ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ
ಧ್ಯಾನಸ್ತ ಅಲ್ಲಮನೆ?
ಪ್ರಶಾಂತ
ಅಭಯಂಕರ
ಶಿವನೆ?
ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ
ಈ ಫ಼ೋಟೊ ಯಾವುದೋ ಕಾಲದಲ್ಲಿ ನನ್ನ ಸಂಚಾರಿ ಫ಼ೋನಿನಲ್ಲಿ ಹೇಗೋ ಸೇರಿಕೊಂಡಿತ್ತು. ಇದು ಏನೆಂದು ಗೊತ್ತಿಲ್ಲ. ಏನೋ ಮಾಡಲು ಹೋದಾಗ ಆನುಷಂಗಿಕವಾಗಿ ಸೆರೆಯಾಗಿರಲಿಕ್ಕೆ ಸಾಕು. ಆದರೆ ಅದನ್ನು ನೋಡಿ ನನಗ ಏನೇನೋ ಅನ್ನಿಸಿತ್ತು. ಅದು ಈ ಪದ್ಯವಾಗಿ ಪರಿಣಮಿಸಿತ್ತು. ಬಹಳ ಮೊದಲೊಮ್ಮೆ ಈ ಬ್ಲಾಗಿನಲ್ಲಿ ಇದನ್ನು ಹಾಕಿದ್ದೆ. ಯಾಕೋ ಇದು ನೆನಪಾಗಿದ್ದಕ್ಕೂ ನನಗೆ ಸದ್ಯಕ್ಕೆ ಬರೆಯುವ ಲಹರಿಯಿಲ್ಲದಿರುವುದಕ್ಕೂ, ಒಟ್ಟು ಇದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ.
padagalannu chennagi huduki balasiddiri.
ಚಕೋರರೇ,
ನಮಸ್ಕಾರ. ಈ ಬ್ಲಾಗ್ ನ ಥೀಮ್ ನಲ್ಲಿ ಅಕ್ಷರ ದೊಡ್ಡದಾಗಿ ಮಾಡಿದ್ದು ಹಾಗೂ ಪ್ರತಿ ಪೋಸ್ಟ್ ನ ಹೆಡ್ ಲೈನ್ ಗೆ ಬ್ಲಾಕ್ ಮಾದರಿಯ ಹಣೆಪಟ್ಟಿ ಲಗತ್ತಿಸಿದ್ದು ಚೆನ್ನಾಗಿ ಕಾಣುತ್ತಿದೆ, ಅದು ಹೇಗೆ ಮಾಡಿದಿರಿ. ದಯವಿಟ್ಟು ತಿಳಿಸುವಿರಾ, ವಿವರಗಳನ್ನು ನೀವು saangatya@gmail.comge ಕಳುಹಿಸಿದರೂ ಪರವಾಗಿಲ್ಲ.
ಧನ್ಯವಾದಗಳೊಂದಿಗೆ
ಸಾಂಗತ್ಯ
blog matte shuru maaDteeni anda haage ittu….