ಧ್ರುಪದ

ನನ್ನ ಜೀಮೇಲ್‍ನ ಅಂಚೆಡಬ್ಬಿಯಲ್ಲಿ ಕೆಲವು ಹಳೆಯ ಪತ್ರಗಳನ್ನು ಹುಡುಕುತ್ತಿದ್ದೆ. ಏನೋ ಕಾರಣಕ್ಕೆ ’ಧ್ರುಪದ’ ಶಬ್ದವುಳ್ಳ ಪತ್ರಗಳನ್ನು ಹುಡುಕುವ ಆದೇಶ ಕೊಟ್ಟೆ. ನೋಡುತ್ತಿದ್ದಾಗ ತುಂಬಾ ಹಳೆಯ ಪತ್ರವೊಂದು ಸಿಕ್ಕಿತು. ಇದು ೨೦೦೫ರ ಮೇ, ೪ನೇ ತೇದಿಯಂದು ನಾನು ನನ್ನ ಆತ್ಮೀಯ ಮಿತ್ರನೊಬ್ಬನಿಗೆ ಬರೆದದ್ದು:

Nothing on earth is as divine and soothing as a Dhrupad rendition. This is specially true when someone from the Dagar family does it with utmost efficacy. I am thoroughly grateful!
I strongly recommend Dhrupad to you. It is the purest form of music.


ಇನ್ನೊಮ್ಮೆ ಮತ್ತೆಲ್ಲೋ ಹೀಗೆ ಬರೆದಿದ್ದೆ:

I am convinced that Dhrupad is the closest that man can ever reach in the quest to reality (or divinty or the ultimate truth or the transcendental or whatever you call it). I had told this before. And I am telling this again. Khayal, although great, shares a distant second place with literature and others.

***

ಒಂದೆರಡು ವರ್ಷಗಳ ಹಿಂದೆ ರಾಮ್ ಗುಹಾ ’ದ ಹಿಂದು’ ಪತ್ರಿಕೆಯಲ್ಲಿನ ತಮ್ಮ ಅಂಕಣದಲ್ಲಿ ಒಂದು ಲೇಖನ ಬರೆದಿದ್ದರು. ಅದರ ಹೆಸರು ’ದ ಗ್ರೇಟೆಸ್ಟ್ ಇಂಡಿಯನ್ಸ್’. ರಾಮ್ ಗುಹಾ ಅವರ ಪ್ರಕಾರ, ಭಾರತೀಯ ಶಾಸ್ತ್ರೀಯ ಸಂಗೀತಗಾರರು ಪರಿಪೂರ್ಣತೆಗೆ ಹಾತೊರೆಯುತ್ತಾರೆ, ಅಲ್ಲದೆ ಅವರಲ್ಲಿ ಕೆಲವರು ಪರಿಪೂರ್ಣತೆಯನ್ನು ಸಾಧಿಸಿಯೂ ಬಿಡುತ್ತಾರೆ. ಆ ಲೇಖನದ ಕೊಂಡಿ ಇಲ್ಲಿದೆ. ಅತ್ಯಂತ ಸೂಕ್ತವಾದ ಮಾತುಗಳು. ಆ ಲೇಖನದಲ್ಲಿ ರಾಮ್ ಗುಹಾ, ಕಾದಂಬರಿಕಾರ ಅಮಿತಾವ್ ಘೋಷ್‍ರನ್ನೂ ಉದ್ದರಿಸುತ್ತಾರೆ. ಘೋಷ್ ಪ್ರಕಾರ – “classical musicians are the only people in India who strive for perfection, and achieve it.” ಈ ಮಾತು ಸತ್ಯವೆಂದು ತೋಚಲು ಬಹಳ ಹೊತ್ತು ಹಿಡಿಯುವುದಿಲ್ಲ. ನಮ್ಮಲ್ಲಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಮಧ್ಯಮ — ಕಳಪೆ ಕೂಡ — ನಡೆಯುತ್ತದೆ. ಅಷ್ಟೇ ಅಲ್ಲ, ಹೆಚ್ಚು ಸಂದರ್ಭಗಳಲ್ಲಿ ಅದೊಂದೇ ನಡೆಯುತ್ತದೆ! ಶಾಸ್ತ್ರೀಯ ಸಂಗೀತದಲ್ಲಿ mediocrityಗೆ ಜಾಗವೇ ಇಲ್ಲ. ಶುದ್ಧತೆ, ಶ್ರೇಷ್ಠತೆ, ಪರಿಪೂರ್ಣತೆ, ಇಂಥ ಶಬ್ದಗಳು ಅಲ್ಲಿ ಸಾಮಾನ್ಯ.

ದೈವತ್ವದ ಸ್ವರೂಪ ಏನೇ ಇರಲಿ, ಹೇಗೇ ಇರಲಿ. ಅದಕ್ಕೆ ಲಗ್ಗೆ ಇಡುವವರಲ್ಲಿ, ಅದರ ಅತ್ಯಂತ ಸಮೀಪ ತಲುಪುವವರು ಶಾಸ್ತ್ರೀಯ ಸಂಗೀತಗಾರರು. ಅದರಲ್ಲೂ ಧ್ರುಪದೀಯರು! ಧ್ರುಪದದ ಪರಿಚಯ ನನಗಾದದ್ದು ಬಹಳ ತಡವಾಗಿ; ಸುಮಾರು ೪-೫ ವರ್ಷಗಳ ಹಿಂದೆಯಷ್ಟೆ. ಆದರೆ ಅದರ ಪರಿಚಯವಾದ ತಕ್ಷಣವೇ ನನಗೆ ಗೊತ್ತಾಯಿತು: ನನಗೆ ಬೇಕಾದದ್ದು ಇದೇ! ನಾನು ಮೊತ್ತಮೊದಲು ಕೇಳಿದ್ದು ವಸೀಫುದ್ದೀನ್ ಡಾಗರರ ಅಹೀರ್ ಭೈರವ್. I was thoroughly smitten!

ಶಾಸ್ತ್ರೀಯ ಸಂಗೀತದ ಅತ್ಯಂತ ಶುದ್ದ ರೂಪ ಧ್ರುಪದ. ಅದಕ್ಕೆ ಜನಪ್ರಿಯತೆಯ ಹಂಗಿಲ್ಲ. ಧ್ರುಪದೀಯರಿಗೆ ಯಾವುದೇ ತರಹದ ಆತುರವಿಲ್ಲ. ಏನನ್ನೋ ಸಾಧಿಸಿ ತೋರಿಸುವ ಗೋಜಿಲ್ಲ. ಚಮತ್ಕಾರಗಳ ಮೂಲಕ ಜನರ ಮನದಣಿಸುವ ಬಯಕೆಯಿಲ್ಲ. ಅದು ಧ್ಯಾನವಿದ್ದಂತೆ, ತಪಸ್ಸಿದ್ದಂತೆ. ತನ್ನ ಪಾಡಿಗೆ, ತನ್ನದೇ ವೇಗದಲ್ಲಿ ನಡೆಯಬೇಕಾದ್ದು. ನಿಧಾನವಾದ ದೀರ್ಘವಾದ ಆಲಾಪ. ಒಂದೊಂದೇ ಸ್ವರವನ್ನು ಕೈಗೆತ್ತಿಕೊಂಡು, ಅಳೆದು, ತೂಗಿ, ಹಿಂಜಿ, ಆ ಸ್ವರದ ಸಂಪೂರ್ಣ ಸ್ವರೂಪವನ್ನು ಆವಾಹಿಸಿಕೊಂಡು, ಅದು ಕೇಳುಗರೆದುರು ಪ್ರಕಟವಾಗುವಂತೆ ಮಾಡುತ್ತಾರೆ. ಧ್ರುಪದ ಕಲಾವಿದ ಪ್ರತಿ ಸ್ವರಕ್ಕೂ ಅದರ ಅನ್ಯೂನ ಸ್ಥಾನವನ್ನು ಕಂಡುಕೊಳ್ಳುತ್ತಾನೆ; ಪರಿಪೂರ್ಣ ಜೋಡಣೆಯನ್ನು ಕಟ್ಟುತ್ತಾನೆ.

ಮಾತು ಸಾಕು.

6 thoughts on “ಧ್ರುಪದ

 1. ಅಣ್ಣಾ, ಕ್ಶಮಿಸಿ..

  ಈ ಧ್ರುಪದ ಪದಕ್ಕೂ, ದ್ರುಪದ ಪದಕೊ ಇರುವ ವ್ಯತ್ಯಾಸವೇನು..ದ್ರುಪದ ಮಹಾಭಾರತದ ರಾಜ ಅಲ್ಲವೆ?

  ಹಾಗಾದರೆ ಧ್ರುಪದ ಏನು?

  ಇಂತಾ ಪೆದ್ದು ಪ್ರಶ್ನೆಗೆ ಕ್ಷಮೆ ಇರಲಿ..

  ಎಷ್ಟಾದರೂ ನಾನೊಬ್ಬ ಶೃಂಗಾರಕತೆಗಾರ..ಕಾಮ ಪ್ರಧಾನ ಬ್ಲಾಗ್ ಕಾರ..
  ನಂಗೇನು ಮಹಾ ಗೊತ್ತು?

  ಬನ್ನಿ, ನಿಮಗೆ ನನ್ನ ಬ್ಲಾಗಿಗೆ ಸ್ವಾಗತ..

  http://shrungara.wordpress.com
  http://shrungara.blogspot.com

  ಹೀಗೆ ಸ್ವಯಂ ಜಾಹೀರಾತು ಕೊಡುತ್ತಿರುವುದಕ್ಕೆ ಕ್ಷಮೆ!!

  ಇತಿ

  ನಿಮ್ಮ ಆತ್ಮೀಯ ಕತೆಗಾರ

 2. ಚಕೋರ, ಧೃಪದ್‌ ಭಾರತೀಯ ಸಂಗೀತದ ತಾಯಿ ಇದ್ದಂತೆ. ಇತ್ತೀಚೆಗೆ ಅಂದ್ರೆ ನಾಲ್ಕೈದು ವರ್ಷಗಳ ಹಿಂದೆ ಅನಾಹತ್ ಅಂತ ಒಂದು ಆರ್ಟ್‌ ಮೂವಿ ಬಂತು. ಅದ್ರಲ್ಲಿ ಉದಯ್ ಭವಾಲ್ಕರ್‍ ಧೃಪದ್ ಹಾಡಿದಾರಂತೆ. ಆದ್ರೆ ನೀವು ಕೇಳಿದ ಡಾಗರ್‍ ಬ್ರದರ್ಸ್‌ ಆಗ್ಲಿ ಗುಂಡೇಚಾ ಬ್ರದರ್ಸ್‌ ಸ್ಟೈಲ್‌ನಲ್ಲಿ ಅದು ಇಲ್ಲ ಅಂತ ಕೇಳಿದಿನಿ. ಸ್ವಲ್ಪ ಕೇಳುಗರನ್ನು ಆಕರ್ಷಿಸುವ ಹಾಗೆ ಕೊಂಚ ಮಾರ್ಪಾಡುಗಳು ಆ ಹಾಡುಗಾರಿಕೆಯಲ್ಲಿವೆಯಂತೆ. ಸಿಕ್ರೆ ನೋಡಿ. ಕೇಳಿ. ನನಗೂ ಆ ಸಿಡಿ ಸಿಕ್ಕಿಲ್ಲ. ಎನಿ ವೇ ನೀವು ಬರೆದ ಲೇಖನ ಇಷ್ಟವಾಯ್ತು

 3. ಚಕೋರ – ಹಿಂದುಸ್ತಾನಿ ಸಂಗೀತನ ಹಂಗ ಅಲ್ರೀ! ಧೃಪಾದ್ ಆಗ್ಲೀ.. ಖಯಾಲ್ ಆಗ್ಲೀ… ತರಣಾ ಆಗ್ಲೀ ಮನಸ್ಸಿಗೆ ವಂದೊಂದು ತರ ಖುಷಿ ಕೊಡತದ!
  ನನಗ ಅಷ್ಟ್ ಪರಿ ರಾಗ ಜ್ಞಾನ ಇಲ್ಲ ಖರೆ ಆದ್ರ ಭೀಮಸೇನ್ ಜೋಷಿ, ರಶೀದ್ ಖಾನ್ ಹಾಡೊದ ಕೇಳಕೊತ ಹಂಗ ಹೊತ್ತ ಹೋಗಿದ್ದ ಗೊತ್ತಾಗೋದಿಲ್ಲ!
  ಚಂದದ ಬರಹ!
  ಅನ್ನಂಗ FM ೧೦೦.೧೦ – ಶಾಸ್ತ್ರೀಯ ಸಂಗೀತದ ರೇಡಿಯೋ ಚ್ಯಾನೆಲ್. ಕೆಲವೊಮ್ಮೆ ಭಾಳ ಛೋಲೋ ಹಾಡು ಕೆಳ್ಳಿಕ್ಕೆ ಸಿಗ್ತಾವಾ!
  – ರಾಜೇಶ

 4. ಚಕೋರರೆ,

  ಧ್ರುಪದದ ನೆನಕೆ ಚೆನ್ನಾಗಿದೆ. ನಮ್ಮ ಸಂಗೀತ ಐನೂರು ವರ್ಷ ಹಿಂದೆ ಹೇಗಿದ್ದಿರಬೇಕು ಅನ್ನೋದಕ್ಕೆ ಒಂದು ಸಾಕ್ಷಿ ಧ್ರುಪದ.

  ನನಗೆ ಗೊತ್ತಿರೋ ಹಾಗೆ, ಧ್ರುಪದ ಅನ್ನೋದು ಧ್ರುವಪದ ಅನ್ನು ಪದದಿಂದಲೇ ಬಂದಿದೆ.

  ೧೬ನೇ ಶತಮಾನಕ್ಕೆ ಮೊದಲು ದಕ್ಷಿಣಾದಿ ಸಂಗೀತದಲ್ಲೂ ಕೃತಿ-ಕೀರ್ತನೆ-ವರ್ಣ-ಪದ ಮೊದಲಾದ ರೀತಿಯ ರಚನೆಗಳು ಜನಪ್ರಿಯವಾಗೋಕೆ ಮೊದಲು ಪ್ರಬಂಧಗಳೆಂಬ ರಚನೆಗಳನ್ನು ಹಾಡ್ತಿದ್ದರು. ಅಂತಹ ಪ್ರಬಂಧಗಳಲ್ಲಿ, ಧ್ರುವಪದವೂ ಒಂದು ಬಗೆಯದಾಗಿತ್ತು,

  -ನೀಲಾಂಜನ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s