ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ದಾರಿ ಯಾವುದು?
- ನಮ್ಮ ಸಂಕುಚಿತ ದೃಷ್ಟಿಕೋನಕ್ಕೆ ಹೊಂದುವಂತೆ ಅನುಮತಿಯಿರುವಂಥ ನಡವಳಿಕೆಗಳ ಸಣ್ಣ ಪಟ್ಟಿಯೊಂದನ್ನು ತಯಾರಿಸುವುದು.
- ಕಂಡಕಂಡಲ್ಲಿ, ಕಂಡಕಂಡವರೆದುರಿಗೆ ಅದನ್ನು ಸಾರುವುದು. ಅದೇ ಮೂಲಭೂತ ಸತ್ಯವೆಂದು ಅಬ್ಬರಿಸುವುದು.
- ಆ ಪಟ್ಟಿಯಲ್ಲಿಲ್ಲದುದನ್ನು ಯಾರಾದರೂ ಮಾಡಿದರೆ ಅಪಚಾರವಾಯಿತೆಂದು ಹುಯಿಲಿಡುವುದು. ಹೋಗಿ ಅಂಥವರನ್ನು ಸದೆಬಡೆಯುವುದು.
- ನಂತರ ತಾವು ಮಾಡಿದ್ದು ಶ್ರೇಷ್ಠ ಎಂದು ಹೆಮ್ಮೆಯಿಂದ ಸಾರುವುದು. ಸಂರಕ್ಷಣೆಯ ಹೊಣೆ/ಶ್ರೇಯಕ್ಕಾಗಿ ಹಪಾಪಿಸುವುದು.
ಸಂಸ್ಕೃತಿಯ ಜಾಗದಲ್ಲಿ ಭಾಷೆ, ಧರ್ಮ, ಜಾತಿ, ಸಿದ್ಧಾಂತ ಹೀಗೆ ಮತ್ತೇನು ಬೇಕಾದರೂ ಹಾಕಿ ಓದಿಕೊಳ್ಳಿ.
ಹ್ಮ್…
“ಹ್ಮ್ …”, ಅಂದ್ರೆ? 🙂
ಅದು, ಕೊನೆಯ ಸಾಲಿಗೆ ಸಹಮತ… 🙂
ಚಕೋರ,
ಈ ಬಗ್ಗೆ ಶಿವ್ ಖೇರಾ ಥರ ಒಂದು ಆಕರ್ಷಕ ಕವರನ್ನುಳ್ಳ, ಉದಾಹರಣಾಸಹಿತ ಗ್ರಂಥವೊಂದನ್ನು ತಾವು ಬರೆದು ಮುದ್ರಿಸುವಿರೆಂದು ನಂಬಿಕೆಯಿಟ್ಟಿದ್ದೇನೆ.
ತಮ್ಮ ಅಭಿಮಾನಿ.
tumbaa chennagide
ಟೀನಾ:
ಹೆ..ಹೆ!
ವಿಶಾಲಮತಿ:
ಥ್ಯಾಂಕ್ಸ್!
ಚೆನ್ನಾಗಿದೆ . ಇಂದಿನ ಜಗತ್ತಿಗೆ ತುಂಬಾ ಪ್ರಸ್ತುತವಾದ ಲೇಖನ.