ಲೆವ್ ಟಾಲ್ಸ್ಟಾಯ್ನ ಒಂದು ನೀಳ್ಗತೆ ’ಇವಾನ್ ಇಲ್ಯಿಚ್ರ ಸಾವು’ (The Death of Ivan Ilych) ನನಗೆ ಅತ್ಯಂತ ಇಷ್ಟವಾಗುವ ಕೃತಿಗಳಲ್ಲಿ ಒಂದು. ಮೇಲಿಂದ ಮೇಲೆ ಆ ನೀಳ್ಗತೆಗೆ ಮರಳುತ್ತಿರುತ್ತೇನೆ. ತಮಾಷೆ, ವಿಷಾದ, ವಾಸ್ತವ, ವಿಪರ್ಯಾಸ… ಎಲ್ಲವನ್ನೂ ಹದವಾಗಿ ಕಲೆಸಿ ಆ ಕತೆಯಲ್ಲಿ ಬಳಸಿದ ಟಾಲ್ಸ್ಟಾಯ್ನ ಭಾಷೆ ತುಂಬಾ ಇಷ್ಟವಾಗುತ್ತದೆ. ಕತೆಯನ್ನು ಓದುತ್ತ ಹೋದಂತೆ ಜೀವನ ಒಂದು farce ಎನ್ನುವ ಅಂಶ ನಮ್ಮನ್ನು ತಟ್ಟುತ್ತ ಹೋಗುತ್ತದೆ. ಪ್ರತಿ ಸಾರಿ ಈ ಕತೆ ಓದಿದಾಗ ಅದರ ಕೊನೆಯ ಸಾಲುಗಳು ಗಾಢವಾಗಿ ತಟ್ಟುತ್ತವೆ. ಸರಳವಾದ, ನಿರುಮ್ಮಳ ಸಾಲುಗಳವು.
“It is finished!” said someone near him.
He heard these words and repeated them in his soul.
“Death is finished,” he said to himself. “It is no more!
He drew in a breath, stopped in the midst of a sigh, stretched out, and died.
ಸಾವು ಮುಗಿಯಿತು. ಅದು ಇನ್ನಿಲ್ಲ. ಮೇಲಿಂದ ಮೇಲೆ ನೆನಪಾಗುವ ಸಾಲುಗಳಿವು.
ಬೆಂಗಳೂರಿಗೆ ಹೋಗುವಾಗ ದಾರಿಯಲ್ಲಿ ’ದ ಬಕೆಟ್ ಲಿಸ್ಟ್’ (The Bucket List) ಎಂಬ ಚಿತ್ರ ನೋಡಿದೆ. ಅದನ್ನು ನೋಡುತ್ತಿದ್ದಂತೆ ನಗು ಬಂತು. ಖುಷಿಯಿಂದಲ್ಲ. Actually, ನನಗೆ ಇವೆಲ್ಲ ಬಹಳ ವಿಚಿತ್ರ ಪರಿಕಲ್ಪನೆಗಳಂತೆ ತೋರುತ್ತವೆ. ಸಾವನ್ನು ಧೈರ್ಯದಿಂದ ಎದುರಿಸಬೇಕೆಂದು ಪ್ರತಿಪಾದಿಸುವುದು ಸರಿ. ಜೀವನವನ್ನು ಬದುಕಿದ್ದಷ್ಟೂ ದಿನ ನಮ್ಮಿಷ್ಟದಂತೆ ಅನುಭೋಗಿಸಬೇಕೆಂದು ಹೇಳಬಯಸುವುದು ಸರಿ. ಆದರೆ ಅದನ್ನೆಲ್ಲ ಮಾಡುವಾಗ ವಾಸ್ತವದ ಅರಿವಿರಬೇಕು. ಒಂದೇ ಮಾತಿನಲ್ಲಿ ಹೇಳುವುದೆಂದರೆ, cancer is not fun. ನಿಮ್ಮ ಮನೋಸ್ಥೈರ್ಯ, ಹುಮ್ಮಸ್ಸಿನ ಸ್ವಭಾವ, ಜೀವನ್ಮುಖಿ ವ್ಯಕ್ತಿತ್ವ, ಇವನ್ನೆಲ್ಲ ನೋಡಿ ಕೂಡ ಕ್ಯಾನ್ಸರ್ ಎಂಬ ರೋಗ ನಿಮಗೆ ಯಾವುದೇ ರಿಯಾಯಿತಿ ಕೊಡುವುದಿಲ್ಲ.
ಬಕೆಟ್ ಲಿಸ್ಟ್ ಚಿತ್ರ ತೀರಾ ಸಾಧಾರಣ ಚಿತ್ರ. ನಟನೆ ಕೂಡ ಹೇಳಿಕೊಳ್ಳುವಂತಿಲ್ಲ. ಜಾಕ್ ನಿಕೊಲ್ಸನ್ stagnate ಆಗಿದ್ದಾನೆ. ಮಾರ್ಗನ್ ಫ್ರೀಮನ್ ಕೂಡ. ನಟನೆ ಎನ್ನುವುದು ಲೀಲಾಜಾಲವಾಗಿಬಿಟ್ಟರೆ ಕಷ್ಟ.
ಬಕೆಟ್ ಲಿಸ್ಟ್ ನೋಡುತ್ತಿದ್ದಾಗ ಮತ್ತೆ ಇವಾನ್ ಇಲ್ಯಿಚ್ ನೆನಪಾದ. ಬದುಕಿನ ನಿರರ್ಥಕತೆಯನ್ನು ಅರಿತುಕೊಳ್ಳುವುದು, ಸಾವಿನ ಅನಿವಾರ್ಯತೆಯನ್ನು ನಿರುಮ್ಮಳವಾಗಿ ಸ್ವೀಕರಿಸುವುದು ಒಂದು ರೀತಿ. ಆದರೆ ಬದುಕೆನ್ನುವುದು ಮೊದಲಿಂದ ಕೊನೆಯವರೆಗೆ, ಕ್ಷಣಕ್ಷಣವೂ ರೋಚಕವಾದ, ರಮಣೀಯವಾದ, ಆನಂದಮಯ ಸವಾರಿ ಎಂಬಂತೆ ಸೋಗು ಹಾಕುವುದು ಬೇರೆಯದೇ ರೀತಿ. Life is just a little more complex than that.
ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
ನಿಮ್ಮೆಲ್ಲರ ಸ್ನೇಹದ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.
ಇದು ನನ್ನ ಪ್ರೀತಿಪೂರ್ವಕ ಒತ್ತಾಯ.
ಕಾದಿರುತ್ತೇನೆ.
ವಂದೇ,
ಚೇತನಾ ತೀರ್ಥಹಳ್ಳಿ
ಟಾಲ್ಸ್ಟಾಯ್ ಸಂತನೆಂದು ಹೇಳುತ್ತಾರೆ; ಇರಬಹುದು. ಅವನ ಕೆಲವು ಕತೆಗಳನ್ನು ಒದಿದಾಗ ನನಗೆ
ಅನ್ನಿಸಿದ್ದು: He is a very great story writer.
ಟಾಲ್ ಸ್ಟಾಯ್ ಅವರ ಅಭಿಮಾನಿಯೊಬ್ಬರನ್ನು ಕಂಡು ಸಂತೋಷವಾಯ್ತು.
ಬದುಕಿನ ನಿರರ್ಥಕತೆಯನ್ನು ಅರಿತುಕೊಳ್ಳುವುದು, ಸಾವಿನ ಅನಿವಾರ್ಯತೆಯನ್ನು ನಿರುಮ್ಮಳವಾಗಿ ಸ್ವೀಕರಿಸುವುದು ಒಂದು ರೀತಿ. ಆದರೆ ಬದುಕೆನ್ನುವುದು ಮೊದಲಿಂದ ಕೊನೆಯವರೆಗೆ, ಕ್ಷಣಕ್ಷಣವೂ ರೋಚಕವಾದ, ರಮಣೀಯವಾದ, ಆನಂದಮಯ ಸವಾರಿ ಎಂಬಂತೆ ಸೋಗು ಹಾಕುವುದು ಬೇರೆಯದೇ ರೀತಿ. Life is just a little more complex than that. —> ೨೦೦ ಪ್ರತಿಶತ ನಿಜವಾದ ಸತ್ಯ !