ಕ್ಷೌರಿಕನ ವಿರೋಧಾಭಾಸ (ಪರಿಷ್ಕೃತ)

ಒಂದು ಊರಿನಲ್ಲಿ ಒಬ್ಬನೇ ಒಬ್ಬ ಕ್ಷೌರಿಕನಿದ್ದಾನೆ ಎಂದುಕೊಳ್ಳಿ. ಆ ಊರಿನ ಗಂಡಸರೆಲ್ಲರೂ ನಿಯಮಿತವಾಗಿ ಗಡ್ಡಮೀಸೆಗಳನ್ನು ತೆಗೆದು ವ್ಯವಸ್ಥಿತರಾಗಿರುತ್ತಾರೆ. ಅಲ್ಲಿ ಗಡ್ಡ ಬಿಟ್ಟುಕೊಂಡು ತಿರುಗುವು ಆಲಸಿಗಳೂ, ನವ್ಯರೂ ಒಬ್ಬರೂ ಇಲ್ಲ. ಕೆಲವರು ಮನೆಯಲ್ಲೇ ದಾಡಿ ಮಾಡಿಕೊಳ್ಳುತ್ತಾರೆ. ಉಳಿದವರೆಲ್ಲ ಆ ಕ್ಷೌರಿಕನ ಕಡೆ ಹೋಗಿ ದಾಡಿ ಮಾಡಿಸಿಕೊಳ್ಳುತ್ತಾರೆ. ಬೇರೆಯವರ ದಾಡಿ ಮಾಡುವವನು ಕ್ಷೌರಿಕನೊಬ್ಬನೆ. ಒಟ್ಟಾರೆ ಹೇಳಬೇಕೆಂದರೆ – ಕ್ಷೌರಿಕ ಸ್ವಂತ ದಾಡಿ ಮಾಡಿಕೊಳ್ಳದ ಎಲ್ಲ ಗಂಡಸರ, ಹಾಗೂ ಕೇವಲ ಅಂಥ ಗಂಡಸರ, ದಾಡಿ ಮಾಡುತ್ತಾನೆ. ಸ್ವಂತ ಮಾಡಿಕೊಳ್ಳುವವರ ದಾಡಿ ಮಾಡುವುದಿಲ್ಲ; ಉಳಿದ ಎಲ್ಲ ಗಂಡಸರ ಕ್ಷೌರವನ್ನು ಅವನೇ ಮಾಡುತ್ತಾನೆ. ಸರಿಯಷ್ಟೆ?

(ಆ ಊರಿನ ಹೆಂಗಸರು ಅವರವರ ಅವಶ್ಯಕತೆಗಳನ್ನು ಅವರವರೇ ಪೂರೈಸಿಕೊಳ್ಳುತ್ತಾರೆ; ಮತ್ತು ಬೇರೆಯವರ ಅವಶ್ಯಕತೆ – ಹೆಂಗಸರದಾಗಲಿ, ಗಂಡಸರದಾಗಲಿ – ಅವರ ಜವಾಬ್ದಾರಿಯಲ್ಲ, ಅಂದುಕೊಳ್ಳಿ. ಆದರೆ ಇದು ಅಷ್ಟು ಪ್ರಸ್ತುತವಾದುದಲ್ಲ.)

ಹೀಗಿರುವಾಗ, ನಮ್ಮ ಮುಂದಿರುವ ಪ್ರಶ್ನೆಯೇನಪ್ಪಾ ಅಂದರೆ: ಕ್ಷೌರಿಕ ತನ್ನ ಕ್ಷೌರವನ್ನು ತಾನೇ ಮಾಡಿಕೊಳ್ಳುತ್ತಾನೆಯೇ ಇಲ್ಲವೇ?

ಉತ್ತರ ತಿಳಿಸಿ.

***

ಇದರಲ್ಲಿ ಯಾವುದೇ trick ಇಲ್ಲ. 🙂 ಆ ಕ್ಷೌರಿಕನಿಗೂ ಮೀಸೆಗಡ್ಡಗಳು ಬರುತ್ತವೆ. ಇದೊಂದು ಗಂಭೀರ ಪ್ರಶ್ನೆ. ನಾನು ಈಗಾಗಲೆ ಹೇಳಿದಂತೆ ಒಂದು ವಿರೋಧಾಬಾಸ ಅಥವಾ paradox ಇಲ್ಲಿದೆ. ಪ್ರಶ್ನೆ ಏನೆಂದರೆ ಆ ವಿರೋಧಾಭಾಸ ಏನು ಮತ್ತೆ ಯಾಕೆ ಉಂಟಾಗುತ್ತದೆ ಎನ್ನುವುದು. ವಿರೋಧಾಭಾಸ ಇದು: ತನ್ನ ಗಡ್ದ ತಾನೇ ಮಾಡಿಕೊಂಡರೆ, ಕ್ಷೌರಿಕ ತನ್ನ ಗಡ್ಡ ತಾನೇ ಮಾಡಿಕೊಳ್ಳಬಾರದು; ತನ್ನ ಗಡ್ಡ ತಾನೇ ಮಾಡಿಕೊಳ್ಳದಿದ್ದರೆ, ಕ್ಷೌರಿಕ ತನ್ನ ಗಡ್ಡ ತಾನೇ ಮಾಡಿಕೊಳ್ಳಬೇಕು. ಇದು ನಾವು ಸಮಸ್ಯೆಯನ್ನು define ಮಾಡಿರುವ ರೀತಿಯಿಂದ ಉಂಟಾಗುತ್ತದೆ. ಆದರೆ ಇದಕ್ಕೆ ಸುಲಭ ಪರಿಹಾರವಿಲ್ಲ.

ವಸ್ತುತ:, ಇದು ರಸೆಲ್ಲನ ವಿರೋಧಾಬಾಸಕ್ಕೆ ಉದಾಹರಣೆಯಾಗಿ ಹುಟ್ಟಿಕೊಂಡದ್ದು. ಇಂಗ್ಲಿಶ್ ತತ್ವಜ್ಞಾನಿ ಹಾಗೂ ಗಣಿತಜ್ಞ ಬರ್ಟ್ರಂಡ್ ರಸೆಲ್ ಮಂಡಿಸಿದ ಒಂದು paradox, ಗಣಿತದ ಮೂಲಭೂತ ವಿಭಾಗವಾದ set theoryಯ ಸ್ವರೂಪವನ್ನು ಬದಲಿಸಿತು. ಈ paradox ಮಂಡಿಸಿ, ಹಳೆಯ set theoryಯಲ್ಲಿ ಒಂದು ಅಸಂಗತಿ ಉಂಟಾಗುತ್ತದೆಂದು ತೋರಿಸಿಕೊಟ್ಟ. ಈ ವಿಸಂಗತಿಯನ್ನು ಪರಿಹರಿಸಲು ಹೊಸ ರೀತಿಯಿಂದ set theoryಯನ್ನು ನೋಡಬೇಕಾಯಿತು.

5 thoughts on “ಕ್ಷೌರಿಕನ ವಿರೋಧಾಭಾಸ (ಪರಿಷ್ಕೃತ)

  1. ಚಕೋರ,
    ಇದೊಳ್ಳೆ ಡಬ್ಬಲ್-ರೋಲ್ ಸಮಸ್ಯೆಯಾಯ್ತಪ್ಪ.
    ಈ ಕ್ಷೌರಿಕ ತನ್ನ ಅಂಗಡಿಯಲ್ಲಿಯೇ ತನ್ನ ದಾಡಿ ಮಾಡಿಕೊಂಡನೆ, ಅಥವಾ ಮನೆಯಲ್ಲಿ ಮಾಡಿಕೊಂಡನೆ ಎಂದು ನೀವು ಹೇಳಿಲ್ಲ.

  2. ಸುನಾಥ:
    ಸಮಸ್ಯೆ ಅಂವ ಎಲ್ಲಿ ಮಾಡಿಕೊಂಡ/ಮಾಡಿಕೊಳ್ಳಬಹುದು ಅನ್ನೂದಲ್ಲ. ಸಮಸ್ಯೆ ಅಂವ ಮಾಡಿಕೊಂಡನೋ ಇಲ್ಲೋ ಅನ್ನೂದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s