ತಲೆಮರೆಸಿಕೊಳ್ಳುವ ಕಲೆ

ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.

’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.

ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.

ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.

ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.

ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ದೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.

ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.

4 thoughts on “ತಲೆಮರೆಸಿಕೊಳ್ಳುವ ಕಲೆ

 1. ನಾನು ಹೇಳಿರ್ಲಿಲ್ವಾ, ನೀವು ಒಳ್ಳೆ ಅನುವಾದಕರು ಅಂತ. ಸುಮ್ಸುಮ್ನೆ ಹಂಗೆಲ್ಲ ಹೇಳಲ್ಲ ಸ್ವಾಮಿ ನಾನು! ಮೂಲದ ಸ್ವಾದ ಇಲ್ಲಿ ಬಂದಮೇಲು ಹಾಗೇ ಉಳಿದುಕೊಂಡಿದೆ. ಸುಧನ್ವರ ಬ್ಲಾಗ್ ಓದಿ. ನನ್ನ ಬ್ಲಾಗ್ರೋಲಿನಲ್ಲಿ ಲಿಂಕಿದೆ. ಅವರ ಸಿಟಿ ಪಾಡ್ದನಗಳು ನಿಮಗೆ ಇಷ್ಟವಾದಾವು.

  – ಟೀನಾ.

 2. ನಮಸ್ತೇ,
  ಬಹಳ ಸೊಗಸಾದ ಅನುವಾದ. ’ತಲೆ ಮರೆಸಿಕೊಳ್ಳುವ ಕಲೆ’ ಆಯ್ಕೆ ಚೆನ್ನಾಗಿದೆ.
  ಮೂಲ ಓದಿದೆ. ಎರಡೂ ಸಮನಾಗಿ ಖುಷಿ ಕೊಟ್ಟಿತು.
  ಮತ್ತೊಮ್ಮೆ, ಬಹಳ ಚೆನ್ನಾಗಿದೆ ಕವಿತೆ….

  -ಚೇತನಾ ತೀರ್ಥಹಳ್ಳಿ

 3. ಚೇತನಾ:
  ಥ್ಯಾಂಕ್ಸ್! ಕೆಲವು ಪದ್ಯಗಳೇ ಹಾಗೆ: ಅಗಾಧವಾಗಿದ್ದುಕೊಂಡೇ ಸರಳವಾಗಿರುತ್ತವೆ. ಆರಾಮಾಗಿ ಅಲ್ಲಿಂದಿಲ್ಲಿಗೆ ಹರಿಯುತ್ತವೆ.
  ನಮಸ್ತೆ, ಬರುತ್ತಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s