ಗೇಮ್ ಥಿಯರಿಯ ಬಗ್ಗೆ ಒಂದಷ್ಟು ಬರಿಯುವ ಅಂತ ಇದೆ. ನಾನು ಎಷ್ಟೋ ವಿಷಯಗಳನ್ನು ಶುರು ಮಾಡಿ, ಮುಂದುವರೆಸುತ್ತೇನೆ ಎಂದು ಹೇಳಿ, ನಂತರ ಮತ್ತೇನೇನೋ ಬರೆಯುತ್ತ ಮೈಮರೆತುಬಿಡುತ್ತೇನೆ. ಒಂದು ಸರಣಿಯಲ್ಲಿ ಏನನ್ನೂ ಬರೆದು ರೂಢಿಯಿಲ್ಲ. ಇದೂ ಹಾಗೇ ಆಗುತ್ತದೆ. ಆದರೂ ನನಗೆ ಇದೊಂದು exciting ವಿಷಯಾಗಿರುವುದರಿಂದ ಆವಾಗಾವಾಗ ಬರೆಯುತ್ತಿರುತ್ತೇನೆ ಎಂದು ಹೇಳಬಲ್ಲೆ. ನಾನು ಹೇಳುವ ಸಂಗತಿಗಳು ಬಹಳೇ ಮೂಲಭೂತವಾದುವು (ಎಲ್ಲಾ ರೀತಿಯಲ್ಲೂ). ಆದ್ದರಿಂದ ಅನೇಕರಿಗೆ ಇವು ಈಗಾಗಲೇ ಗೊತ್ತಿರಲೂಬಹುದು. ನಾನು ಈ ಪೋಸ್ಟಿನಲ್ಲಿ ಗೇಮ್ ಥಿಯರಿಯ ಒಂದು ಪ್ರಮಾಣಭೂತ [...]
Read Full Post »
Posted in Uncategorized on May 19, 2008 | 1 Comment »
R.I.P. ವಿಜಯ್ ತೆಂಡೂಲ್ಕರ್.
Read Full Post »
Posted in Uncategorized on April 11, 2008 | 3 Comments »
ಶಿಕಾಗೋದ ಸುಪ್ರಸಿದ್ಧ ಸಿಯರ್ಸ್ ಟವರ್. ಅರ್ಧ ಕಿಲೋಮೀಟರಿನಷ್ಟು ಎತ್ತರವಿರುವ, ಉತ್ತರ ಅಮೆರಿಕದ ಅತ್ಯಂತ ಎತ್ತರದ ಕಟ್ಟಡ. ಈ ಕಟ್ಟಡದ ಮುಖ್ಯ ವಾಸ್ತುಶಿಲ್ಪಿ ಫಜಲುರ್ ರೆಹೆಮಾನ್ ಖಾನ್. ಬಾಂಗ್ಲಾದೇಶೀ ಮೂಲದ ಈತ ಜಗತ್ತಿನ ಶ್ರೇಷ್ಠ ಆರ್ಕಿಟೆಕ್ಟ್‍ಗಳ ಸಾಲಿನ ಮುಂಚೂಣಿಯಲ್ಲಿದ್ದವರು.
ಸಿಯರ್ಸ್ ಟವರ್‍ನ ಸ್ಕೈ ಡೆಕ್ಕಿನಿಂದ ಕಂಡಷ್ಟು ಜಗತ್ತಿನ ಒಂದು ನೋಟ.
ಉತ್ತರ ಅಮೆರಿಕದ ಪಂಚ ಮಹಾ ಸರೋವರಗಳಲ್ಲಿ ಒಂದಾದ ಲೇಕ್ ಮಿಶಿಗನ್. ಶಿಕಾಗೋ ಇದಕ್ಕೆ ಹೊಂದಿಕೊಂಡಿದೆ.
Read Full Post »
Posted in Uncategorized, tagged ಹರಟೆ, general, meta-post on February 1, 2008 | 2 Comments »
ನಾನೇ ನನ್ನ ಬ್ಲಾಗನ್ನು ದುರ್ಲಕ್ಷಿಸಿದ್ದಾಗಲೂ ಕೆಲ ಸಹೃದಯರು ಈ ತಾಣಕ್ಕೆ ಬಂದು ನನ್ನ ಲೇಖನಗಳನ್ನು ಓದಿ ಅನ್ನಿಸಿಕೆಗಳನ್ನು ಬರೆದಿದ್ದಾರೆ. ನಿಮ್ಮಂಥವರಿಂದಲೇ ಮಳೆ ಬೆಳೆ.. ಎಂದೆಲ್ಲ ಹೇಳುವುದಿಲ್ಲ. ಆದರೂ ಈ ಪ್ರೋತ್ಸಾಹದ ಮಾತುಗಳು ನನ್ನನ್ನು ಬರೆಯಲು ಹಚ್ಚಬಹುದೇನೋ! ಎಲ್ಲರಿಗೂ ವಂದನೆಗಳು. ನಾನು ನನ್ನ ಬ್ಲಾಗಿನಿಂದ ದೂರವುಳಿಯಲು (ನಿಜವಾದ) ಕಾರಣಗಳಲ್ಲೊಂದೆಂದರೆ ನನ್ನ ಬಳಿ ತಾತ್ಕಾಲಿಕವಾಗಿ laptop ಇಲ್ಲದಿದ್ದುದು. ಅದಕ್ಕೆ ಕಾರಣಗಳು ಎರಡು: ನನ್ನ laptopಗೆ ವಯಸ್ಸಾಗಿ ಅದು ಗೂರಲು ಶುರು ಮಾಡಿದ್ದು; ಆದರೆ ಅದಕ್ಕೂ ಮುಖ್ಯವಾಗಿ, ನಾನು ಅಮೇರಿಕೆಗೆ ಹೊರಟದ್ದು. [...]
Read Full Post »
Posted in Uncategorized on October 13, 2007 | 2 Comments »
ಬ್ಲಾಗ್ ಶುರು ಮಾಡಿ ಎಷ್ಟೋ ದಿನಗಳಾದರೂ ಏನೂ ಬರೆದಿಲ್ಲ. ಬರೆಯುವುದಕ್ಕೆ ಬೇಕಾದಷ್ಟಿದೆ. ವಿಚಾರಗಳಿವೆ, ಪ್ರತಿಮೆಗಳಿವೆ, ವಾದಗಳಿವೆ. ಇವತ್ತು ಕೂತು ಒಂದಷ್ಟು ಸಾಲನ್ನಾದರೂ ಬರೆಯಲೇಬೇಕು ಎಂದು ನಿಶ್ಚಯಿಸಿ ಪೆನ್ನು ಹಾಳೆ laptop ಎಲ್ಲವನ್ನು ಅಣಿಗೊಳಿಸಿ, ಪಕ್ಕದಲ್ಲಿ ಉದ್ದನೆಯ ಲೋಟದಲ್ಲಿ ಕಾಫಿಯೋ ಕರಿ ಚಹವೋ ಇಟ್ಟುಗೊಂಡು, ನನ್ನನ್ನು ಇನ್ನು ಬರೆಯದಂತೆ ತಡೆಯುವ ಶಕ್ತಿ ಅದಾವುದದು ಎಂದು ಗಹಗಹಿಸಿ (೮೦ರ ಹಿಂದಿ ಚಿತ್ರಗಳ ನಾಯಕನ “ದುನಿಯಾ ಕಿ ಕೊಯಿ ಭಿ ತಾಕತ್..” ನೆನೆಪಿಸಿಕೊಳ್ಳಿ ), ಕಣ್ಣು ಕಿರಿದು ಮಾಡಿ laptop ದುರುಗುಟ್ಟಿ [...]
Read Full Post »