“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.
ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.
***
ಇದಕ್ಕೆ ಉತ್ತರ ಇನ್ನೊಮ್ಮೆ.
“…inneshtu dina heege…”
Chakorana sanshodhane mugivavarege…!!
ಹಯ್ಯೋ, ನಮಗೇ ದುಃಖ ತಡೀಲಿಕ್ಕಾಗ್ತಿಲ್ಲ! ಬೆಂಗಳೂರಿಗೆ ಬಂದಾಗ ಆ ’ಹಿಸ್ಟಾರಿಕ್’ ಟೈಂಪೀಸನ್ನ ತೋರಿಸ್ಬಿಡಿ ಮಾರಾಯ್ರೆ!
ನೀಕೃಕು: ಛೇ!
ಟೀನಾ: ನನ್ನ ಹತ್ತಿರ ನಿಮಗೆ ಯಾವ ಟೈಂಪೀಸೂ ವಾಚೂ ಸಿಗಲ್ಲ. ನಾನು ಕಾಲಾತೀತ!
ಚೆನಾಗಿದೆ.
ಉತ್ತರ ಕೊಡುವ ಕವಿತೆಗೆ ಕಾಯುತ್ತಿದ್ದೇನೆ.
ಇಂಟರೆಸ್ಟಿಂಗ್ ಅನ್ನಿಸಿದ್ದು ಅಂದ್ರೆ ಪ್ರಶ್ನೆ ಕೇಳಿದವರಿಗೇ ಉತ್ತರ ಗೊತ್ತಿರುವುದು.. 🙂
ಪ್ರೀತಿಯಿಂದ
ಸಿಂಧು
ಕಾಲಾತೀತರೋ ನೀವು? ಓಹೊ, poet and the persona in the monologue is supposed to be different, no? ಅರೆ ಈ ಪುಟ್ಟ ಲಿಟರರಿ ಡೀಟೇಲು ಮರೆತು ನಿಮಗೆ ನೋವು ಉಂಟುಮಾಡಿದೆ. ಆದ್ರು ಪರ್ವಾಗಿಲ್ಲ ಬಿಡಿ, ನಂಗೇನ್ ಬೇಸ್ರ ಆಗಿಲ್ಲ!! 😉
ಸಿಂಧು:
ಇಂಟರೆಸ್ಟಿಂಗ್ ಅದಲ್ಲ; ಇಂಟರೆಸ್ಟಿಂಗ್ ಎಂದರೆ ಪ್ರಶ್ನೆ ಕೇಳಿದವರಿಗೂ ಉತ್ತರ ಕೊಡುವವರಿಗೂ ಉತ್ತರವಿಲ್ಲದ್ದು ಗೊತ್ತು. ಆದರೂ ಕೇಳುತ್ತಾರೆ.
ಟೀನಾ:
ನಾನು ನೋವು, ಬೇಜಾರು, ಲಿಟರರಿ ಡೀಟೇಲು ಇವನ್ನೂ ಮೀರಿದವನು!