ಕನ್ನಡ ಕಾಮೆಡಿ ಸ್ಕೆಚ್ಚುಗಳು

ಇತ್ತೀಚೆಗೆ ಬ್ರಿಟಿಶ್ ಕಾಮೆಡಿಯ ಬಗ್ಗೆ ಮಾತಾಡಿದೆವಲ್ಲ. ಒಂದು ರೀತಿಯಲ್ಲಿ “ಪೈಥನೆಸ್ಕ್” ಎಂದು ಹೇಳಬಹುದಾದ ಸಣ್ಣ ಸಣ್ಣ ಸ್ಕೆಚ್‍ಗಳನ್ನು ನಮ್ಮವರೇ ಆದ ಹರೀಶ್ ಕುಮಾರ್ ಎನ್ ಹಾಗೂ ಅವರ ಗೆಳೆಯರು ಮಾಡಿದ್ದಾರೆ. ಅವರ ಲೀಲೆಗಳನ್ನು ಯೂಟ್ಯೂಬ್‍ನಲ್ಲಿ ಇಲ್ಲಿ ನೋಡಬಹುದು. ಪೈಥನೆಸ್ಕ್ ಎಂದು ಹೇಳಿದೆನಲ್ಲ. ಇವು ಗುಣಮಟ್ಟದಲ್ಲಿ ಅಲ್ಲದಿದ್ದರೂ ಶೈಲಿಯಲ್ಲಿ ಆ ನುಡಿಯನ್ನು ಹೋಲುತ್ತವೆ. ಒಂದಷ್ಟು ಚುರುಕಾಗಿವೆ ಕೂಡ. ಉದಾಹರಣೆಗೆ: ಅನಂತಮೂರ್ತಿ ಹಾಗೂ ಕಪ್ಪಣ್ಣ, ಭಾರತರತ್ನ ಯಾರಿಗೆ ಕೊಡಬೇಕು ಎಂದು ಚರ್ಚಿಸುತ್ತಾರೆ; ಅನಂತಮೂರ್ತಿ, ಮೊಟ್ಟಮೊದಲಿಗೆ ಅಕ್ಬರನಿಗೆ ಭಾರತರತ್ನ ಕೊಟ್ಟು ನಂತರ ಉಳಿದವರ ಬಗ್ಗೆ ಯೋಚಿಸಬೇಕೆಂದು ಮೇಲಿಂದಮೇಲೆ ಪ್ರತಿಪಾದಿಸುತ್ತಾರೆ. ಇನ್ನೊಂದರಲ್ಲಿ ಪ್ರತಾಪ್ ಸಿಂಹ, ಸುನೀಲ್ ಜೋಶಿಯ ಪುಸ್ತಕ ಬಿಡುಗಡೆಯ ನೆವದಲ್ಲಿ ಇದ್ದಬದ್ದವರನ್ನೆಲ್ಲ ಬೈಯ್ಯತೊಡಗುತ್ತಾರೆ.

ಇನ್ನೂ ಚುರುಕಾಗಬೇಕು. ಹೆಚ್ಚು ಬಿಗಿ ಬೇಕು. ಆದರೆ ಒಟ್ಟಾರೆಯಾಗಿ ಉತ್ತಮ ಪ್ರಯತ್ನ. ನನಗನ್ನಿಸುವುದೆಂದರೆ, ಹರೀಶ್ ಹಾಗೂ ಗೆಳೆಯರಿಗೆ ಭಾಷೆ ಹಾಗೂ ವಿಷಯವಸ್ತುಗಳ ಮೇಲೆ ಹಿಡಿತವಿದೆ. ಹೀಗಾಗಿ ಅವರಿಂದ ಇನ್ನೂ ಒಳ್ಳೆಯ ಕೊಡುಗೆ ನಿರೀಕ್ಷಿಸಬಹುದು. ಆದ್ದರಿಂದ ಈ ಬ್ಲಾಗಿನ ಓದುಗರು ಅವರ ಪ್ರಯತ್ನವನ್ನು ಗಮನಿಸಬೇಕೆಂದು ನನ್ನ ವಿನಂತಿ. ಗಮನಿಸುವುದಷ್ಟೇ ಅಲ್ಲದೆ ನಿಮ್ಮ ನಿಮ್ಮ ಬ್ಲಾಗುಗಳ ಮೂಲಕ, ಹಾಗೂ ಅವಧಿ, ಮ್ಯಾಜಿಕ್ ಕಾರ್ಪೆಟ್‍ನಂಥ ಬಹು ಓದುಗರನ್ನು ಹೊಂದಿದ ಬ್ಲಾಗುಗಳ ಮೂಲಕ, ಅವರ ಪ್ರಯತ್ನಕ್ಕೆ ಹೆಚ್ಚಿನ ಪ್ರಚಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಅದರಿಂದ ಹುರುಪಾಗಿ ಹರೀಶ ಮತ್ತು ಗೆಳೆಯರು, ಟಾಯಂಪಾಸ್‍ಗಾಗಿ ’ಆ..’ ಎಂದು ಬಾಯ್ದೆರೆದು ಕೂತಿರುವ ಕನ್ನಡದ ಫಾಲ್ತೂ ಮಂದಿಗೆ ತಮ್ಮ ಹಾಸ್ಯವನ್ನು ಇನ್ನಷ್ಟು ಬಡಿಸಲಿ. ಧನ್ಯವಾದ.

***

ಮೊನ್ನೆ ಒಂದು ಸೆಮಿನಾರಿನಲ್ಲಿ ಅಚಾನಕ್ಕಾಗಿ ನನಗೆ ಇನ್ನೊಂದು ಉತ್ತಮ ಬ್ರಿಟಿಶ್ ಕಾಮೆಡಿಯ ಪರಿಚಯವಾಯಿತು. ಇದರ ಹೆಸರು ’Brenman, Bird and Fortune’. ಈ ಮೂವರೂ ನಡೆಸಿಕೊಡುವ ಈ ಕಾರ್ಯಕ್ರಮ ಒಂದು ರಾಜಕೀಯ ವಿಡಂಬನೆ. ಹೆಚ್ಚಾಗಿ ಬ್ರಿಟಿಶ್ ರಾಜಕೀಯದ ವಿಡಂಬನೆಯಾದ್ದರಿಂದ ಎಲ್ಲವೂ ನಮಗೆ ಅಪೀಲ್ ಆಗುವುದಿಲ್ಲ. ಆದರೆ ಬರ್ಡ್ ಮತ್ತು ಫ಼ೋರ್ಚುನ್ ಮಾಡುವ ನಕಲು ಸಂದರ್ಶನಗಳು ಸಿಕ್ಕಾಪಟ್ಟೆ ಚೆನ್ನಾಗಿವೆ. ಇರಾಕ್ ಯುದ್ಧ, ಅಮೆರಿಕದ ಪಾಲಿಸಿಗಳು, ಸಬ್ ಪ್ರೈಮ್ ಕ್ರೈಸಿಸ್ ಮೊದಲಾದವುಗಳ ಬಗ್ಗೆ ಒಳ್ಳೆಯ ಸಂಶೋಧನೆ ನಡೆಸಿಯೇ ಅದನ್ನು ವಿಡಂಬನಾತ್ಮಕವಾಗಿ ಮಂಡಿಸುತ್ತಾರೆ. ಅವೂ ಯೂಟ್ಯೂಬ್‍ನಲ್ಲಿ ಇವೆ. ನೋಡಿ ಆನಂದಿಸಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s