ಬ್ಲಾಗ್ ಶುರು ಮಾಡಿ ಎಷ್ಟೋ ದಿನಗಳಾದರೂ ಏನೂ ಬರೆದಿಲ್ಲ. ಬರೆಯುವುದಕ್ಕೆ ಬೇಕಾದಷ್ಟಿದೆ. ವಿಚಾರಗಳಿವೆ, ಪ್ರತಿಮೆಗಳಿವೆ, ವಾದಗಳಿವೆ. ಇವತ್ತು ಕೂತು ಒಂದಷ್ಟು ಸಾಲನ್ನಾದರೂ ಬರೆಯಲೇಬೇಕು ಎಂದು ನಿಶ್ಚಯಿಸಿ ಪೆನ್ನು ಹಾಳೆ laptop ಎಲ್ಲವನ್ನು ಅಣಿಗೊಳಿಸಿ, ಪಕ್ಕದಲ್ಲಿ ಉದ್ದನೆಯ ಲೋಟದಲ್ಲಿ ಕಾಫಿಯೋ ಕರಿ ಚಹವೋ ಇಟ್ಟುಗೊಂಡು, ನನ್ನನ್ನು ಇನ್ನು ಬರೆಯದಂತೆ ತಡೆಯುವ ಶಕ್ತಿ ಅದಾವುದದು ಎಂದು ಗಹಗಹಿಸಿ (೮೦ರ ಹಿಂದಿ ಚಿತ್ರಗಳ ನಾಯಕನ “ದುನಿಯಾ ಕಿ ಕೊಯಿ ಭಿ ತಾಕತ್..” ನೆನೆಪಿಸಿಕೊಳ್ಳಿ ), ಕಣ್ಣು ಕಿರಿದು ಮಾಡಿ laptop ದುರುಗುಟ್ಟಿ ತಲೆಕೆರೆದು ಮೈಮುರಿಯುವಷ್ಟರಲ್ಲಿ ದಾಪು ಹತ್ತಿ ಉತ್ಸಾಹ ಪುಸ್ಸೆಂದು ಹೋಗಿರುತ್ತದೆ.
ಇರಲಿ. ಸಿಂಗಪೋರ್ ಬಗ್ಗೆ ಒಂದು ಲೇಖನ ಅರ್ಧ ಬರೆದು ಇಟ್ಟಿದ್ದೇನೆ. ಅದನ್ನು ಬೇಗ ಮುಗಿಸಿ ಛಾಪಿಸಬೇಕು. ಕತೆಯೊಂದನ್ನು ಬರೆಯುವ ಆಸೆಯಿದೆ. ಅದೆಷ್ಟು ದಿನಗಳಾದವು ಬರೆದು!
ಚಕೋರ,
ಇನ್ನು ನಿಮ್ಗೆ ಬರಿಯ್ಲಿಕ್ಕೆ ಸುಪಾರಿ ತಕ್ಕೊಂಡು ನಾವು ಹಿಂದೆ ಬೀಳಬೇಕೂ ಅಂತ ಕಾಣತ್ತೆ!! ಕ್ಯಾ ಮಾಮು? ಕಾಯ್ತಾ ಇದೀವಿ..ಆಕಳಿಸಿಕೊಂತಾ..
ಟೀನಾ:
ನೀವು ಹೀಗೆ ಬೆದರಿಸಿದರೆ ಹೇಗೆ? ಮೊದಲೇ ತೇಕು ಹತ್ತಿದೆ. ಇರಲಿ. ಬರೆದೇ ತೀರುತ್ತೇನೆ.