(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)
ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು ಈಗಾಗಲೆ ಇದನ್ನು ಸರಿಯಾಗಿ ಊಹಿಸಿರುತ್ತೀರ: ಅಲ್ಲಿ ಅವರು ’ದ ಆರ್ಟ್ ಆಫ಼್ ಲಿವಿಂಗ್’ನ ಪುಸ್ತಕಗಳನ್ನು ಮಾರುವುದಿಲ್ಲ. ಅಥವಾ, ಹೋಗಲಿ ಬಿಡಿ; ಹಾಗೆ ಹೇಳುವುದು ಸಮಂಜಸವಲ್ಲವೇನೋ. ಬಹಳ ಮಾಡಿ, ಆ ಪುಸ್ತಕಗಳನ್ನೂ ಮಾರುತ್ತಾರೆ, ಆದರೆ ಅದು ಅವರ ಮುಖ್ಯ ಧಂದೆ ಅಲ್ಲ ಅಂತ ನನಗನ್ನಿಸುತ್ತೆ. ಹತ್ತಾರು ಅಡಿಗಳ ದೂರದಿಂದ, ನನ್ನ ಚಲಿಸುತ್ತಿರುವ ಬೈಕಿನಿಂದ ಕಂಡ ಓರೆಗಣ್ಣಿನ ಭಂಗುರ ನೋಟವೂ ಸಾಕು. ಸೂಜಿಗಲ್ಲಿನಂತೆ ಸೆಳೆಯುವ ಅದೆಂಥ ತರಹೇವಾರಿ ಸರಕುಗಳವು. What magnetic merchandise! ಶರ್ಟುಗಳು, ಕುರ್ತಾಗಳು, ಹೆಂಗಸರ ಟಾಪ್ಗಳು, ಟಿ-ಶರ್ಟುಗಳು… (ಕನ್ನಡಕ್ಕೆ ನಿಲುಕದ) bracelets, bandannas, caps, ಹಾಗೂ ನನ್ನ ತಿಳುವಳಿಕೆ ಹಾಗೂ ಊಹೆಗಳಿಗೆ ನಿಲುಕದ ಇನ್ನೂ ಏನೇನೋ ಸಾಮಗ್ರಿಗಳು. ಅಲ್ಲಿ ನಿಮ್ಮ ಮೈಮೇಲೆ ’ದ ಆರ್ಟ್ ಆಫ಼್ ಲಿವಿಂಗ್’ನ ಹಚ್ಚೆಗಳನ್ನೂ ಹಾಕುತ್ತಾರೇನೋ. ಆಯಕಟ್ಟಿನ ಜಾಗಗಳಲ್ಲಿ! Strategically located tattoos anyone? ನಾನು ಒಮ್ಮೆ ಒಳಹೊಕ್ಕು ನೋಡಬೇಕೇನೋ. (ಓ ಕೊನೆಗೊಮ್ಮೆ ಸೆಳೆತ ತಡೆಯಲಾರದೆ ಹೋಗಿಯೂಬಿಟ್ಟಿದ್ದೆ. ಆದರೆ ಏನನ್ನೂ ಕೊಳ್ಳಲಿಲ್ಲ.)
ಇದು ನನ್ನನ್ನು ಇಷ್ಟೊಂದು ಕಾಡುವ ಸಂಗತಿಯಾಗಬಾರದಿತ್ತಲ್ಲ. ಆಧ್ಯಾತ್ಮ, spirituality ಎನ್ನುವುದು ಒಂದು ದೊಡ್ದ ಲಾಭದಾಯಕ ಬಿಸಿನೆಸ್ ಆಗಿ ಬೆಳೆದು ಸಾಕಷ್ಟು ಕಾಲ ಸಂದಿದೆ. ಲೆಕ್ಕವಿಲ್ಲದಷ್ಟು ಆಧ್ಯಾತ್ಮಿಕ ಪಂಥಗಳಿವೆ (schools); ಹಗಲು ರಾತ್ರಿಯೆನ್ನದೆ ಆಧ್ಯಾತ್ಮವನ್ನು ಉಣಬಡಿಸುವ ಸಾಕಷ್ಟು ಚಾನೆಲ್ಲುಗಳಿವೆ; ನಿಯಮಿತವಾಗಿ ಸಮಾವೇಶ ಸಮಾರಾಧನೆಗಳಾಗುತ್ತವೆ. ಈ ಪಂಥಗಳ ಗುರುಗಳು ಯಾವುದೇ ಸೆಲೆಬ್ರಿಟಿಗಿಂತ ಕಡಿಮೆಯಿಲ್ಲ; ಅವರ ಉತ್ಪನ್ನಗಳೂ ಬೋಧನೆಗಳೂ ಒಳ್ಳೆಯ ಛಾಪವನ್ನು ಗುದ್ದಿಸಿಕೊಂಡು ಹೊರಬರುತ್ತವೆ. They have a very good brand value. ಸಂಕ್ಷಿಪ್ತವಾಗಿ ಹೇಳುವುದಾರೆ, ಆಧ್ಯಾತ್ಮ ಆಕರ್ಷಣೀಯ ಬಿಸಿಬಿಸಿ ವಸ್ತು. ಅದು ಮಾರುತ್ತದೆ, ಹಾಗೂ ಕೊಳ್ಳುವವರೂ ಸಾಕಷ್ಟು ಜನರಿದ್ದಾರೆ. ಬರೀ ಈ ದೄಷ್ಟಿಯಿಂದ ನೋಡಿದರೆ, ನನ್ನದೇನೂ ತಕರಾರಿಲ್ಲ. ಯಾರಿಗೂ ಇದರಿಂದ ತಕರಾರಿರಬಾರದು. ಹೀಗಿರುವಾಗ, ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ಇದೇ ಹಾದಿಯಲ್ಲಿ ಒಂದು ತರ್ಕಬದ್ಧವಾದ ಮುಂದಿನ ಹೆಜ್ಜೆಯಷ್ಟೆ. ಅಲ್ಲವೆ? ಮತ್ತೇಕೆ ನನಗೆ ಆಶ್ಚರ್ಯ/’ಥ್ರಿಲ್’ ಆಗಬೇಕು?
ಇದಕ್ಕೆ ಕಾರಣ ಏನಿರಬಹುದು? ಮೊದಲಿಗೆ ಒಂದನ್ನು ಸ್ಪಷ್ಟಗೊಳಿಸೋಣ. ನಾನು ಅತಿ ಸಂಪ್ರದಾಯವಾದಿ ಹಾಗೂ ಆಧ್ಯಾತ್ಮಕ್ಕೆ ಅತಿ ಶುದ್ಧವಾದ, ನೇಮಿಷ್ಠವಾದ ಅನುಸರಣವನ್ನು ಆರೋಪಿಸುತ್ತೇನಾದುದರಿಂದ ನನ್ನ ಯೋಚನೆಗಳು ಹೀಗಿವೆಯೇ? ನಾನು ಸಂಪ್ರದಾಯವಾದಿ ಅಲ್ಲ. ಅಧ್ಯಾತ್ಮ ಎಂದರೆ ನೇಮಿಷ್ಠ ಅನುಸರಣ (puritanical conduct) ಅಂತ ನಂಬಿದವನೂ ಅಲ್ಲ. ನನಗೆ ಅದೆಲ್ಲ ನೀಗುವುದೂ ಇಲ್ಲ, ಬೇಕಾಗೂ ಇಲ್ಲ. ಹೀಗಾಗಿ ಅಂಥ ಕಾರಣಗಳಿಂದ ’ಶಾಪ್’ನಂಥದರ ಬಗ್ಗೆ ’ಥ್ರಿಲ್’ ಆಗುತ್ತದೆ ಅಂತ ಹೇಳಲೂ ಬರುವುದಿಲ್ಲ. Actually, ನನಗೆ ’ದ ಆರ್ಟ್ ಆಫ಼್ ಲಿವಿಂಗ್’ ಏನು ಹೇಳುತ್ತದೆ ಎಂದು ಗೊತ್ತಿಲ್ಲ. ಅಥವಾ ಬೇರೆ ಯಾವ ಸ್ಕೂಲುಗಳು ಏನು ಹೇಳುತ್ತವೆ ಎಂದೂ ಗೊತ್ತಿಲ್ಲ. ಆಸಕ್ತಿಯೂ ಇಲ್ಲ. (ಇದರರ್ಥ, ನನಗೆ ಸ್ಪಿರಿಚುವಾಲಿಟಿಯ ಬಗ್ಗೆ ಆಸಕ್ತಿ ಇಲ್ಲ ಎಂದೇನೂ ಅಲ್ಲ.) ಕಲೆಯ ಬಗ್ಗೆ ನನಗೆ ಬಹಳೇ ಒಲುಮೆ ಇದ್ದಾಗ್ಗ್ಯೂ ನಾನು ನನ್ನ ಬೋರು ಹೊಡೆಸುವ ಪ್ರಾಪಂಚಿಕ ಬದುಕನ್ನು ’ಕಲಾತ್ಮಕ’ ಬದುಕನ್ನಾಗಿ ಬದಲಾಯಿಸಲು ಇನ್ನೂ ತಯಾರಾಗಿಲ್ಲ. ಇಷ್ಟಕ್ಕೂ ಇಂಥ ಪರಿವರ್ತನೆಯಿಂದ ಆಗುವುದಾದರೂ ಏನು? ನಾನು ಹೇಗಿದ್ದರೂ ನಿಷ್ಪ್ರಯೋಜಕ; ನನ್ನ ಬದುಕು ಹೇಗಿದ್ದರೂ futile. ಪರಿವರ್ತನೆಯಿಂದ ಆಗುವುದೇನು? An Artistically Futile Living? ಕಲೆಯಿಂದ ನಿಷ್ಪ್ರಯೋಜಕತೆಯ ಸ್ವರೂಪವನ್ನು ಬದಲಿಸಲು ಸಾಧ್ಯವಿಲ್ಲ. ಅದು ನಿಷ್ಪ್ರಯೋಜಕತೆಯನ್ನು ಇನ್ನಷ್ಟು ಗಹನವಾಗಿಸುತ್ತದಷ್ಟೆ. ಅದೆಲ್ಲ ಬಿಡಿ. ನಾನು ಮತ್ತೆ ಈ ’ಶಾಪ್’ನಂಥ ಸಂಗತಿಗಳ ಬಗ್ಗೆ ಯೋಚನೆ ಮಾಡಿದಾಗ ನನಗೆ ಮಜಾ ಅನ್ನಿಸುತ್ತದಷ್ಟೆ. ಅದು, ’ರಾಮ ರಾಮ.. ಜಗತ್ತು ಎತ್ತ ಸಾಗಿದೆ?’ ಎಂಬ ಆತಂಕವೂ ಅಲ್ಲ. ಬಹಳಷ್ಟು ತಮಾಷೆ ಹಾಗೂ ಸ್ವಲ್ಪವೇ ವಿಷಾದದ ಮಿಶ್ರಣ ಅಷ್ಟೇ.
ನನಗೆ ಹೀಗೆನ್ನಿಸುವುದು ನಾನು ಇವನ್ನೆಲ್ಲ ನೋಡಿ ಅರಿತುಕೊಳಲು ಪ್ರಯತ್ನಿಸುವ ಬಗೆಯಿಂದಾಗಿ. ಆ ದೄಷ್ಟಿಕೋನವನ್ನು ಸಂಕ್ಷಿಪ್ತವಾಗಿ ವಿವರಿಸಲು ಪ್ರಯತ್ನಿಸುತ್ತೇನೆ. ನಾನು ಈಗಾಗಲೆ ಹೇಳಿದಂತೆ ನನಗೆ ಈ ಪಂಥಗಳು ಗುರುಗಳು ಏನು ಹೇಳುತ್ತಾರೆ ಅಂತ ಗೊತ್ತಿಲ್ಲ. ಆದರೆ, ನನ್ನ ತಿಳುವಳಿಕೆ ತಪ್ಪಾಗಿರದಿದ್ದ ಪಕ್ಷದಲ್ಲಿ ಇವೆಲ್ಲ ಭಿನ್ನ ಭಿನ್ನ ಪಂಥಗಳ ಅಡಿಪಾಯ ವೇದಾಂತ/ಉಪನಿಷತ್ತುಗಳು. ನಾನು ಉಪನಿಷತ್ತುಗಳನ್ನೂ ಓದಿಲ್ಲ, ಆದರೆ ಅವುಗಳಲ್ಲಿರುವ ಅತ್ಯಂತ ಮಹತ್ವದ ಭಾವಗಳಲ್ಲಿ ಒಂದು “ವರ್ಜಿಸುವಿಕೆ” (elimination). ನೇತಿ ನೇತಿ ನೇತಿ (ನೇತಿ = ನ + ಇತಿ, ಇದಲ್ಲ, not this) — ಇದಲ್ಲ, ಇದೂ ಅಲ್ಲ, ಅದು ಕೂಡ ಅಲ್ಲ, ಹೀಗೆ ನಿಮಗೆ ಬೇಕಾದದ್ದು ದೊರೆಯುವವರೆಗೆ ಉಳಿದದ್ದನ್ನೆಲ್ಲ ಉಳಿದದ್ದೆಲ್ಲವನ್ನೂ ತ್ಯಜಿಸುತ್ತ ಹೋಗುವ ಭಾವ. ಧ್ಯಾನಕ್ಕೆ ಕೂತವರೊಬ್ಬರು, ಸ್ಪಷ್ಟತೆಯ ಹಾದಿಯಲ್ಲಿ ಅಡ್ಡ ಬರುವ ಅನಗತ್ಯವಾದ ಎಲ್ಲ ಯೋಚನೆಗಳನ್ನು ತೆಗೆದುಹಾಕಲು ಹೊಂದುವ ಭಾವ ಇದು (ಅಥವಾ ಆತ್ಮಪ್ರಜ್ಞ್ನೆಯ ಜಾಗೃತಿಗಾಗಿ ಅಥವಾ ಮತ್ತೇನೋ ಸಾಧಿಸುವ ಹಾದಿಯಲ್ಲಿ). ಇದನ್ನೇ ಸ್ವಲ್ಪ ಉಚ್ಚಸ್ತರದಲ್ಲಿಂದ ನೋಡಿದರೆ, ಇದು ಸತ್ಯದ/ಸೌಂದರ್ಯದ/ದೇವರ/ಮತ್ತೊಂದರ ಸ್ವಭಾವವನ್ನು ಅರಿತುಕೊಳ್ಳುವ ಹಾದಿಯಲ್ಲಿ ಸಾರಭೂತವಲ್ಲದ್ದರ, ಅಗತ್ಯವಲ್ಲದ್ದರ ವರ್ಜನೆಯ ಪ್ರಕ್ರಿಯೆ.
ಈಗ ನೋಡಿ. ಹೀಗೆಲ್ಲ ಯೋಚಿಸಿದಾಗ ನನಗೆ ಇವೆಲ್ಲ ಸರ್ಕಸ್ಸುಗಳು ಮಜಾ ಅನ್ನಿಸಬಾರದೇಕೆ? ಈ ವಿವಿಧ ಆಧ್ಯಾತ್ಮಿಕ ಸ್ಕೂಲುಗಳೂ, ಅವುಗಳ ನಡುವಿನ ಪೈಪೋಟಿ, the hype, the buzz, the branding, ಅವರ ಸರಕುಗಳು, ಬಿತ್ತರಗಳು… ಇವೆಲ್ಲ ನನ್ನಲ್ಲಿ ವಿಸ್ಮಯ ಮೂಡಿಸುತ್ತವೆ. ಮತ್ತೆ ಇದೊಂದು ಸಾಂಗೋಪಾಂಗ ಪ್ರಕ್ರಿಯೆ: ಸದ್ಯಕ್ಕೆ ಆಧ್ಯಾತ್ಮದ ದರ್ಜೆ ಎಲ್ಲಿದೆಯೆಂದು (state of the art) ಸಾಕಷ್ಟು ಸಂಶೋಧನೆ ನಡೆಸಬೇಕು; ಈಗಿರುವುದಕ್ಕಿಂತ ಭಿನ್ನ ಹಾಗೂ ಅದಕ್ಕಿಂತ ಹೆಚ್ಚಿನ ಹೊಸ ಆಧ್ಯಾತ್ಮಿಕ ಥಿಯರಿಯನ್ನು ಬೆಳೆಸಬೇಕು; ಅದಕ್ಕೊಂದು ಆಕರ್ಷಕವಾದ ಹಾಗೂ ’ಕೂಲ್’ ಆದ ಹೆಸರು ಕೊಡಬೇಕು; ನಿಮ್ಮ ಹೊಸ ಶಾಸ್ತ್ರ ಏನೇ ಹೇಳಲಿ, ಸಾಕಷ್ಟು ಜನರಿಗೆ ಅದು ಆಕರ್ಷಣೀಯವಾಗಿ ತೋರುವಷ್ಟರ ಮಟ್ಟಿಗಾದರೂ ಅದನ್ನು ವ್ಯಾವಹಾರಿಕಗೊಳಿಸಬೇಕು; ಹಸ್ತಪತ್ರಿಕೆಗಳನ್ನು ಅಚ್ಚುಹಾಕಿಸಬೇಕು; (ಕಂಡಕಂಡ ಗಿಡಗಳ ಮೇಲೆ ಅವನ್ನು ಅಂಟಿಸಿ ಸುದ್ದಿ ಬಿತ್ತರಿಸಬೇಕು); ಬ್ರ್ಯಾಂಡ್ ವ್ಯಾಲ್ಯೂ ಹುಟ್ಟುಹಾಕಬೇಕು; ಸರಕುಗಳನ್ನು ಡಿಸೈನ್ ಮಾಡಬೇಕು; ಅದಕ್ಕಾಗಿ ಡಿಸೈನರುಗಳನ್ನೂ, ನಂತರ ಮಾರಲು ಫ಼್ರ್ಯಾಂಚೈಸೀಗಳನ್ನೂ ನೇಮಣೂಕಿ ಮಾಡಿಕೊಳ್ಳಬೇಕು; ಇವಕ್ಕೆಲ್ಲ ಜಾಹೀರಾತು ಮಾಡಲು ಜನರು ಬೇಕು; (ಮರೆಯಬಾರದ್ದೆಂದರೆ, ನಮ್ಮ ಸರಕುಗಳನ್ನು ಖರೀದಿಸಲು ಕೆಲವೇ ಕೆಲವು ಆಯ್ದ ಅಂಗಡಿಗಳಿವೆಯೆಂದೂ, ಅನಧಿಕೃತ ಜಾಗಗಳಲ್ಲಿ ನಮ್ಮ ಸರಕುಗಳನ್ನು ಕೊಳ್ಳುವುದರಿಂದ ಆಗುವ ದುಷ್ಪರಿಣಾಮಕ್ಕೆ ’ಸ್ಕೂಲ್’ ಕಾರಣವಲ್ಲವೆಂದೂ ಜನರಿಗೆ ಎಚ್ಚರಿಕೆ ಕೊಡಬೇಕು.) ಉಫ್… ಎಷ್ಟೊಂದು ಕೆಲಸ, ಏನು ತಾನು!
ಅದಕ್ಕೆ, ನೇತಿ ನೇತಿ ನೇತಿ ಎಂಬುದರ ಬದಲು ಈಗ ಹೊಸ ನಳನಳಿಸುವ ನುಡಿಗಟ್ಟು, buzz phrase ಏನೆಂದರೆ – ಇತ್ಯೇವ ಇತ್ಯೇವ ಇತ್ಯೇವ – ಇದು ಬೇಕು, ಅದು ಬೇಕು, ಓ ಮತ್ತದೂ ಬೇಕು, ಎಲ್ಲವೂ ಬೇಕು, ನಿಮ್ಮ ಅಂತಿಮ ಗುರಿ ಸಾಧಿಸಲು ಇದೆಲ್ಲವೂ ಬೇಡವೆ ಮತ್ತೆ? An all-embracing holistic approach!
ಇರಬಹುದೇನೋ. ಅಥವಾ… ಎಲ್ಲವೂ ಸರಿಯಾಗಿಯೇ ಇದೆ. ನನಗೇ ಏನೋ ಧಾಡಿಯಾಗಿದೆ. ಸುಮ್ಮನೆ ಅತಿಯಾಗಿ ಕಲ್ಪಿಸಿಕೊಳ್ಳುತ್ತಿದ್ದೇನೆ.
‘ನಾನು ಅತಿ ಸಂಪ್ರದಾಯವಾದಿ ಹಾಗೂ ಆಧ್ಯಾತ್ಮಕ್ಕೆ ಅತಿ ಶುದ್ಧವಾದ, ನೇಮಿಷ್ಠವಾದ ಅನುಸರಣವನ್ನು ಆರೋಪಿಸುತ್ತೇನಾದುದರಿಂದ ನನ್ನ ಯೋಚನೆಗಳು ಹೀಗಿವೆಯೇ?’
– example for an ambiguous sentence or an ambiguous question. Leads to confusion. Can you re-write this?
🙂
Tina.
ಚಕೋರ,
ನೇತ್ಯೇವ, ನೇತ್ಯಾವ, ನೇತ್ಯೇವ ಆಗಬೇಕಿತ್ತು ಬರಹ!
ಚೆನ್ನಾಗಿದೆ ನಿನ್ನ ಯೋಚನಾ ವೈಖರಿ. ಇಸ್ಕಾನಿನ ಉಡ್ ಪ್ರಾಡಕ್ಟನ್ನ ಹೊರಗಿನ ಏರಿಯಾಗಳಲ್ಲಿ ಹೊಸಹೊಸ ಔಟ್ ಲೆಟ್ ಗಳಲ್ಲಿ ಮಾರುವ ಯೋಜನೆ ಇತ್ತೀಚೆಗೆ ಚಾಲೂಗೊಂಡಿತು. ಆಗ ನಾನೂ ಹೆಚ್ಚುಕಡಿಮೆ ಹೀಗೇ ಯೋಚಿಸಿದ್ದೆ. ಆದರೆ ನನಗೆ ನಿನಗೆ ಇರುವ ಮೂಲಭೂತ ವ್ಯತ್ಯಾಸ- ನಾನು ಆಧ್ಯಾತ್ಮಿಕತೆಯನ್ನು ಬಹಳ ನೆಚ್ಚಿಕೊಂಡಿದ್ದೇನೆ ಮತ್ತು ಅದಕ್ಕೆ ಅತಿ ಶುದ್ಧವಾದ, ನೇಮಿಷ್ಠವಾದ ಅನುಸರಣವನ್ನು ಆರೋಪಿಸುವುದಿಲ್ಲ.
ಅದೇನೇ ಇರಲಿ, ನನಗೆ ನಿನ್ನ ಕನ್ನಡದ ಬಳಕೆ ಬಹಳಬಹಳ ಇಷ್ಟವಾಗುತ್ತದೆ ಅಂತ ಎರಡನೇ ಬಾರಿಗೆ ಹೇಳ್ತಿದ್ದೇನೆ.
ಹೀಗೇ ಓದಿನ ಸುಖವನ್ನು ಕೊಡುತ್ತಿರು.
-ಚೇತನಾ
ಅದು- ಫುಡ್ ಪ್ರಾಡಕ್ಟ್.
ಉಡ್ ಪ್ರಾಡಕ್ಟ್ ಔಟ್ ಲೆಟ್ಟೂ ಬರಬಹುದೇನೋ, ಸಧ್ಯದಲ್ಲೇ 😉
ನಿಮ್ಮ ಗೊಂದಲಕ್ಕೆ ನಂದೂ ವೋಟು! ಆಮೇಲೆ, ಟೀನಾ ಮೇಡಂ ಕೊಟ್ಟಿರೋ ಹೋಮ್ವರ್ಕಿಗೂ!;)
ನಂಗೆ ನಾನು ಇಂಥ ಕಡೆ ಹಾಡ್ತಿದೀನಿ,ಬಂದು ಕೇಳಿ-ಅನ್ನೋಕೂ ಮುಜುಗರ ಆಗುತ್ತೆ,ಹೆಂಗೆ ಆಧ್ಯಾತ್ಮಕ್ಕೆ ಇಷ್ಟೆಲ್ಲಾ ಮಾರ್ಕೆಟಿಂಗ್ ಮಾಡ್ತಾರೋ ಗೊತ್ತಾಗಲ್ಲ! ಅಂದ್ಹಾಗೆ ಚೇತನಾ ಮೇಡಂ, ಇಸ್ಕಾನಿನ ಫುಡ್ ಪ್ರಾಡಕ್ಟ್ಸ್ ಔಟ್ಲೆಟ್ಗಳು ಎಲ್ಲಿ ಸ್ವಲ್ಪ ಅಡ್ರೆಸ್ ಕಳ್ಸಿ!;p
Registration- Seminar on the occasion of kannadasaahithya.com 8th year Celebration
Chakora avare,
On the occasion of 8th year celebration of Kannada saahithya.
com we are arranging one day seminar at Christ college.
As seats are limited interested participants are requested to
register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
-kannadasaahithya.com balaga
Argh… ಒಮ್ಮೊಮ್ಮೆ ಇಂಗ್ಲಿಶ್ನಲ್ಲಿ ಏನೋ ಬರೆದೆಸೆದದ್ದನ್ನು ಕನ್ನಡದಲ್ಲಿ ಬರೆಯುವಾಗ ಎಷ್ಟೆಲ್ಲ ಕಷ್ಟವಾಗುತ್ತದೆ. Anyway, My bad. ನಾನು ಸ್ಪಷ್ಟವಾಗಿ ಬರೆಯಬೇಕಿತ್ತು.
ಚೇತನಾ: ಅಬ್ಬೆ, ನಾನು ಅಸ್ಪಷ್ಟವಾಗಿ ಬರೆದಿದ್ದೆ. ಈಗ ತಿದ್ದಿದ್ದೇನೆ. ನಾನು ಅಂಥವನಲ್ಲ ;). Actually, ಆ ಸಾಲುಗಳ ಅಗತ್ಯವೇ ಇರಲಿಲ್ಲ ಅನ್ನಿಸುತ್ತೆ. ಸುಮ್ಮನೆ ಶಬ್ದಗಳು ಚೆನ್ನಾಗಿವೆ ಅಂತ ಬರೆದಿರಬೇಕು ನಾನು. ಆ ತರದ್ದೆಲ್ಲ ಮಾಡೋದು ಭಾಳ ನಾನು.
ಟೀನಾ, ಶ್ರೀ (ಅಥವಾ ಟೀನಾಶ್ರೀ ಅಥವಾ ಶ್ರೀ ಟೀನಾ.. err..): ತಿದ್ದಿದ್ದೇನೆ. ಈಗ ನೋಡಿ.
ಜನರಲ್ಲಾಗಿ ಇನ್ನೊಂದು ಪಾಯಿಂಟನ್ನು ಕ್ಲಿಯರ್ ಮಾಡಬೇಕು. ನನಗೆ ಅಧ್ಯಾತ್ಮದ ಬಿಸಿನೆಸ್ ಬಗ್ಗೆ ಯಾವುದೇ ತಕರಾರಿಲ್ಲ. ಮಾರುವವರಿಗೆ ಕೊಳ್ಳೊವವರಿಗೆ ಇಬ್ಬರಿಗೂ ಅನುಕೂಲವಾಗಿರುವ ಇದೊಂದು ಒಳ್ಳೆಯ ಧಂದೆಯೇ ಸರಿ. ಎಷ್ಟೋ ಜನರಿಗೆ ಉಪಯುಕ್ತವಾಗುತ್ತಿರುವಂಥದ್ದು ಇದು. ಆದರೆ ಇದೊಂದು ಬಿಸಿನೆಸ್; ಅದಕ್ಕಿಂತ ಹೆಚ್ಚಿನ ಸುಮ್ಮಸುಮ್ಮನೆ ಎತ್ತರಿಸಿದ ಸ್ಥಾನವನ್ನು ನಾನು ಇವಕ್ಕೆ ಕೊಡುವುದಿಲ್ಲ. ಮತ್ತು ಹೆಚ್ಚಾಗಿ ಇವೆಲ್ಲ ವ್ಯಕ್ತಿಕೇಂದ್ರಿತವಾಗಿ ಬೆಳೆದಿರುವ ’ಕಲ್ಟ್’ಗಳು. ಇವರಿಗೆ ಮಾರುಕಟ್ಟೆಯ ಮೇಲೆ, ಜನರ ಸಂವೇದನೆಯ ಮೇಲೆ ಒಳ್ಳೆಯ ಹಿಡಿತವಿದೆ. ಒಳ್ಳೆಯದೆ. But if someone associates ‘exaltedness’ or ‘divineness’ (whatever they mean) to them, I only feel amused.
Chakora,
ideega sari hOytu. AdarU nAnu modalu hELida vyatyAsavE uLiyitu! 🙂
adhyatmada business bharjari beLe tegeyatte annOdanna chennAgE kanDideeni nAnu 😉 hOgli biDu. bEre ella vyavahAragaLA hAge idU ondu.
Sree, Jayanagar 4th block nalli. out let hesaru- HIGHER TASTE. (@ higher value!! 😉 )
Chakora
Thyanku. I take the liberties to tell you because I think u take them in good spirit!!!
Why am I telling you this?
Chetan,
hEEEEE Higher taste!!!! MAybe we have to reach piritual hieghts to taste it!! 🙂
-Tina
ಟೀನಾ:
I like liberty, especially their chappals. And, yes, I take good spirits also. 😀
ಚೇಚೈ (ಇದು ಮಲಯಾಳದ ಚೇಚಿ ತರ ಕೇಳ್ಸುತ್ತಲ್ಲ?): ಹೈಯರ್ ಟೇಸ್ಟ್. ವೆರಿ ಗುಡ್. ಇದೂ ಜಯನಗರ ಫ಼ೋರ್ತ್ ಬ್ಲಾಕಿನಲ್ಲಿದೆಯೆಂದ ಮೇಲೆ ನಾನು ಜುಲೈನಲ್ಲಿ ಬಂದಾಗ ಇದನ್ನು ನೋಡಿ ನನ್ನ ಹಳೆಯ ಥ್ರಿಲ್ ಅನುಭವಿಸುತ್ತೇನೆ.
😛
“ನನಗೆ ಅಧ್ಯಾತ್ಮದ ಬಿಸಿನೆಸ್ ಬಗ್ಗೆ ಯಾವುದೇ ತಕರಾರಿಲ್ಲ…. ಆದರೆ ಇದೊಂದು ಬಿಸಿನೆಸ್; ಅದಕ್ಕಿಂತ ಹೆಚ್ಚಿನ ಸುಮ್ಮಸುಮ್ಮನೆ ಎತ್ತರಿಸಿದ ಸ್ಥಾನವನ್ನು ನಾನು ಇವಕ್ಕೆ ಕೊಡುವುದಿಲ್ಲ….But if someone associates ‘exaltedness’ or ‘divineness’ (whatever they mean) to them, I only feel amused.” ಎತ್ತರಸಿದ ಸ್ಥಾನದಲ್ಲಿ ಇದ್ಡೀವಿ ಅಂತ ಹೇಳಿಕೊಂಡೇ ಬಿಸಿನಸ್ ನಡ್ಸೋವ್ರಲ್ಲವಾ? ನಂಗೆ ಹಾಗೆ ಹೇಳೋವ್ರಿಗಿಂತ ಅದನ್ನ ನಂಬುವವರ ಬಗ್ಗೆ ತಮಾಷೆ ಅನ್ನಿಸುತ್ತೆ!
ಚೀಚೈ;)
ಅಹಾ ನನ್ನ ಸೋಮಾರಿತನಕ್ಕಷ್ಟು! ೩ ಕಿ ಮೀ ದೂರದಲ್ಲಿ ಇಸ್ಕಾನ್ ಇರೋವಾಗ ಬೇರೆ ಔಟ್ಲೇಟ್ಟಿನ ಮಾಹಿತಿ ಕೇಳಿದ್ದಕ್ಕೆ ಸರಿಯಾಗಿ ಆಯ್ತ!:))
ನೇತಿಯೇ ಇರ್ಲಿ, ‘ಯೇತಿ’ಯೇ ಇರಲಿ, ದಾಡಿ ಮಾತ್ರ ಭಾಳ ಮುಖ್ಯ. ಅದಿಲ್ದನ, ನಿಮ್ಮ ಉತ್ಪನ್ನ ಖರ್ಚ ಆಗೂದುಲ್ಲ.
ಚಕೋರ,
lovely. ತುಂಬ ಇಷ್ಟ ಆಯಿತು.
ನಿಮ್ಮ ವಿಡಂಬನೆ ಮತ್ತು ವಸ್ತು ಸ್ಥಿತಿಗಳ ಬಗೆಗೆ ಇರುವ ಒಂದು ಹಗುರ ಒಳನೋಟ ತಮಾಶಿಯಿಂದಲೇ ಎಳೆದುಕೊಂಡು ಹೋಗಿ ಯೋಚಿಸಲು ಹಚ್ಚುತ್ತದೆ.
ನೇತಿ ಮತ್ತು ಇತ್ಯೇವ ಬಹಳ ಆಸಕ್ತಿಕರವಾದ ಸಂಯೋಜನೆ ಮತ್ತು ಗಹನವಾದ ವಿಷಯ. ಗೊತ್ತು ನೀವು ಮತ್ತೆ ಈ ಮಾತನ್ನು ಹಗೂರ ತೇಲಿ ಬಿಟ್ಟು ಇನ್ನು ನಾಲ್ಕು ಹೊಸ ಅಲೆ ಎಬ್ಬಿಸುತ್ತೀರಿ.
ಕೆಲವೊಮ್ಮೆ ವಿಷಾದನೀಯ ಪರಿಸ್ಥಿತಿಯಲ್ಲಿ ತೆಳುನಗುವೊಂದೇ ಆಸರೆ.
ತುಂಬ ಚಲೋ ಬರದೀರಿ.
ಥ್ಯಾಂಕ್ಯೂ.
ಪ್ರೀತಿಯಿಂದ
ಸಿಂಧು
ಸುನಾಥ್: ಹೌದು. ದಾಡಿ ಭಾಳ ಮುಖ್ಯ. ಅದಕ್ಕ ಭಾಳ ಕಿಮ್ಮತ್ತು.
ಸಿಂಧು:
Thanks for the nice words! ಹೌದು, ನೀವು ಹೇಳಿದಂತೆ ಇವು ಗಹನವಾದ ವಿಚಾರಗಳು. ಉಡಾಫೆಯಿಂದ ತಳ್ಳಿಹಾಕುವಂಥವಲ್ಲ. ನನಗನ್ನಿಸುತ್ತದೆ ಇಂಥ ಹಲವು ವಿಷಯಗಳ ಬಗ್ಗೆ ಬರೆಯಬೇಕಾದರೆ ಅವು ಅಪೇಕ್ಷಿಸುವ ಆಳ, ಸ್ಪಷ್ಟತೆ, ಸುಸಂಬದ್ಧತೆ (ಇನ್ನೂ ಸರಿಯಾಗಿ ಹೇಳಬೇಕೆಂದರೆ articulation)– ಇವೆಲ್ಲವನ್ನು ಸಾಧಿಸುವುದು ಕಷ್ಟ. ನನಗಂತೂ ಹೌದು. ಅದಕ್ಕೆ ವಿಡಂಬನೆಯ ಆಸರೆ ಪಡೆದು ವಿಚಾರದ ಒಂದೆರಡು ಎಳೆಗಳನ್ನಾದರೂ ಬಿಡಿಸುವ ಪ್ರಯತ್ನ.