ನಮ್ಮ ಗೋಕಾಂವಿ ನಾಡು ರಣರಣ ಬಿಸಿಲಿನ ಪ್ರದೇಶ. ವೈಶಾಖದಲ್ಲಿ ನೀವು ಯಾವಾಗರೆ ಅಕಸ್ಮಾತ್ ಹಾದಿ ತಪ್ಪಿ ಬಂದು ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳದ್ರಿ ಅಂದ್ರ, ಸ್ಟ್ಯಾಂಡಿನ ಹಿಂಭಾಗದ ಗುಡ್ಡವಂತೂ ನಿಮ್ಮ ಗಮನಕ್ಕೆ ಬರುವ ಮೊದಲನೆಯ ವಿಸ್ಮಯ. ಬೃಹತ್ ಬಂಡೆಗಳು ಯಾವುದೇ ಆಧಾರವೇ ಇಲ್ಲ ಎಂಬಂತೆ; ಉರುಳಲು ತಯಾರಾಗಿ ನಿಂತಂತೆ, ತೋರುತ್ತವೆ. ಬಿಸಿಲಿಗೆ ಮಿರಮಿರನೆ ಮಿಂಚುತ್ತಿರುತ್ತವೆ. ಪ್ರತಿ ಸಲ ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳಿದಾಗಲೂ ಅಂದುಕೊಳ್ಳುತ್ತೇನೆ, ’ಅಲ್ಲ, ಇಂಥಾ ಈ ಒಂದು ಬಂಡೆಗಲ್ಲು ಉರುಳಿ ಕೆಳಗ ಬಂತಂದರ ಏನಾದೀತು? ಸ್ಟ್ಯಾಂಡ್ ಅಂತೂ ಹಕನಾತ ಜಜ್ಜಿ ಹೋದೀತು.’ ಹಂಗ ಸ್ವಲ್ಪ ಮ್ಯಾಲೆ ನೋಡಿದರ ಸುಣ್ಣ ಹಚ್ಚಿದ ಒಂದು ಸಣ್ಣ ಆಕಾರ ಕಾಣತದ. ಅದು ಮಲಿಕಸಾಬನ ಗುಡಿ ಅಥವಾ ದರ್ಗಾ. ನಾವು ಸಣ್ಣವರಿದ್ದಾಗ ಮಲಿಕಸಾಬನ ಗುಡಿಯೇ ಜಗತ್ತಿನ ಅತ್ಯಂತ ಎತ್ತರದ ಸ್ಥಾನವಾಗಿತ್ತು. ಒಮ್ಮೆ ಗುಡ್ಡಾ ಹತ್ತಿ ಅಲ್ಲಿ ಮಟಾ ಹೋಗಿ ಬರಬೇಕು ಅಂತ ರಗಡು ಸಲ ಅಂದುಕೊಂಡರೂ ಯಾಕೋ ಯಾವತ್ತೂ ಹೋಗಿಲ್ಲ. ಮಲಿಕಸಾಬನ ಗುಡ್ಡದ ಬಂಡೆಗಳು ಸದಾಕಾಲ ಮಳೆಗಾಗಿ ಕಾಯುತ್ತ ಕುಂತಲ್ಲೆ ಕೂತು ತಪಸ್ಸು ನಡೆಸುತ್ತಿರುವಂತೆಯೇ ನಮ್ಮ ಬೆಳವಲದ ಮಂದಿಯ ಬೇಗುದಿಯನ್ನು ಇನ್ನೂ ಹೆಚ್ಚಿಸುತ್ತಿರುತ್ತವೆ.
Continue reading “ಗೋಕಾಂವಿ ನಾಡಿನಲ್ಲಿ ಒಂದು ಸುತ್ತು”
ತಿಂಗಳು: ಆಗಷ್ಟ್ 2008
ಕಾರ್
ಪಾಮುಕ್‍ನ ’ಸ್ನೋ’ (Snow, ಟರ್ಕಿಶ್‍ನಲ್ಲಿ ’ಕಾರ್’) ಕಾದಂಬರಿಯನ್ನು ನಾನು ಇಲ್ಲಿನ ಚಳಿಗಾಲದಲ್ಲಿ ಓದಬೇಕಿತ್ತೇನೋ. ಅವನ ಹಿಮದ ವರ್ಣನೆಯ ಫಸ್ಟಹ್ಯಾಂಡ್ ಅನುಭವವಾಗುತ್ತಿತ್ತೇನೋ: ಹಿಮದ ಹರಳೊಂದು ಷಟ್ಕೋನವಂತೆ; ಅಥವಾ, ಹೆಚ್ಚು ಹೆಪ್ಪುಗಟ್ಟುತ್ತ ಹೋದಂತೆ ರೆಂಬೆಕೊಂಬೆಗಳು ಮೂಡಿ, ಆರು ಬೆರಳುಗಳನ್ನು ಚಾಚಿದಂತೆಯೋ, ನಕ್ಷತ್ರ ಮೀನಿನಂತೆಯೋ ಕಾಣುತ್ತದಂತೆ. ಇಲ್ಲಿ ಹಿಮ ಬಿದ್ದಾಗ ಈ ಕಾದಂಬರಿಯನ್ನು ಮತ್ತೊಮ್ಮೆ ಓದಿ, ಪಾಮುಕ್ ವರ್ಣಿಸಿದಂತೆ ಹಿಮದ ಅನುಭವವಾಗುತ್ತದೋ ನೋಡಬೇಕು.
Continue reading “ಕಾರ್”
ಸಾವು ಮುಗಿಯಿತು…
ಲೆವ್ ಟಾಲ್‍ಸ್ಟಾಯ್‍ನ ಒಂದು ನೀಳ್ಗತೆ ’ಇವಾನ್ ಇಲ್ಯಿಚ್‍ರ ಸಾವು’ (The Death of Ivan Ilych) ನನಗೆ ಅತ್ಯಂತ ಇಷ್ಟವಾಗುವ ಕೃತಿಗಳಲ್ಲಿ ಒಂದು. ಮೇಲಿಂದ ಮೇಲೆ ಆ ನೀಳ್ಗತೆಗೆ ಮರಳುತ್ತಿರುತ್ತೇನೆ. ತಮಾಷೆ, ವಿಷಾದ, ವಾಸ್ತವ, ವಿಪರ್ಯಾಸ… ಎಲ್ಲವನ್ನೂ ಹದವಾಗಿ ಕಲೆಸಿ ಆ ಕತೆಯಲ್ಲಿ ಬಳಸಿದ ಟಾಲ್‍ಸ್ಟಾಯ್‍ನ ಭಾಷೆ ತುಂಬಾ ಇಷ್ಟವಾಗುತ್ತದೆ. ಕತೆಯನ್ನು ಓದುತ್ತ ಹೋದಂತೆ ಜೀವನ ಒಂದು farce ಎನ್ನುವ ಅಂಶ ನಮ್ಮನ್ನು ತಟ್ಟುತ್ತ ಹೋಗುತ್ತದೆ. ಪ್ರತಿ ಸಾರಿ ಈ ಕತೆ ಓದಿದಾಗ ಅದರ ಕೊನೆಯ ಸಾಲುಗಳು ಗಾಢವಾಗಿ ತಟ್ಟುತ್ತವೆ. ಸರಳವಾದ, ನಿರುಮ್ಮಳ ಸಾಲುಗಳವು. Continue reading “ಸಾವು ಮುಗಿಯಿತು…”
ಮತ್ತದೇ ಬೇಸರ…
ನನಗೆ ಮೊದಲಿಂದಲೂ ಊರುಗಳ ಬಗೆಗೆ ತುಂಬಾ ಆಸಕ್ತಿ. ಅಂದರೆ ಒಂದು ಊರಿನಲ್ಲಿ ಎಷ್ಟು ಜನರಿದ್ದಾರೆ, ಅದರ ವಿಸ್ತೀರ್ಣ ಎಷ್ಟು, ಪ್ರತಿಶತ ಎಷ್ಟು ಜನ ಕಾರು ಇಟ್ಟುಕೊಂಡಿದ್ದಾರೆ, ಇತ್ಯಾದಿ ವಿವರಗಳಲ್ಲ. ನನಗಿಷ್ಟವಾಗುವುದು ಗುಣಾತ್ಮಕ ವಿವರಗಳು. ವಿಶೇಷಣಗಳು. ಸ್ವಭಾವಗಳು. ಒಟ್ಟಾರೆ ಆ ಊರಿನ ಸ್ವರೂಪ, ಸಂಕ್ಷಿಪ್ತವಾಗಿ. ಆ ಊರಿನ ಬಣ್ಣ ಯಾವುದು, ವಾಸನೆ ಯಾವುದು, ಭಾವ ಯಾವುದು… ಅದೇನು ಶಾಂತ ಊರೋ, ಕೋಪಿಷ್ಠ ಊರೋ, ನಗೆಚಾಟಿಕೆಯದೋ… ಹೀಗೆ. ಕಾದಂಬರಿಯೊಂದನ್ನು ಓದುವಾಗ, ಅದರ ಪಾತ್ರಗಳು ವಾಸಿಸುವ ಊರುಗಳು, ಆ ಊರಲ್ಲಿ ಅವರ ಮನೆ, ಮನೆಯಲ್ಲಿ ಅವರ ಕುರ್ಚಿ ಮೇಜುಗಳ ಏರ್ಪಾಟು, ಟೆರೇಸಿಗೆ ಹೋಗುವ ಮೆಟ್ಟಿಲುಗಳು, ಟಿವಿ ಸ್ಟ್ಯಾಂಡಿನ ಕೆಳಗೆ ಇಟ್ಟ ಹಳೆಯ ವರ್ತಮಾನ ಪತ್ರಿಕೆಗಳು, ಎಲ್ಲವನ್ನೂ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವುದಿಲ್ಲವೆ ಸ್ಪಷ್ಟವಾಗಿ? ಪ್ರತಿ ಸಲ ಪುಸ್ತಕ ತೆಗೆದಾಗಲೂ ಎಲ್ಲವೂ ಪಟಪಟನೆ ಓಡಿ ಬಂದು ತಾವೇ ಅನುಗೊಳ್ಳುವುದಿಲ್ಲವೆ? ಮುಂದೆ ಯಾವತ್ತೋ ಆ ಕಾದಂಬರಿಯ ನೆನಪಾದಾಗ, ಆ ಚಿತ್ರಗಳು ಕಣ್ಣೆದುರಿಗೆ ಸರಸರನೆ ಹಾಯುವುದಿಲ್ಲವೆ? ಹಾಗೆಯೇ, ಯಾವುದೋ ಊರನ್ನು ನೆನೆಸಿಕೊಂಡಾಗ ಮೂಡುವ ಚಿತ್ರ ಯಾವುದು? ಆಗುವ ಅನುಭವ ಎಂಥದ್ದು?
Continue reading “ಮತ್ತದೇ ಬೇಸರ…”