ಇನ್ನೊಬ್ಬ ನೊಬೆಲ್ “ಖಳ ಸಾಹಿತಿ”ಯ ತಪ್ಪೊಪ್ಪಿಗೆಯ ಮೆಲುಕು

ವಿ. ಎಸ್. ನೈಪಾಲ್ ಒಮ್ಮಿಂದೊಮ್ಮೆಲೆ ಸುದ್ದಿಯಲ್ಲಿದ್ದಾರೆ. ಬ್ಲಾಗುಗಳಲ್ಲಿ ಬರಹಗಳೂ, ವಾದಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ, ಹಳೆಯ ಕಿಡಿಯನ್ನು ಹೊತ್ತಿಸುವ ಉದ್ದೇಶದಿಂದ ಊದುಗೊಳವೆ ಹಿಡಿದಿದ್ದೇನೆ. ಇದು ಗುಂತರ್ ಗ್ರಾಸ್‍ರ ತಪ್ಪೊಪ್ಪಿಗೆಯ ಬಗ್ಗೆ.

ಅಗಸ್ಟ್ ೨೦೦೬ರಲ್ಲಿ, ಸಾಹಿತ್ಯ ಜಗತ್ತು ತಲ್ಲಣಗೊಂಡಿತು. ಸಂದರ್ಶನವೊಂದರಲ್ಲಿ ಗುಂತರ್ ಗ್ರಾಸ್ ತಾವು ಯುವಕರಾಗಿದ್ದಾಗ ವ್ಯಾಫ಼ೆನ್ಸ್-ಎಸ್‍ಎಸ್‍ನ ಸದಸ್ಯರಾಗಿದ್ದರೆಂದು ಬಹಿರಂಗಗೊಳಿಸಿದರು. ೬೦ ವರ್ಷಗಳ ದೀರ್ಘಕಾಲದ ನಂತರ ಯಾರಿಗೂ ಗೊತ್ತಿಲ್ಲದ ಈ ಸುದ್ದಿಯನ್ನು ನೀಡಿ ಗ್ರಾಸ್ ಎಲ್ಲರಿಗೂ ಶಾಕ್ ನೀಡಿದರು. ಕೋಲಾಹಲವೆದ್ದಿತು. ಗ್ರಾಸ್‍ರ ತಪ್ಪೊಪ್ಪಿಗೆಯ ಹಿನ್ನೆಯಲ್ಲಿ ಅವರ ಸಾಹಿತ್ಯವನ್ನೂ ವ್ಯಕ್ತಿವನ್ನೂ ಮರುವಿಶ್ಲೇಷಿಸುವ ಅಗತ್ಯವಿದೆಯೆಂದು ಎಷ್ಟೋ ಜನ ಪ್ರತಿಪಾದಿಸಿದರು. ಹಾಗೆಯೇ ಸಲ್ಮಾನ್ ರಶ್ದಿಯಂಥ ಘಟಾನುಘಟಿಗಳು ಗ್ರಾಸ್‍ರ ಬೆಂಬಲಕ್ಕೆ ನಿಂತರು. ಆವಾಗ ಕನ್ನಡ ಬ್ಲಾಗುಗಳಲ್ಲಿ ಇದರ ಬಗ್ಗೆ ಚರ್ಚೆಗಳಾದವೋ ಇಲ್ಲವೋ ಲಕ್ಷ್ಯದಲ್ಲಿಲ್ಲ, ಆದರೆ ನಾನೋದುತ್ತಿದ್ದ ಕೆಲ ಇಂಗ್ಲಿಶ್ ಬ್ಲಾಗುಗಳಲ್ಲಿ ರಭಸದ ಚರ್ಚೆಗಳಾದುವು. ೬೦ ವರ್ಷಗಳ ಕಾಲ ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ನಮ್ಮೆಲ್ಲರ ಸಾಮೂಹಿಕ ಆತ್ಮಪ್ರಜ್ಞೆಯಂತೆ ಪೋಸು ಕೊಡುತ್ತಿದ್ದ, ನೈತಿಕತೆಯ ಅಧಿಕೃತ ವಕ್ತಾರನಂತೆ ಮಾತಾಡುತ್ತಿದ್ದ ಗ್ರಾಸ್ ಒಬ್ಬ ಹಿಪಾಕ್ರಿಟ್ ಎಂದು ಕೆಲವರು ಅವರನ್ನು ಜರಿದರು.

ಮುಂದೇನಾಯಿತೋ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ. ಅದಕ್ಕೂ ಮುಖ್ಯವಾಗಿ, ನೈಪಾಲ್ ಕೇಸಿನಲ್ಲಿ ನಿಮ್ಮ ಅಭಿಪ್ರಾಯ ಮಂಡಿಸಿದಂತೆ ಇದರ ಬಗೆಗೂ ನಿಮ್ಮ ಅಬಿಪ್ರಾಯಗಳನ್ನು ಹೇಳುತ್ತೀರಾ? ತಿಳಿದುಕೊಳ್ಳುವ ಆಸಕ್ತಿಯೂ ಇದೆ. ಅದೂ ಅಲ್ಲದೆ, ಇಂಥ ಸಂದರ್ಭಗಳಲ್ಲಿ ಆಗುವ ಗೊಂದಲ ತಳಮಳಗಳ ನೆಲೆ ಯಾವುದು, ವೈಯಕ್ತಿಕ, ಸಾಮಾಜಿಕ, ಲೇಖಕನ ಬದುಕು-ಬರಹಗಳ ಡೈಕಾಟಮಿ, ಇವೇ ಮೊದಲಾದ ಪ್ರಶ್ನೆಗಳಿಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಗಬಹುದು. (ಅಥವಾ ಗೊಂದಲ ಹೆಚ್ಚಾಗಬಹುದು.)

2 thoughts on “ಇನ್ನೊಬ್ಬ ನೊಬೆಲ್ “ಖಳ ಸಾಹಿತಿ”ಯ ತಪ್ಪೊಪ್ಪಿಗೆಯ ಮೆಲುಕು

  1. ಗ್ರಾಸ್ ಯುವಕನಾಗಿದ್ದಾಗ ವ್ಯಾಫ಼ೆನ್-ಎಸ್‍ಎಸ್ ಸದಸ್ಯರಾಗಿದ್ದರಂತೆ. ಇದು ನಾತ್ಸೀಗಳ ಎಸ್‍ಎಸ್‍ನ ಸಶಸ್ತ್ರ ಪಡೆ. ನಾತ್ಸೀ ತತ್ವಗಳಿಗೆ ಅತ್ಯಂತ ಪ್ರಬಲವಾಗಿ ಬದ್ಧತೆ ಇರುವಂಥ ಸ್ವಯಂಸೇವಕರು ಇದರ ಸದಸ್ಯರಾಗುತ್ತಿದ್ದರು. ಗ್ರಾಸ್ ಈ ಸಂಘಟನೆಯ ಮೆಂಬರಾಗಿದ್ದರು ಎನ್ನುವುದನ್ನು ಒಮ್ಮೆಲೆ ಗ್ರಹಿಸಿದವರು ದಿಗ್ಭ್ರಮೆಗೊಳಗಾದರು. ಜರ್ಮನಿಯ ನಾತ್ಸೀ ಚರಿತ್ರೆಯನ್ನು ಖಂಡಿಸುವುದರಲ್ಲಿ ಎಂದೂ ಹಿಂದೆಮುಂದೆ ನೋಡಿರದಿದ್ದ ಗ್ರಾಸ್, ಜರ್ಮನಿಗೆ ಅಂಟಿಕೊಂಡ ನಾತ್ಸೀ ಕಳಂಕವನ್ನು ದುರ್ಲಕ್ಷಿಸುವವರನ್ನು ಟೀಕಿಸುತ್ತಿದ್ದವರು, ಸ್ವತಃ ತಾವೇ ಅದರಲ್ಲಿ ಭಾಗಿಯಾಗಿದ್ದನ್ನು ೬೦ ವರ್ಷಗಳ ಕಾಲ ಮುಚ್ಚಿಟ್ಟದ್ದನ್ನು ಕೇಳಿ ಬಹಳಷ್ಟು ಜನ ಕೆಂಡಾಮಂಡಲವಾದರು. ಇನ್ನು ಕೆಲವರು, ಅವರೊಬ್ಬ ತರುಣನಾಗಿದ್ದ ಕಾಲದಲ್ಲಿ ಮಾಡಿದ್ದ ತಪ್ಪನ್ನು ಹಿಡಿದುಕೊಂಡು ಅವರ ಕೊಡುಗೆಯನ್ನು ಅಲ್ಲಗಳೆಯುವುದು ತಪ್ಪು ಎಂದು ಗ್ರಾಸ್ ಜೊತೆ ನಿಂತರು. ಸ್ವತಃ ಗ್ರಾಸ್, ಅದಾಗಿದ್ದು ಪೂರ್ತಿ ಅವರ ತಿಳುವಳಿಕೆಯಿಂದಲ್ಲ ಎಂದು ಸ್ಪಷ್ಟೀಕರಿಸಿದರು. ಅದಾಗಿ ಒಂದೂವರೆ ವರ್ಷವೇ ಆಗಿದೆ. ನಂತರ ಏನಾಯಿತು ಎಂದು ಗೊತ್ತಿಲ್ಲ.

    ನಾರದ ಅಂತೀರಾ? ಪರವಾಗಿಲ್ಲ ಬಿಡಿ. ಏನೋ ಒಂದು ಬಿರುದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s