ಇರಲಿ ಬನ್ನಿ

ಇನ್ನೊಮ್ಮೆ ಬರುವಾಗ
ಮರೆಯದೆ ಕುಂದಾ
ಕೊಂಡು ಬನ್ನಿ

ನಡುವಿನಂಗಳದ
ತುಳಸಿ
ದಿನವೆರಡು ತಡೆವಂತೆ
ನೀರೆರೆದು ಬನ್ನಿ

ಬಂದವರು ಎರಡು
ದಿನ ನಿಲ್ಲು-
ವುದು ಹೆಚ್ಚಲ್ಲ
ಯಾವುದಕ್ಕೂ ಜೋಕೆ-
ಯೆಂದು ಯಾರಿಗೊ
ಹೇಳಿ ಬನ್ನಿ

ಮಳೆಯಾಗಿದೆಯೆ?
ಇಲ್ಲಿ ಸಾಕಷ್ಟು ಮಳೆ
ಸಂಜೆಯ ಮೋಡ
ಕರಿ ಲಡ್ಡ

ಮಳೆಯಾಗಿದ್ದರೆ ಸರಿ
ನಿಶ್ಚಿಂತೆಯಿಂದ
ಹೊರಟು ಬನ್ನಿ

ಹಾಂ! ಮರೆತಿದ್ದೆ
ಹೇಗೂ ಮಳೆಯಾಗಿದೆಯಲ್ಲ
ಜೋಳ ಬಂದಿರಬೇಕಲ್ಲ
ಕಮ್ಮನೆಯ ಬಿಳಿಜೋಳ
ಕೊಂಡೇಕೆ ತಿನ್ನುವುದು?

ಅತ್ತಿಗೆಗೆ ತೆಗೆ-
ದಿರಿಸಲು
ತಪ್ಪದೆ ಹೇಳಿ

ಒಂದೆರಡು ಕೈಚೀಲ
ಹೆಚ್ಚೇನು ಒಜ್ಜೆಯಲ್ಲ
ಸೆಜ್ಜೆಯಿದ್ದರೆ
ತುಸು, ನಾಕಾಳು

ಲುಂಗಿಯೊಂದಿದೆಯಿಲ್ಲಿ
ಒಳರಿವೆ ಶರ್ಟು ಮಾತ್ರ
ಪ್ಲ್ಯಾಸ್ಟೀಕಿನಲ್ಲಿ
ಸುತ್ತಿಕೊಂಡು ಬನ್ನಿ

ಮಳೆಯಲ್ಲಿ ನೆಂದಿರೆ
ಬಟ್ಟೆ ಒಣಗವೆ
ಬೇಸರವೆ?
ಏನ್ಮಾಡುವುದು ಹೇಳಿ
ಸ್ವಲ್ಪ ದಿವಸ

ನನಗೂ ಆಗುತ್ತದಲ್ಲ
ಏನಿದ್ದೂ ಏನಿಲ್ಲ
ಆದರೂ ಪರವಾಗಿಲ್ಲ
ಆಗೊಮ್ಮೆ ಈಗೊಮ್ಮೆ
ಬರುತ್ತೀರಲ್ಲ

ಸಿಗರೇಟು ಕಚ್ಚುತ್ತೀರಾ
ಕಾಲವ್ಯಯದ ನೆವ ಹೇಳಿ
ಮೂರಿಂಚು ಕಡ್ಡಿಯದು
ದೂರ ಹಿಂಗಿಸಲುಂಟೇನು
ಬಿಡಿ ಬಿಡಿ
ಬಂದು ಬಿಡಿ

ಸಿಗರೇಟು ವಾಸನೆ
ಮುಚ್ಚುವ ಹಂಗ್ಯಾಕೆ
ವಿರಹ ಸಂಕೇತಿಯದು
ಹಾಳು ಪೆಪ್ಪರ್ ಮಿಂಟ್ಯಾಕೆ
ಸಿಗರೇಟು ವಾಸನೆ
ಬರಲಿ ಬನ್ನಿ

ಏನು? ಕುಂದಾ..
ಮರೆತಿರಾ
ಹಹ್ಹಹ್ಹಾ..
ಇರಲಿ ಬನ್ನಿ

2 thoughts on “ಇರಲಿ ಬನ್ನಿ

  1. ಚಕೋರ,
    ಎಲ್ಲಿದ್ದಿರಿ ಇಷ್ಟು ದಿನ? ಇಷ್ಟು ಒಪ್ಪುವ ಶೈಲಿಯಲ್ಲಿ ಬರೆವವರು ಸುಮ್ಮನಿದ್ದಿರಿ ಹೇಗೆ?
    ಈ ಮಾನೋಲಾಗ್ ಪಕ್ಕಾ ನನ್ನ ಪ್ರೀತಿಯ ಕವಿ ರಾಬರ್ಟ್ ಬ್ರೌನಿಂಗನ ನೆನಪು ಬರಿಸುತ್ತದೆ.
    ನೀವು ಇನ್ನು ಬರೆಯದೆ ಇದ್ದರೆ ನಾವು ಬಿಟ್ಟೇವೆಯೆ?
    ನಮ್ಮ ’ಶ್ರಂಗೇರಿಯ ಉಪಚಾರ’ ನೆನೆಸಿ ನಕ್ಕೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s