ಸಂರಕ್ಷಕನೆ:

ಬಾ. ಕೂತುಕೊಳ್ಳು. ನೀನು ರಕ್ಷಿಸುತ್ತಿರುವುದು ಸಂಸ್ಕೃತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ, ಅಥವಾ ಮತ್ತೇನೇ ಇರಲಿ. ಬಾ. ಮಾತಾಡೋಣ. ಅಲ್ಲ, ಈ ದಿನ ನಾನು ಮಾತಾಡುತ್ತೇನೆ, ನೀನು ಕೇಳು; ನಿನ್ನ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ, ಕೆಲಸಗಳನ್ನು ಸಾಕಷ್ಟು ನೋಡಿದ್ದೇನೆ. ನಿನ್ನ ದನಿ ಜೋರು, ಕೆಲಸಗಳೂ ಎದ್ದುಕಾಣುವಂಥವು. ನನ್ನಲ್ಲಿ ಆ ಕುವ್ವತ್ತಿಲ್ಲ. ನನ್ನ ಸಣ್ಣದನಿಯನ್ನೂ ಸ್ವಲ್ಪ ಕೇಳು.
Continue reading “ಸಂರಕ್ಷಕನೆ:”

ಸಂಸ್ಕೃತಿ ಸಂರಕ್ಷಣೆ – ೧೦೧

ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ದಾರಿ ಯಾವುದು?

  1. ನಮ್ಮ ಸಂಕುಚಿತ ದೃಷ್ಟಿಕೋನಕ್ಕೆ ಹೊಂದುವಂತೆ ಅನುಮತಿಯಿರುವಂಥ ನಡವಳಿಕೆಗಳ ಸಣ್ಣ ಪಟ್ಟಿಯೊಂದನ್ನು ತಯಾರಿಸುವುದು.
  2. ಕಂಡಕಂಡಲ್ಲಿ, ಕಂಡಕಂಡವರೆದುರಿಗೆ ಅದನ್ನು ಸಾರುವುದು. ಅದೇ ಮೂಲಭೂತ ಸತ್ಯವೆಂದು ಅಬ್ಬರಿಸುವುದು.
  3. ಆ ಪಟ್ಟಿಯಲ್ಲಿಲ್ಲದುದನ್ನು ಯಾರಾದರೂ ಮಾಡಿದರೆ ಅಪಚಾರವಾಯಿತೆಂದು ಹುಯಿಲಿಡುವುದು. ಹೋಗಿ ಅಂಥವರನ್ನು ಸದೆಬಡೆಯುವುದು.
  4. ನಂತರ ತಾವು ಮಾಡಿದ್ದು ಶ್ರೇಷ್ಠ ಎಂದು ಹೆಮ್ಮೆಯಿಂದ ಸಾರುವುದು. ಸಂರಕ್ಷಣೆಯ ಹೊಣೆ/ಶ್ರೇಯಕ್ಕಾಗಿ ಹಪಾಪಿಸುವುದು.

ಸಂಸ್ಕೃತಿಯ ಜಾಗದಲ್ಲಿ ಭಾಷೆ, ಧರ್ಮ, ಜಾತಿ, ಸಿದ್ಧಾಂತ ಹೀಗೆ ಮತ್ತೇನು ಬೇಕಾದರೂ ಹಾಕಿ ಓದಿಕೊಳ್ಳಿ.