ಇದು ದ ನ್ಯೂ ಯಾರ್ಕರ್ ಪತ್ರಿಕೆಯ ಮಾರ್ಚ್ ೨೯, ೧೯೭೬ರ ಕವರ್ ಪೇಜ್. ಕಲಾವಿದ, ಅದೇ ಪತ್ರಿಕೆಯ ಕಾರ್ಟೂನಿಸ್ಟ್ ಸಾಲ್ ಸ್ಟೈನ್ಬರ್ಗ್. ಅತ್ಯಂತ ಪ್ರಸಿದ್ಧ ಚಿತ್ರವಾಗಿರುವ ಇದು “View of the World from 9th Avenue” ಅಥವಾ “A New Yorker’s View of the World” ಎಂದು ಕರೆಯಲ್ಪಡುತ್ತದೆ. ಇದು ನನಗೆ ತುಂಬಾ ಇಷ್ಟವಾಗುವ illustration ಕೂಡ. ಇಲ್ಲಿ ಉಲ್ಲೇಖಿಸಿರುವ ೯ನೇ ಅವೆನ್ಯು, ನ್ಯೂ ಯಾರ್ಕ್ನ ಮ್ಯಾನ್ಹ್ಯಾಟನ್ನಲ್ಲಿದೆ. ನ್ಯೂ ಯಾರ್ಕಿಗರ world view ಎಷ್ಟು ಸಂಕುಚಿತ ಎಂಬುದನ್ನು ಅತ್ಯಂತ ಸ್ಪಷ್ಟ ಹಾಗೂ ಪ್ರಖರವಾದ ವ್ಯಂಗ್ಯದಿಂದ ಸೆರೆ ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ಇದು ನ್ಯೂ ಯಾರ್ಕಿಗರದಷ್ಟೇ ಅಲ್ಲದೆ ಒಟ್ಟಾರೆ ಅಮೆರಿಕದ ಜನರ ತಮ್ಮ ತಮ್ಮ ಸಣ್ಣ ಪರಿಧಿಗಳಲ್ಲಿ ಆನಂದತುಂದಿಲರಾಗಿದ್ದು ಉಳಿದದ್ದೆಲ್ಲ ಸಂಬಂಧವಿಲ್ಲದ್ದು, ಮಹತ್ವದ್ದಲ್ಲದ್ದು ಎಂದು ಭಾವಿಸುವ ಸ್ವಭಾವದ ಲೇವಡಿಯಾಗಿದೆ.
ನನ್ನ ’ಪ್ರಕ್ರಿಯೆಗಳು ಮಶೀನುಗಳು’ ಪೋಸ್ಟಿಗೆ ಶ್ರೀಪ್ರಿಯೆಯವರ ಕಮೆಂಟು ಇದನ್ನು ನೆನಪಿಸಿತು. ಅವರ ಕಮೆಂಟಿಗೆ ಉತ್ತರಿಸುತ್ತ, ಒಮ್ಮೆಲೇ ಇದರ ಬಗ್ಗೆ ಬರೆಯೋಣವೆನ್ನಿಸಿತು. ವಿವರವಾಗಿ ಮುಂದಿನ ಪೋಸ್ಟಿನಲ್ಲಿ ಬರೀತೀನಿ. ಸದ್ಯಕ್ಕೆ ನಮ್ಮ ಕರ್ನಾಟಕದ ಐದು ಕೋಟಿ ಓದುಗ ದೇವತೆಗಳಿಗೆ ಇದನ್ನು ನೋಡಿ ಏನೆನ್ನಿಸಿತು ಹೇಳಿ. ಸ್ವಲ್ಪ ಗಮನವಿಟ್ಟು ಚಿತ್ರವನ್ನು ನೋಡಿ ಸ್ಟೈನ್ಬರ್ಗ್ ತನ್ನ ವ್ಯಂಗ್ಯವನ್ನು ಹೇಗೆ ಅಭಿವ್ಯಕ್ತಿಸಿದ್ದಾನೆ ಎಂಬುದನ್ನು ಕಂಡುಕೊಳ್ಳಿ. ಹಾಗೇ ನೀವು ಕಂಡುಕೊಂಡದ್ದನ್ನು ಇಲ್ಲಿ ಬರೆಯಿರಿ.
ಈ ಚಿತ್ರ ಇನ್ನೊಂದು ಕಾರಣಕ್ಕಾಗಿ ಬಹಳ ಮಹತ್ವದ್ದಾಗಿ ಬೆಳೆದು ಬಂದಿದೆ. ಚಿತ್ರದ ವಿನ್ಯಾಸ ಸೋಶಿಯಲ್ ನೆಟ್ವರ್ಕುಗಳಲ್ಲೂ ಸಂಪರ್ಕ ಜಾಲಗಳಲ್ಲೂ ಕೆಲ ಮಹತ್ವದ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. ಹೀಗಾಗಿ ವ್ಯಂಗ್ಯಕ್ಕೆ ಸೀಮಿತಾಗದೆ ದೊಡ್ಡ ಅರ್ಥವ್ಯಾಪ್ತಿ ಕಂಡುಕೊಂಡಿದೆ. ಅದೆಲ್ಲದರ ಬಗ್ಗೆ ಇನ್ನೊಮ್ಮೆ. ಸದ್ಯಕ್ಕೆ, ಅದೆಲ್ಲದರ ಹಂಗು ಬಿಟ್ಟು ಸುಮ್ಮನೆ ಚಿತ್ರವನ್ನು ನೋಡಿ ಆನಂದಿಸಿ.
ChakOra,
Jagattu ombhattane muKhya rastegE nintu biTTide yAke?
– Chetana
ನನ್ನ ಕೆಲವೇ ಕೆಲವು ರೆಗ್ಯುಲರ್ ಓದುಗರು ಇತ್ತೀಚೆಗೆ ಈ ಬ್ಲಾಗನ್ನು ಓದುವುದನ್ನು, ಕಮೆಂಟು ಬರೆಯುವುದನ್ನು ನಿಲ್ಲಿಸಿದ್ದಾರಲ್ಲ, ಅದಕ್ಕೆ 😉
😦
ನೋಡು, ನೀನು ಕಮೆಂಟು ಬರೆದ ತಕ್ಷಣ ಹೊಸ ಪೋಸ್ಟು ಬರೆದುಬಿಟ್ಟೆ.
ಚಕೋರ,
ಇಡೀ ಪ್ರಪಂಚವೇ ತಮ್ಮ ಮನೆಯ ಅಂಗಳದಿಂದ ಶುರುವಾಗಿ ವಾಪಾಸು ಅಲ್ಲಿಗೇ ಬಂದಿ ನಿಂತುಬಿಡುತ್ತದೆ, ತಮ್ಮದು ಮಾತ್ರ ನಾಗರೀಕತೆ, ಉಳಿದವರೆಲ್ಲ ಗೌಣ ಎನ್ನುವ ಅಮೆರಿಕನ್ ಮನೋಭಾವನೆಗೆ ಕನ್ನಡಿ ಇಟ್ಟಹಾಗಿದೆ ಈ ಕಾರ್ಟೂನು. ಅಪರೂಪಕ್ಕೆ ಸುಮಾರು ಹೊತ್ತು ದಿಟ್ಟಿಸುವಂತೆ ಮಾಡಿತು. 😉 ಟ್ಯಾಂಕ್ಸು ಕಣ್ರಿ.
ಟೀನಾ:
ಹೌದು. ೯ನೇ ಮುಖ್ಯರಸ್ತೆಯಲ್ಲಿರುವ ಕಾರುಗಳು, ಓಡಾಡುತ್ತಿರುವ ಜನರು, ಮುಂದೆ ೧೦, ೧೧ಕ್ಕೆ ಮಸುಕಾಗುತ್ತ, ನದಿಯೊಂದು ಅಡ್ಡ ಬಂದು, ಅಮೆರಿಕಾದ್ದೇ ಉಳಿದ ಭಾಗ ಒಂದು ಚೌಕೋನದಲ್ಲಿನ ಕೆಲ ಗುಡ್ಡಗಳಲ್ಲಿ ಮುಗಿದುಬಿಡುತ್ತದೆ. ಅಲ್ಲೇ ಎಲ್ಲೋ ಅಕ್ಕಪಕ್ಕ ಕೆನಡಾ ಮತ್ತು ಮೆಕ್ಸಿಕೋಗಳಿವೆಯೇನೋ. ಇನ್ನುಳಿದ ಜಗತ್ತೆಂದರೆ ಪೆಸಿಫಿಕ್ ಮಹಾಸಾಗರ, ಅದರಾಚೆ ಏಷ್ಯಾ. ಏಷ್ಯಾ ಎಂದರಾದರೂ ಏನು? ರಷ್ಯಾ, ಚೈನಾ ಹಾಗೂ ಜಪಾನ್ ಎಂಬ ೩ ಗುಬುಟಿಗಳು. ಎಲ್ಲವೂ ಒಂದೇ ಸರಳರೇಖೆಯಲ್ಲಿ. ನೇರವಾದ ನೋಟ!
[…] ನೇರ ಸ್ಫೂರ್ತಿ ಸಾಲ್ ಸ್ಟೈನ್ಬರ್ಗ್ನ ’೯ನೇ ಮುಖ್ಯರಸ್ತೆ’ಯ ಚಿತ್ರ. ಸ್ಟೈನ್ಬರ್ಗ್ನ ಚಿತ್ರ ಒಂದು ಸಾಮಾಜಿಕ […]