಿ ತಿಂದು ಅಚರಿಸತೀವಿ.” ಅದಕ್ಕೆ ಶೈವನೊಬ್ಬ ಹೊಳ್ಳಿ - “ಮಕ್ಕಳ್ರ್ಯಾ, ಹಂಗಾರ ಕೃಷ್ಣ ಹುಟ್ಟಿದ್ದಕ್ಕ ನಿಮಗ ದುಃಖ ಆಗಿರತದೇನು? ಅವತ್ತ್ಯಾಕ ಉಪವಾಸ ಮಾಡತೀರಿ?”, ಅಂದು ಮುಯ್ಯಿ ತೀರಿಸಿಗೊಂಡನಂತೆ.
ಹೀಗೆ ಇದನ್ನು ನೆನೆಯುತ್ತ ಗೆಳೆಯ [...]